ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karthi: ಎರಡೇ ವಾರಕ್ಕೆ ಒಟಿಟಿಗೆ ಬಂತು ಕಾರ್ತಿ ಸಿನಿಮಾ! ಸ್ಟ್ರೀಮಿಂಗ್‌ ಎಲ್ಲಿ?

Karthi: ಕಾರ್ತಿ ನಟಿಸಿದ 'ವಾ ವಾಥಿಯಾರ್' ಚಿತ್ರವು ಸಂಕ್ರಾಂತಿ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಒಂದು ಕಡೆ ತಮಿಳಿನದ್ದೇ ಚಿತ್ರ ''ಪರಾಶಕ್ತಿ'', ಮತ್ತೊಂದು ಕಡೆ ಚಿರಂಜೀವಿ ಅಭಿನಯದ ''ಮನ ಶಂಕರ ವರ ಪ್ರಸಾದ ಗಾರು'', ಇನ್ನೊಂದು ಕಡೆ ''ದಿ ರಾಜಾ ಸಾಬ್''.. ಈ ಎಲ್ಲ ಚಿತ್ರಗಳ ಅಬ್ಬರದ ನಡುವೆ ''ವಾ ವಾಥಿಯಾರ್'' ಹೇಳ ಹೆಸರಿಲ್ಲದಂತಾಯ್ತು. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡ್ತಿದೆ.

ಕಾರ್ತಿ ಸಿನಿಮಾ

ಕಾರ್ತಿ (Karthi) ನಟಿಸಿದ 'ವಾ ವಾಥಿಯಾರ್' (Vaa Vaathiyaar) ಚಿತ್ರವು ಸಂಕ್ರಾಂತಿ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಒಂದು ಕಡೆ ತಮಿಳಿನದ್ದೇ ಚಿತ್ರ ''ಪರಾಶಕ್ತಿ'', ಮತ್ತೊಂದು ಕಡೆ ಚಿರಂಜೀವಿ ಅಭಿನಯದ ''ಮನ ಶಂಕರ ವರ ಪ್ರಸಾದ ಗಾರು'', ಇನ್ನೊಂದು ಕಡೆ ''ದಿ ರಾಜಾ ಸಾಬ್''.. ಈ ಎಲ್ಲ ಚಿತ್ರಗಳ ಅಬ್ಬರದ ನಡುವೆ ''ವಾ ವಾಥಿಯಾರ್'' ಹೇಳ ಹೆಸರಿಲ್ಲದಂತಾಯ್ತು. ಇದೀಗ ಸಿನಿಮಾ ಒಟಿಟಿಗೆ (OTT) ಎಂಟ್ರಿ ಕೊಡ್ತಿದೆ.

ಡಿಸೆಂಬರ್‌ನಲ್ಲಿ ಬಿಡುಗಡೆಯಾದ ದಿನಾಂಕದಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಬಳಿಕ ಸಂಕ್ರಾಂತಿ ಸಮಯದಲ್ಲಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ಡಿಜಿಟಲ್‌ನಲ್ಲಿ ಬಿಡುಗಡೆಯಾಗುವ ಮೊದಲು ಕೇವಲ ಎರಡು ವಾರಗಳ ಕಾಲ ಮಾತ್ರ ಉಳಿಯಿತು.

ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಈ ಆಕ್ಷನ್-ಹಾಸ್ಯ ಚಿತ್ರವು ಈಗ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ವೀಕ್ಷಕರಿಗೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಿಸುವ ಅವಕಾಶವನ್ನು ನೀಡುತ್ತಿದೆ.

ಪ್ರೈಮ್ ವಿಡಿಯೋ ಎಲ್ಲಾ ಭಾಷೆಗಳಲ್ಲಿ ವಾ ವಾಥಿಯಾರ್ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ . ಚಿತ್ರದ ಸ್ಟ್ರೀಮಿಂಗ್ ಲಭ್ಯತೆ ಜನವರಿ 28 ರಂದು ಪ್ರಾರಂಭವಾಯಿತು.

ಇದನ್ನೂ ಓದಿ: ಮೊದಲ ಕಾರು ಖರೀದಿಸಿದ ಖುಷಿಗೆ ಕಣ್ಣೀರಿಟ್ಟ ʻಬಿಗ್‌ ಬಾಸ್‌ʼ ಖ್ಯಾತಿಯ ಶ್ರುತಿ ಪ್ರಕಾಶ್‌; ಈ ಕಾರಿನ ಬೆಲೆ ಎಷ್ಟು ಗೊತ್ತಾ?

'ವಾ ವಾಥಿಯಾರ್' ಚಿತ್ರದಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ , ಕೃತಿ ಶೆಟ್ಟಿ ಸತ್ಯರಾಜ್, ರಾಜ್ ಕಿರಣ್, ಆನಂದ್ ರಾಜ್ ಮತ್ತು ಇತರರಂತಹ ಪೋಷಕ ತಾರಾಗಣದೊಂದಿಗೆ ತಮಿಳು ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಈ ಆಕ್ಷನ್-ಹಾಸ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ, ಇದು ಬಹಳಷ್ಟು ಮೆಚ್ಚುಗೆಯನ್ನು ಪಡೆಯಿತು.

ಕಲೆಕ್ಷನ್‌ ಏನು?

''ಸ್ಯಾಕ್ನಿಲ್'' ಉಲ್ಲೇಖ ಮಾಡಿರುವಂತೆ ಮೊದಲ ದಿನ ₹ 1.65 ಕೋಟಿಯನ್ನು ದೋಚಿದ್ದ ಈ ಚಿತ್ರ ಎರಡನೇ ದಿನ ₹ 2.35 ಕೋಟಿಯನ್ನು ಗಳಿಸಿತ್ತು. ಭರವಸೆಯನ್ನು ಮೂಡಿಸಿತ್ತು. ಆದರೆ ಆ ನಂತರ ಈ ಭರವಸೆ ಹುಸಿಯಾಯ್ತು. ಅಂದಾಜು 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಕೇವಲ 10 ಕೋಟಿಯನ್ನು ಮಾತ್ರ ಗಳಿಸಿತ್ತು.



ಅಂದ್ಹಾಗೇ ಎಂಜಿಆರ್ ತತ್ವ ಮತ್ತು ಆದರ್ಶಗಳನ್ನು ಪಾಲಿಸುವ ರಾಮೇಶ್ವರನ್ ಎಂಬ ವ್ಯಕ್ತಿಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಲನ್ ಕುಮಾರಸಾಮಿ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಸಂತೋಷ್ ನಾರಾಯಣ್ ಸಂಗೀತ ನಿರ್ದೇಶನ ಇದೆ.

ಇದನ್ನೂ ಓದಿ: Border 3: ‘ಬಾರ್ಡರ್ 3’ ಬರೋದು ಕನ್ಫರ್ಮ್‌; ರಿಲೀಸ್‌ ಯಾವಾಗ?

ನಿರ್ದೇಶಕ ಮತ್ತು ಬರಹಗಾರರಾದ ನಳನ್ ಕುಮಾರಸಾಮಿ, ಈ ಯೋಜನೆಯಲ್ಲಿ ಮೊದಲ ಬಾರಿಗೆ ಕಾರ್ತಿ ಅವರೊಂದಿಗೆ ಸಹಯೋಗ ಮಾಡಿದರು. ಹಾಸ್ಯ ಮತ್ತು ಆಕ್ಷನ್ ಮಿಶ್ರಣವನ್ನು ನೀಡುವ ಗುರಿಯನ್ನು ಹೊಂದಿರುವ ಈ ಚಿತ್ರ , ಮಿಶ್ರ ವಿಮರ್ಶೆ ಪಡೆದುಕೊಂಡಿದೆ.

Yashaswi Devadiga

View all posts by this author