Alia Bhatt: 'ಲವ್ ಅಂಡ್ ವಾರ್' ಚಿತ್ರದ ಆಲಿಯಾ ಭಟ್ ಲುಕ್ ಲೀಕ್- ರೆಟ್ರೋ ಶೈಲಿಗೆ ಫ್ಯಾನ್ಸ್ ಫಿದಾ!
Love and War: 'ಲವ್ ಅಂಡ್ ವಾರ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಿದ್ದು ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಶೂಟಿಂಗ್ ಸೆಟ್‌ನಿಂದ ನಟಿ ಆಲಿಯಾ ಭಟ್ ಅವರ ಫೋಟೋಗಳು ಸೋರಿಕೆಯಾಗಿದ್ದು ಸಿನಿಪ್ರಿಯರು ಮತ್ತಷ್ಟು ಎಕ್ಸೈಟ್ ಆಗಿದ್ದಾರೆ..

-

ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ 'ಲವ್ ಅಂಡ್ ವಾರ್' (Love and War) ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಿದ್ದು ಫ್ಯಾನ್ಸ್ ಕೂಡ ಕಾತುರದಿಂದ ಕಾಯು ತ್ತಿದ್ದಾರೆ. ಈ ನಡುವೆ ಶೂಟಿಂಗ್ ಸೆಟ್‌ನಿಂದ ನಟಿ ಆಲಿಯಾ ಭಟ್ (Alia Bhatt) ಅವರ ಫೋಟೋ ಗಳು ಸೋರಿಕೆಯಾಗಿದ್ದು ಸಿನಿಪ್ರಿಯರು ಮತ್ತಷ್ಟು ಎಕ್ಸೈಟ್ ಆಗಿದ್ದಾರೆ. ಲೀಕ್ ಆದ ಫೋಟೋ ಗಳಲ್ಲಿ, ಆಲಿಯಾ ಭಟ್ ಅವರು 90ರ ದಶಕದ ರೆಟ್ರೋ ಸ್ಟೈಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ಲವ್ ಆ್ಯಂಡ್ ವಾರ್ ಇತ್ತೀಚಿನ ದಿನಗಳಲ್ಲಿ ಸಖತ್ ಸುದ್ದಿಯಲ್ಲಿದೆ. ಸದ್ಯ ನಟಿ ಆಲಿಯಾ ಭಟ್ ಫೋಟೋ ವೈರಲ್ ಆಗುತ್ತಿದ್ದಂತೆ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ ವೈರಲ್ ಆದ ಫೋಟೋ ದಲ್ಲಿ ಆಲಿಯಾ ಸೀರೆಯುಟ್ಟು ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿ ದ್ದಾರೆ. ಜೊತೆಗೆ 'ಬನ್' ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡ ಆಲಿಯಾ ಅವರ ಈ ಲುಕ್, 1960 ಮತ್ತು 70 ರ ದಶಕದ ಬಾಲಿವುಡ್‌ನ ರೆಟ್ರೋ ಶೈಲಿಯನ್ನು ನೆನಪಿಸುತ್ತದೆ.
ಇದನ್ನೂ ಓದಿ:Coolie Movie: ಕಿರುತೆರೆಗೆ ಎಂಟ್ರಿ ಕೊಟ್ಟ ʼಕೂಲಿʼ; ಎಲ್ಲಿ ಯಾವಾಗ ನೋಡಬಹುದು ರಜನಿಕಾಂತ್ ಚಿತ್ರ?
ಈ ಲುಕ್, 'ಲವ್ ಅಂಡ್ ವಾರ್' ಕೂಡ ಬನ್ಸಾಲಿ ಅವರ ವಿಶಿಷ್ಟ ಶೈಲಿಯ ಒಂದು ಐತಿಹಾಸಿಕ ಕಾಲಘಟ್ಟದ ಕಥೆ ಆಗಿರಬಹುದು ಎಂಬ ಸುಳಿವು ನೀಡಿದೆ. ಲವ್ ಅಂಡ್ ವಾರ್' ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳು ಇದ್ದು ಆಲಿಯಾ ಭಟ್ ಅವರೊಂದಿಗೆ ಅವರ ಪತಿ ರಣಬೀರ್ ಕಪೂರ್ (Ranbir Kapoor) ಮತ್ತು ನಟ ವಿಕ್ಕಿ ಕೌಶಲ್ (Vicky Kaushal) ಮುಖ್ಯ ಪಾತ್ರಗಳಲ್ಲಿ ನಟಿಸು ತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಕಥಾ ವಿವರಗಳು ಅಷ್ಟಾಗಿ ತಿಳಿಯದೇ ಇದ್ದರೂ ಈ ಮೂವರು ಸ್ಟಾರ್ ನಟರ ಕಾಂಬಿನೇಷನ್ ಸಿನಿ ಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರವು ಮಾರ್ಚ್ 20, 2026 ರಂದು ಬಿಡುಗಡೆಯಾಗಲು ಸಜ್ಜಾಗಿದೆ ಎನ್ನಲಾಗಿದೆ.