ಜೀ ಕನ್ನಡ ವಾಹಿನಿಯ (Zee Kannada) ಅತಿಹೆಚ್ಚು ಟಿಆರ್‌ಪಿ ಹೊಂದಿರುವ (TRP) ಧಾರಾವಾಹಿಯಲ್ಲಿ (Kannada Serial) ಪ್ರಮುಖ ಪಾತ್ರಧಾರಿ ಆಗಿರುವ ರಿಯಾ ಅಲಿಯಾಸ್ ಜಯರಾಮ್ ಅಂಕಿತಾ (Ankitha jayarama) ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಇವರು ಬಾಲನಟಿಯಾಗಿ ಮಿಂಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan), ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಶಶಿಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆಗೆ ಅಂಕಿತಾ ಜಯರಾಮ್ ತೆರೆ ಹಂಚಿಕೊಂಡಿದ್ದಾರೆ.
‘ಕರ್ಣ’ ಧಾರಾವಾಹಿಯ ರಿಯಾ ಪಾತ್ರದಲ್ಲಿ ನಟನೆ
ಕನ್ನಡ ಚಿತ್ರರಂಗದಲ್ಲಿ ಹಾಗೂ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಬಾಲ ಕಲಾವಿದೆ ಅಂಕಿತಾ ಜಯರಾಮ್. ‘ಯುವರಾಜ’, ಡಾಲಿ ನಟನೆಯ ‘ರತ್ನನ್ ಪ್ರಪಂಚ’, ಶಿವರಾಜ್ ಕುಮಾರ್ ಜೊತೆಗೆ ‘ವೇದ’, ‘ಶೋಕಿವಾ’, ಶ್ರೀಮುರಳಿಯ ‘ಭರಾಟೆ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸ್ತುತ ‘ಕರ್ಣ’ ಧಾರಾವಾಹಿಯ ರಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 95% ಅಂಕಗಳನ್ನ ಗಳಿಸಿದ್ದ ಅಂಕಿತಾ ಸೆಕೆಂಡ್ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡಿದ್ದಾರೆ. ಕನ್ನಡ – 97,ಇಂಗ್ಲೀಷ್ – 94, ಬಿಸಿನೆಸ್ ಸ್ಟಡೀಸ್ – 98, ಅಕೌಂಟೆನ್ಸಿ – 96, ಸ್ಟಾಟಿಸ್ಟಿಕ್ಸ್ – 100, ಕಂಪ್ಯೂಟರ್ ಸೈನ್ಸ್ – 94, ಒಟ್ಟಾರೆ 600 ಅಂಕಗಳಿಗೆ 579 ಅಂಕಗಳನ್ನ ಗಳಿಸುವ ಮೂಲಕ 97% ಫಲಿತಾಂಶ ಗಳಿಸಿದ್ದಾರೆ ಅಂಕಿತಾ ಜಯರಾಮ್.
ಅಂಕಿತಾ ಅವರ ತಂದೆ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗಳಿಂದ ಅಪ್ಪನಿಗೆ ಹುಟ್ದಬ್ಬದ ಕಾಣಿಕೆ. ಡಿಸ್ಟಿಂಕ್ಷನ್ 97%. ಕಂಡ ಕನಸು ನನಸಾದ ಸುದಿನ.
ಇದನ್ನೂ ಓದಿ: Thalapathy Vijay: ‘ಜನ ನಾಯಗನ್’ ದೃಶ್ಯ ಲೀಕ್: ಅಭಿಮಾನಿಗಳು ಗರಂ
ಭಗವಂತನ ಗುರು ರಾಯರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ದ್ವಿತೀಯ ಪಿಯುಸಿಯಲ್ಲಿ ಶೇಕಡ 97% ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದೆ’’ಎಂದು ಅಂಕಿತಾ ಜಯರಾಮ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ ಅಂಕಿತಾ ಜಯರಾಮ್.