ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KTPA: ನಟಿ ಹಂಸ, ಧ್ರುವಂತ್ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ ಗರಂ!

Kannada Serial Artist: ನಟಿ ಹಂಸ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ಅಭಿನಯಿಸಿದರು. ಸಂಭಾವನೆ ನೀಡಿಲ್ಲ ಎಂದು ಹಂಸ ಪ್ರತಾಪ್ ಆರೋಪಿಸಿದ್ದರು. 'ಬಿಗ್ ಬಾಸ್' ಸ್ಪರ್ಧಿ ಧ್ರುವಂತ್ ರಹಗಾರ ಸುಂದರ್ ಸಹ ನಿರ್ಮಾಪಕರ ವಿರುದ್ಧ ಮಾತನಾಡಿದ್ದರು. ಕಿರುತೆರೆ ನಿರ್ಮಾಪಕರ ಸಂಘ ತೀವ್ರವಾಗಿ ಖಂಡಿಸಿದೆ ಕಿರುತೆರೆ ನಿರ್ಮಾಪಕರ ಸಂಘ (ಕೆಟಿಪಿಎ) ಈ ಬಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿದ್ದು, ನಟಿ ಹಂಸಾ , ಬಿಗ್​​ಬಾಸ್ ಸ್ಪರ್ಧಿ ಧ್ರುವಂತ್, ಬರಹಗಾರ ಸುಂದರ್ ಇನ್ನಿತರರ ಹೇಳಿಕೆಗಳನ್ನು ಖಂಡಿಸಿದೆ.

ಧ್ರುವಂತ್‌

ಕಿರುತೆರೆ ನಿರ್ಮಾಪಕರ ವಿರುದ್ಧ ಕಿರುತೆರೆ ಕಲಾವಿದರು (Karnataka Television Producers ) ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ನೀಡುತ್ತಿರುವ ಹೇಳಿಕೆಗಳನ್ನು ಕರ್ನಾಟಕ ಕಿರುತೆರೆ ನಿರ್ಮಾಪಕರ ಸಂಘ (KTPA) ತೀವ್ರವಾಗಿ ಖಂಡಿಸಿದೆ ಕಿರುತೆರೆ ನಿರ್ಮಾಪಕರ ಸಂಘ (ಕೆಟಿಪಿಎ) ಈ ಬಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿದ್ದು, ನಟಿ ಹಂಸಾ (Hamsa), ಬಿಗ್​​ಬಾಸ್ ಸ್ಪರ್ಧಿ ಧ್ರುವಂತ್, ಬರಹಗಾರ ಸುಂದರ್ (Sundar) ಇನ್ನಿತರರ ಹೇಳಿಕೆಗಳನ್ನು ಖಂಡಿಸಿದೆ.

ಸಂಭಾವನೆ ನೀಡಿಲ್ಲ

ನಟಿ ಹಂಸ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ಅಭಿನಯಿಸಿದರು. ಸಂಭಾವನೆ ನೀಡಿಲ್ಲ ಎಂದು ಹಂಸ ಪ್ರತಾಪ್ ಆರೋಪಿಸಿದ್ದರು. 'ಬಿಗ್ ಬಾಸ್' ಸ್ಪರ್ಧಿ ಧ್ರುವಂತ್ ರಹಗಾರ ಸುಂದರ್ ಸಹ ನಿರ್ಮಾಪಕರ ವಿರುದ್ಧ ಮಾತನಾಡಿದ್ದರು. ಕಿರುತೆರೆ ನಿರ್ಮಾಪಕರ ಕುರಿತು ಅಗೌರವದಿಂದ ಮಾತನಾಡುವುದು, ಕೀಳುಮಟ್ಟದ ಭಾಷೆ ಬಳಸುವುದು ಮತ್ತು ಸಾರ್ವಜನಿಕವಾಗಿ ಆರೋಪ ಮಾಡುವುದು ಒಪ್ಪಲಾಗದ ಸಂಗತಿ ಎಂದು ಸಂಘ ತಿಳಿಸಿದೆ.

ಇದನ್ನೂ ಓದಿ: CM Vijay: ದಳಪತಿ ಶಿಸ್ತಿಗೆ ಈ ಖ್ಯಾತ ನಿರ್ಮಾಪಕಿ ಫಿದಾ! 'ಬಿಗಿಲ್' ದಿನಗಳು ಹೇಗಿದ್ದವು?

ನಿರ್ಮಾಪಕರೊಬ್ಬರ ವಿರುದ್ಧ ಟಿವಿ ಮಾಧ್ಯಮಗಳಲ್ಲಿ ಕಿರುತೆರೆ ನಟಿ ಹಂಸ ಬಳಸಿದ ಭಾಷೆ ಅಸಮಂಜಸವಾಗಿದೆ. ಯಾವುದೇ ವೈಯಕ್ತಿಕ ಅಥವಾ ವೃತ್ತಿಪರ ಸಮಸ್ಯೆಗಳಿದ್ದರೂ ಅದನ್ನು ಸಂಘದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕವಾಗಿ ನಿರ್ಮಾಪಕರನ್ನು ನಿಂದಿಸುವ ಅಗತ್ಯ ಇರಲಿಲ್ಲ ಹಿರಿಯ ಕಲಾವಿದರು ಸಹ ಒಂದೊಮ್ಮೆ ಹೊಸ ಕಲಾವಿದರೇ ಆಗಿದ್ದರು. ಅವರಿಗೂ ಆಗ ನಿರ್ಮಾಪಕರು ಅವಕಾಶ ನೀಡಿದ್ದರು.

Karnataka Television Producers association warned Actors Over Comments Against Producers

ಕಾಲ ಕಾಲಕ್ಕೆ ಹೊಸ ಕಲಾವಿದರಿಗೆ ಅವಕಾಶ ನೀಡುವುದು ನಿರ್ಮಾಪಕರ ಜವಾಬ್ದಾರಿ ಅದನ್ನೇ ಮಾಡಲಾಗಿದೆ. ಇಂದಿನ ಹಿರಿಯ ಕಲಾವಿದರೂ ಒಂದು ಕಾಲದಲ್ಲಿ ಹೊಸಬರೇ ಆಗಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ನಿರ್ಮಾಪಕರ ಜವಾಬ್ದಾರಿ ಮತ್ತು ಪರಂಪರೆಯ ಭಾಗವಾಗಿದೆ. ಕಾರ್ಪೊರೇಟ್ ವ್ಯವಸ್ಥೆ ಇಲ್ಲದ ಕಾಲದಿಂದಲೂ ನಿರ್ಮಾಪಕರು ನೂರಾರು ಕಲಾವಿದರಿಗೆ ಅವಕಾಶ ನೀಡಿ ಬೆಳೆಸಿದ್ದಾರೆ.

ಆ ಸಂಪ್ರದಾಯ ಇಂದಿಗೂ ಮುಂದುವರಿದಿದೆ ದಿಲೀಪ್ ರಾಜ್ ಸಾವಿಗೆ ವಾಹಿನಿಗಳು ನೀಡಿರುವ ಒತ್ತಡ ಕಾರಣ ಎನ್ನಲಾಗಿತ್ತು, ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಘ, ‘ಆಧಾರರಹಿತವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದು ತಪ್ಪು.

ಮುಂದಿನ ದಿನಗಳಲ್ಲಿ ನಿರ್ಮಾಪಕರ ವಿರುದ್ಧ ಇದೇ ರೀತಿಯ ಅವಹೇಳನಕಾರಿ ಹೇಳಿಕೆಗಳು, ಕೀಳುಮಟ್ಟದ ಭಾಷೆ ಅಥವಾ ಅಗೌರವದ ವರ್ತನೆ ಮುಂದುವರಿದರೆ, ಸಂಬಂಧಪಟ್ಟ ಕಲಾವಿದರ ವಿರುದ್ಧ ಸಂಘದ ನಿಯಮಾವಳಿಯ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆಟಿಪಿಎ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Oh Sukumari: ಒಟಿಟಿಗೆ ಬರಲಿದೆ ರೊಮ್ಯಾಂಟಿಕ್‌ ಕಾಮಿಡಿ ಮೂವಿ ʻಓ ಸುಕುಮಾರಿʼ!

ಚಿತ್ರೋದ್ಯಮ ಮತ್ತು ಕಿರುತೆರೆ ಕ್ಷೇತ್ರದಲ್ಲಿ ನಿರ್ಮಾಪಕರು ಹಾಗೂ ಕಲಾವಿದರು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಾಗಿದ್ದು, ಯಾವುದೇ ಸಮಸ್ಯೆ ಎದುರಾದರೂ ಅದನ್ನು ಸಂಘದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಕರ್ನಾಟಕ ಕಿರುತೆರೆ ನಿರ್ಮಾಪಕರ ಸಂಘ ಮನವಿ ಮಾಡಿದೆ.

Yashaswi Devadiga

View all posts by this author