ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿ (Karna Serial) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ನಿತ್ಯಾಳಿಂದ (Nithya) ಒಲವ ಗುಟ್ಟು ರಟ್ಟಾಗಿದೆ. ದೇವರೇ ಮಾಡಿದ ಜೋಡಿ ಒಂದಾಗಿದೆ. ತ್ಯಾಗ ಮಾಡಿದ ನಿಧಿಗೆ ಅಕ್ಕ ನಿತ್ಯಾ ಕರ್ಣನನ್ನು ಬಿಟ್ಟುಕೊಟ್ಟು ಒಂದಾಗುವಂತೆ ಮಾಡಿದ್ದಾಳೆ. ಕುತಂತ್ರಿ ರಮೇಶ್‌ನಿಂದಾಗಿ (Ramesh) ನಿಧಿ ಹಾಗೂ ಕರ್ಣ ತಮ್ಮ ಪ್ರೀತಿಯನ್ನ ಉಳಿಸಿಕೊಳ್ಳಲು ಪರದಾಡುವಂತಾಗಿತ್ತು. ಇದೆಲ್ಲದಕ್ಕೂ ಈಗ ಫುಲ್ ಸ್ಟಾಪ್ ಇಡುವಂತಾಗಿದೆ.
ರಮೇಶ್ ಹೀರೊ ಹೀರೋಯಿನ್ ವಿರುದ್ಧ ಆಗಾಗ್ಗ ರಣತಂತ್ರ ರೂಪಿಸುತ್ತಿರುತ್ತಾನೆ. ಅರ್ಜುನ್ ಎಂಬ ಹೊಸ ಬಾಣ ಬಿಟ್ಟಿದ್ದ. ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿದ್ದಾರೆ ಅಂತ ಗೊತ್ತಿದ್ದರೂ ರಮೇಶ್ ನಿಧಿಗಾಗಿ ಹುಡುಗನ ಕರೆಸಿದ್ದ. ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದ. ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು. ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದ. ನಿಧಿ ಕೂಡ ರಮೇಶ್ ಕೆಟ್ಟ ಬುದ್ದಿಯನ್ನು ಅರಿತುಕೊಂಡಿದ್ದಳು.
ಇದನ್ನೂ ಓದಿ: Monalisa Bhosle: ಕುಂಭಮೇಳದ ಹುಡುಗಿ ಮೊನಾಲಿಸಾ ಭೋಸ್ಲೆ ಗರ್ಭಿಣಿ; ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್
ನಿತ್ಯಾಳಿಂದ ರಟ್ಟಾಯ್ತು ಒಲವ ಗುಟ್ಟು!
ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ನಿಧಿಗೆ ಮದುವೆ ತಯಾರಿ ಮಾಡಿದ್ದಾಳೆ ನಿತ್ಯಾ. ಆದರೆ ನಿಧಿ ಅಕ್ಕ ನಿನ್ನ ಖುಷಿ ನನಗೆ ತುಂಬಾ ಮುಖ್ಯ ಎನ್ನುತ್ತಾಳೆ. ಅತ್ತ ಮದುಮಗನ ಬಳಿ ನಿತ್ಯಾ, ನಿಧಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತೀರಾ ಅಲ್ವಾ? ಎಂದು ಕೇಳಿದ್ದಾಳೆ. ಬಳಿಕ ಅರ್ಜುನ್ ಇನ್ನೇನು ನಿಧಿಗೆ ತಾಳಿ ಕಟ್ಟಬೇಕು ಅನ್ನೋ ಅಷ್ಟರಲ್ಲಿ ನಿತ್ಯಾ ಮದುವೆ ನಿಲ್ಲಿಸಿದ್ದಾಳೆ.
ಕರ್ಣ ಹಾಗೂ ನಿಧಿ ಪ್ರೀತಿ ವಿಚಾರ ರಿವೀಲ್ ಮಾಡಿದ್ದಾಳೆ. ತನಗೋಸ್ಕರ ಅವರಿಬ್ಬರ ತ್ಯಾಗವನ್ನು ಹೇಳಿದ್ದಾಳೆ.
ಇದನ್ನೂ ಓದಿ: Dhurandhar Movie: ಲೈವ್ ಶೋ ವೇಳೆ ಮೈ ಮೇಲೆ ನೀರು ಸುರಿದುಕೊಂಡ ಗಾಯಕಿ; ಭಾರಿ ಟ್ರೋಲ್
ಮಗು ಕೂಡ ತೇಜಸ್‌ದು, ನಾನು ಕರ್ಣನನ್ನು ಮದುವೆನೇ ಆಗಿಲ್ಲ ಎಂದು ಹೇಳಿದ್ದಾಳೆ ನಿತ್ಯಾ. ಈ ಸತ್ಯ ಇಡೀ ಮನೆಗೆ ಘಾಸಿ ಉಂಟು ಮಾಡಿದೆ. ರಮೇಶ್ ಈ ಮತ್ತೆ ಸೋತಿದ್ದಾನೆ. ಕರ್ಣ ಹಾಗೂ ನಿಧಿ ಜೋಡಿ ಒಂದಾಗೋ ಸಮಯ ಬಂದಿದೆ.