ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karna Serial: ಫೇಲ್​ ಆಗಿದ್ದ ನಿಧಿ ಈಗ ಸರ್ಜನ್; ಸಂಜಯನ ಮುಂದಿನ ಪ್ಲ್ಯಾನ್‌ ಏನು?

Karna Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರ್ಣ' ಧಾರಾವಾಹಿ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ.ಇಷ್ಟು ದಿನ ಸಜ್ಜನನಂತೆ ನಟಿಸುತ್ತಿದ್ದ ಸಂಜಯ್ ಅಸಲಿ ಬಣ್ಣ ಈಗ ಇಡೀ ಕುಟುಂಬದ ಮುಂದೆ ಬಯಲಾಗಿದೆ.ಸಂಜಯ್‌ನ ಸಂಚಿನಿಂದ ತಾನು ಫೇಲ್ ಆಗಿದ್ದೇನೆಂದು ಕುಸಿದು ಹೋಗಿದ್ದ ನಿಧಿಗೆ ಈಗ ನ್ಯಾಯ ಸಿಕ್ಕಿದೆ. ಎಲ್ಲರ ಮುಂದೆ ಸತ್ಯವನ್ನು ಬಯಲು ಮಾಡಿದ ಕರ್ಣ, ನಿಧಿಯೇ ಕಾಲೇಜಿನ ಟಾಪರ್ ಎಂದು ಸಾಬೀತುಪಡಿಸಿದ್ದಾನೆ.

ಕರ್ಣ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada Serial) ಪ್ರಸಾರವಾಗುತ್ತಿರುವ 'ಕರ್ಣ' (Karna Serial Kannada) ಧಾರಾವಾಹಿ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ.ಇಷ್ಟು ದಿನ ಸಜ್ಜನನಂತೆ ನಟಿಸುತ್ತಿದ್ದ ಸಂಜಯ್ (sanjay) ಅಸಲಿ ಬಣ್ಣ ಈಗ ಇಡೀ ಕುಟುಂಬದ ಮುಂದೆ ಬಯಲಾಗಿದೆ.ಇದರ ಬೆನ್ನಲ್ಲೇ ನಿಧಿ ಪರೀಕ್ಷೆಯಲ್ಲಿ ಸೋಲಲಿ ಎಂದು ಸಂಜಯ ಹೊಂಚು ಹಾಕಿದ್ದನು. ಆದರೆ ನಿಧಿಯ ಗೆಲುವಿನಿಂದ (Nidhi) ಸಂಜಯನ ಪ್ಲಾನ್‌ಗಳು ಉಲ್ಟಾ ಹೊಡೆದಿವೆ.

ಕರ್ಣ ಈಗ ಮೊದಲಿನಂತಿಲ್ಲ

ಕರ್ಣ ಈಗ ಮೊದಲಿನಂತಿಲ್ಲ, ಅಪ್ಪನ ಮೋಸಾಟ ಅವನ ಗಮನಕ್ಕೆ ಬಂದಿದೆ. ಸಖತ್‌ ಚಮಕ್‌ ಕೊಡ್ತಾ ಇದ್ದಾನೆ ಕರ್ಣ. ಕರ್ಣ ತನ್ನ ಚಾಣಾಕ್ಷತನದಿಂದ ಸಂಜಯ್ ಮಾಡಿದ್ದ ಪ್ರತಿಯೊಂದು ಮೋಸವನ್ನೂ ಸಾಕ್ಷಿ ಸಮೇತ ಹಿಡಿದಿದ್ದಾನೆ. ಸಂಜಯ್ ವೃತ್ತಿಯಲ್ಲೂ ದೊಡ್ಡ ವಂಚನೆ ಮಾಡಿದ್ದಾನೆ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: Abhishek Bachchan : AI ಪ್ರತಿಯೊಬ್ಬ ನಟನನ್ನೂ ಹೆದರಿಸುವಂತಿದೆ; ಅಭಿಷೇಕ್ ಬಚ್ಚನ್

ಅಕ್ಕ ನಿತ್ಯಾ ಹೆಮ್ಮೆ

ಸಂಜಯ್‌ನ ಸಂಚಿನಿಂದ ತಾನು ಫೇಲ್ ಆಗಿದ್ದೇನೆಂದು ಕುಸಿದು ಹೋಗಿದ್ದ ನಿಧಿಗೆ ಈಗ ನ್ಯಾಯ ಸಿಕ್ಕಿದೆ. ಎಲ್ಲರ ಮುಂದೆ ಸತ್ಯವನ್ನು ಬಯಲು ಮಾಡಿದ ಕರ್ಣ, ನಿಧಿಯೇ ಕಾಲೇಜಿನ ಟಾಪರ್ ಎಂದು ಸಾಬೀತುಪಡಿಸಿದ್ದಾನೆ.

ಕರ್ಣ ನಿಧಿಯ ಬಳಿ ಬಂದು, ನೀವು ನಾಳೆಯಿಂದ ಸರ್ಜನ್​ ಆಗಿ ಜಾಯಿನ್​ ಆಗಬಹುದು ಎಂದಿದ್ದಾನೆ. ಇದರಿಂದ ನಿಧಿ ಉಬ್ಬಿ ಹೋಗಿದ್ದಾಳೆ. ತಂಗಿಯ ಸಾಧನೆಯನ್ನು ನೋಡಿ ಅಕ್ಕ ನಿತ್ಯಾ ಹೆಮ್ಮೆಯಿಂದ ಖುಷಿ ಪಟ್ಟಿದ್ದಾಳೆ . ಇಡೀ ಜಗತ್ತೇ ನೀನು ಫೇಲ್ ಆಗ್ತೀಯಾ ಅಂದರೂ ನಾನು ನಂಬುತ್ತಿರಲಿಲ್ಲ ಎಂದಿದ್ದಾಳೆ. ಈ ಗೆಲುವಿನಿಂದ ನಿಧಿ ಮತ್ತು ನಿತ್ಯಾ ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

ಸಂಜಯ ಮುಂದಿನ ದಿನಗಳಲ್ಲಿ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ದೊಡ್ಡ ಕುತೂಹಲ ಮೂಡಿಸಿದೆ.ನಿಧಿಯ ಜೀವನದಲ್ಲಿ ಯಾವ ಹೊಸ ತಿರುವುಗಳು ಬರಲಿವೆ ಎಂಬುದು ವೀಕ್ಷಕರಲ್ಲಿ ಇರೋ ಕುತೂಹಲ.



ಸಂಜಯ್‌ಗೆ ಕರ್ಣನ ಆಯ್ಕೆ

ಸಂಜಯ್ ಮಾಡಿದ ಮೆಡಿಕಲ್ ವಂಚನೆಗೆ ಅವನನ್ನು ಶಾಶ್ವತವಾಗಿ ಡಿಬಾರ್ ಮಾಡುವುದು ಮತ್ತು ಜೈಲಿಗೆ ಕಳುಹಿಸುವುದು ಎರಡನೇ ದಾರಿ: ಈಗ ಮಾಡಿರುವ ಪದವಿಯನ್ನು ರದ್ದುಗೊಳಿಸಿ, ಮೊದಲ ವರ್ಷದ ಎಂಬಿಬಿಎಸ್ನಿಂದ ಮತ್ತೆ ಓದುವುದನ್ನು ಆರಂಭಿಸುವುದು. ಈ ಎರಡು ಆಯ್ಕೆಗಳನ್ನು ಕೇಳಿ ಸಂಜಯ್ ಸಂಪೂರ್ಣವಾಗಿ ಕಂಗಾಲಾಗಿದ್ದಾನೆ.

ಇದನ್ನೂ ಓದಿ: Muddhu Sose Serial: ಮುದ್ದು ಸೊಸೆ ಮಹಾಸಂಚಿಕೆ; ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಕರ್ಣ' ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟ ಕಿರಣ್ ರಾಜ್ (ಕರ್ಣ) ಇದ್ದಾರೆ. ಇವರೊಂದಿಗೆ ಭವ್ಯಾ ಗೌಡ (ನಿಧಿ) ಮತ್ತು ನಮ್ರತಾ ಗೌಡ (ನಿತ್ಯಾ) ನಾಯಕಿಯರಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಹಿರಿಯ ನಟ ಟಿ.ಎಸ್. ನಾಗಾಭರಣ ಮತ್ತು ಆಶಾ ರಾಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Yashaswi Devadiga

View all posts by this author