Star Kids Born On November: ನವೆಂಬರ್‌ನಲ್ಲಿ ಜನಿಸಿದ ಬಾಲಿವುಡ್‌ನ ಸ್ಟಾರ್ ಕಿಡ್ಸ್ ಇವರೇ: ಇಲ್ಲಿದೆ ಫೋಟೋಸ್
Star Kids Born On November: ನಟಿ ಕತ್ರಿನಾ ಕೈಫ್ ನವೆಂಬರ್ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಕ್ಷಣಗಳ ಬಗ್ಗೆ ದಂಪತಿಗಳಿಬ್ಬರು ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ನವೆಂಬರ್ ತಿಂಗಳು ಸೆಲೆಬ್ರಿಟಿಗಳಿಗೆ ಬಹಳ ವಿಶೇಷ ವಾದ ತಿಂಗಳು ಆಗಿದ್ದು ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳು ಇದೇ ತಿಂಗಳಿನಲ್ಲಿ ಜನಿಸಿದ್ದಾರೆ.
ನಟಿ ಕತ್ರಿನಾ ಕೈಫ್ ಅವರು ನವೆಂಬರ್ 7 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮ ದಾಂಪತ್ಯ ಜೀವನಕ್ಕೆ ಮಗುವಿನ ಆಗಮನವಾಗಿದೆ. ನಮಗೆ ಹಾರೈಸಿದ ವರಿಗೆ ಅಪಾರ ಕೃತಜ್ಞತೆಗಳು.. ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ದಂಪತಿಗಳಿಗೆ ಶುಭಕೋರಿದ್ದಾರೆ. ವಿಕ್ಕಿ ಕೌಶಲ್ ಅವರು ತಮ್ಮ ಭಾವನೆಗಳನ್ನು ಸರಳವಾಗಿ ನಿಮ್ಮೆಲ್ಲರ ಆಶೀರ್ವಾದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಬಾಲಿವುಡ್‌ನ ಇನ್ನೊಂದು ಕ್ಯೂಟ್ ಕಪಲ್ ಆದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಪುತ್ರಿ ರಾಹಾ ಕಪೂರ್ ತಮ್ಮ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿತ್ತು. ನವೆಂಬರ್ 6 ರಂದು ಬಹಳಷ್ಟು ಗ್ರ್ಯಾಂಡ್ ಆಗಿ ಆಚರಣೆ ಮಾಡಿಕೊಂಡಿದ್ದರು.
ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮಗಳು, ಯುವ ನಟಿ ಖುಷಿ ಕಪೂರ್ ಅವರು ಕೂಡ ನವೆಂಬರ್ 5 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವರ್ಷ ಅವರು 25ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಆತ್ಮೀಯ ಗೆಳೆಯರೊಂದಿಗೆ ಮತ್ತು ಕುಟುಂಬದವರೊಂದಿಗೆ ಸಂಭ್ರಮಿಸಿದ್ದಾರೆ..
ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ನವೆಂಬರ್ ತಿಂಗಳ ಸ್ಟಾರ್ ಕಿಡ್ ಆಗಿದ್ದಾರೆ. ಆರಾಧ್ಯ ತನ್ನ ಹುಟ್ಟುಹಬ್ಬವನ್ನು ಪ್ರತಿ ವರ್ಷ ನವೆಂಬರ್ 16 ರಂದು ಆಚರಿಸುತ್ತಾರೆ. ಹಾಗೆಯೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬವೂ ಸಹ ನವೆಂಬರ್ ತಿಂಗಳ ಆರಂಭದಲ್ಲಿ, ಅಂದರೆ ನವೆಂಬರ್ 1 ರಂದು ಇರುವುದು ಕೂಡ ವಿಶೇಷವಾಗಿದೆ.
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಮಗಳು, ನಟಿ ಇಶಾ ಡಿಯೋಲ್ ಅವರ ಜನ್ಮದಿನ ನವೆಂಬರ್ 2 ರಂದು ಆಗಿದ್ದು ಅವರು ಕೂಡ ಆಚರಣೆ ಮಾಡಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿ ನವೆಂಬರ್ 5 ರಂದು ತಮ್ಮ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇವರಿಗೂ ಹಲವು ಸೆಲೆಬ್ರಿಟಿಗಳು ಶುಭ ಕೊರಿದ್ದಾರೆ.
ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್ ಅವರ ಮಗ, ನಿರ್ದೇಶಕ ಆರ್ಯನ್ ಖಾನ್ ಅವರ ಜನ್ಮದಿನ ಕೂಡ ನವೆಂಬರ್ 12 ರಂದು ಆಗಿದೆ. ಒಟ್ಟಿನಲ್ಲಿ, ನವೆಂಬರ್ ತಿಂಗಳು ಬಾಲಿವುಡ್‌ನ ಸೆಲೆಬ್ರಿಟಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಖುಷಿ ಸಂತೋಷವನ್ನು ನೀಡುವ ದಿನವಾಗಿದೆ