ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

kavya gowda: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ಕಾವ್ಯ ಗೌಡ; ನಟಿ ಹೇಳಿದ ಸತ್ಯ ಏನು?

Kavya Gowda : ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ ಹಲ್ಲೆ ನಡೆದು ದೂರು ಕೂಡ ದಾಖಲಾಗಿತ್ತು. ಓರಗಿತ್ತಿಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಇದೀಗ ನಟಿ ಕಾವ್ಯಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಮನೆಯ ಕೆಲ ಸಿಸಿಟಿವಿ ದೃಶ್ಯಗಳನ್ನು (CCTV) ಶೇರ್ ಮಾಡಿಕೊಂಡಿದ್ದಾರೆ.ತಮ್ಮ ಮೇಲೆ ಚಪ್ಪಲಿ ಎಸೆಯುತ್ತಿರುವ ವಿಡಿಯೋವನ್ನು ಸಹ ಕಾವ್ಯಾ ರಿವೀಲ್ ಮಾಡಿದ್ದಾರೆ. ನೀವು ಬರೀ ಒನ್‌ ಸೈಡ್‌ ಕಥೆ ಮತ್ತು ಸುಳ್ಳು ಆರೋಪಗಳನ್ನ ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನ ಹೊರಗೆ ಹಾಕಬೇಕು. ಇದರ ಹಿಂದಿರುವ ಕ್ರೂರ ಮುಖಗಳನ್ನ ನಾನು ಹೊರಗೆ ತರಬೇಕು ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ನಟಿ ಕಾವ್ಯ ಗೌಡ ಬರೆದುಕೊಂಡಿದ್ದಾರೆ.

ಕಾವ್ಯ ಗೌಡ

ನಟಿ ಕಾವ್ಯ ಗೌಡ (Kavya Gowda) ಮತ್ತು ಅವರ ಪತಿ ಸೋಮಶೇಖರ್‌ (Somshekhar) ಮೇಲೆ ಹಲ್ಲೆ ನಡೆದು ದೂರು ಕೂಡ ದಾಖಲಾಗಿತ್ತು. ಓರಗಿತ್ತಿಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಇದೀಗ ನಟಿ ಕಾವ್ಯಾ ಗೌಡ ಇನ್‌ಸ್ಟಾಗ್ರಾಂನಲ್ಲಿ (Instagram) ಮನೆಯ ಕೆಲ ಸಿಸಿಟಿವಿ ದೃಶ್ಯಗಳನ್ನು (CCTV) ಶೇರ್ ಮಾಡಿಕೊಂಡಿದ್ದಾರೆ.

ಪ್ರೇಮಾ ಆಗ ನೀಡಿದ ಹೇಳಿಕೆ ಏನು?

ರಾಮಮೂರ್ತಿನಗರ ಠಾಣೆ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರೇಮಾ ಅವರು, "ನಮ್ಮ ಮಾವನ ಮನೆಯಲ್ಲಿ ನಾವೆಲ್ಲಾ ಇದ್ದೇವೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಸೋಮಶೇಖರ್ ಅವರದ್ದು. ಆತ ನನ್ನ ತಂಗಿ ಮೇಲೆ ಹಲ್ಲೆ ಮಾಡಿರೋದು. ಮನೆಗಾಗಿ ಕಾವ್ಯ ಗೌಡ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ. ಇದೆಲ್ಲ ನಮ್ಮ ಮಾವನ ಗಮನಕ್ಕೆ ತಂದಿದ್ದೇವೆ. ಅವರು ಕೂಡ ಬುದ್ಧಿ ಮಾತು ಹೇಳಿ ಕಳುಹಿಸಿದ್ದರು. ನಾನು ಸಂಬಂಧದಲ್ಲೇ ಮದುವೆ ಆಗಿರುವುದು. ಹಾಗಾಗಿ, ಮಾವನ ಮಾತಿಗೆ ನಾನು ತಲೆ ಬಾಗಿದ್ದೇನೆ" ಎಂದು ಪ್ರೇಮಾ ಆ ಸಮಯದಲ್ಲಿ ಹೇಳಿದ್ದರು. ಪ್ರೇಮಾ ಆರೋಪಗಳಿಗೆ ಪ್ರತ್ಯತ್ತುರವಾಗಿ ಕಾವ್ಯಾ ಗೌಡ ಕೆಲವು ವಿಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಾವ್ಯಾ ಗೌಡ ಮೇಲೆ ಪ್ರೇಮಾ ಮತ್ತು ಅವರು ಸೋದರಿ ಹಲ್ಲೆ ಮಾಡಿರುವುದು ಸೆರೆ ಆಗಿದೆ.

ಇದನ್ನೂ ಓದಿ: Amruthadhaare Serial: ಜಯದೇವ್‌ ಕುತಂತ್ರ ಗೌತಮ್‌ಗೆ ಗೊತ್ತಾಗದೇ ಹೋಯ್ತಾ? ಜೆಡಿ ಅನಾಚಾರ ಒಂದೆರಡಲ್ಲ

ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಏನಿದೆ?

ಕುರ್ಚಿ ಎಸೆಯುತ್ತಿರುವ ದೃಶ್ಯವನ್ನು ಸಹ ಕಾವ್ಯಾ ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಚಪ್ಪಲಿ ಎಸೆಯುತ್ತಿರುವ ವಿಡಿಯೋವನ್ನು ಸಹ ಕಾವ್ಯಾ ರಿವೀಲ್ ಮಾಡಿದ್ದಾರೆ. ನೀವು ಬರೀ ಒನ್‌ ಸೈಡ್‌ ಕಥೆ ಮತ್ತು ಸುಳ್ಳು ಆರೋಪಗಳನ್ನ ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನ ಹೊರಗೆ ಹಾಕಬೇಕು. ಇದರ ಹಿಂದಿರುವ ಕ್ರೂರ ಮುಖಗಳನ್ನ ನಾನು ಹೊರಗೆ ತರಬೇಕು ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ನಟಿ ಕಾವ್ಯ ಗೌಡ ಬರೆದುಕೊಂಡಿದ್ದಾರೆ.

‘’ನಮಸ್ತೆ ಎಲ್ಲರಿಗೂ.. ನಾಲಿಗೆಗೆ ಎಲುಬಿಲ್ಲ ಎಂದುಕೊಂಡು, ಯಾರ ಜೀವನದ ಬಗ್ಗೆ ಏನು ಬೇಕಾದರೂ ಮಾತನಾಡೋದು ನ್ಯಾಯ ಅಲ್ಲ. ಮಾತುಗಳಿಗೂ ಜವಾಬ್ದಾರಿ ಇರಬೇಕು. ನಾನು ಯಾವತ್ತೂ ಮಾಧ್ಯಮದ ಮುಂದೆ ಮಾತನಾಡುವವಳಲ್ಲ. ಮೌನವೇ ನನ್ನ ಉತ್ತರ ಎಂದು ನಂಬಿ ಬದುಕಿದವಳು ನಾನು. ಆದರೆ ಇವತ್ತು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ಯಾಕೆಂದರೆ ನಾನು ಸತ್ಯವನ್ನು ನಂಬಿ ಬದುಕಿದವಳು. ಯಾರಿಗೂ ಕೆಟ್ಟದ್ದನ್ನು ಮಾಡದೆ, ನನ್ನ ಜೀವನವನ್ನು ಗೌರವದಿಂದ ಸಾಗಿಸಿದವಳು ನಾನು. ನೋವು, ಅವಮಾನ, ಕಣ್ಣೀರು.. ಇವೆಲ್ಲವನ್ನೂ ನಾನು ಮೌನವಾಗಿ ಸಹಿಸಿಕೊಂಡಿದ್ದೇನೆ.

ನನ್ನ ಮಗುವಿನ ನೋವು, ನನಗೆ ಮಾತ್ರ ಗೊತ್ತು

ಆ ದಿನಗಳಲ್ಲಿ ನನ್ನ ಸ್ಥಿತಿ ನನಗೆ ಮಾತ್ರ ಗೊತ್ತಿತ್ತು. ತೊಂದರೆ ಕೊಟ್ಟರೂ ಸಹಿಸಿಕೊಂಡೆ. ಕೈ ಎತ್ತಿದರೂ ಸಹಿಸಿಕೊಂಡೆ. ಏಕೆಂದರೆ ನನ್ನ ಮರ್ಯಾದೆ, ನನ್ನ ಕುಟುಂಬ, ನನ್ನ ಮಗು ಇವೆಲ್ಲ ನನಗೆ ಮುಖ್ಯವಾಗಿತ್ತು. ನನ್ನ ಗಂಡನ ಸ್ಥಿತಿ, ನನ್ನ ಮಗುವಿನ ನೋವು, ನನಗೆ ಮಾತ್ರ ಗೊತ್ತು. ಇವುಗಳನ್ನು ನಾನು ಮಾತ್ರ ಕಂಡಿದ್ದೇನೆ. ಆದರೂ ನಾನು ಕುಸಿಯಲಿಲ್ಲ. ನ್ಯಾಯಾಲಯ ಮತ್ತು ಸತ್ಯದ ಮೇಲೆ ನನ್ನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ನನ್ನ ಮೇಲೆ ಅಪವಾದಗಳು ಬಂದವು. ಆಸ್ತಿ ವಿಚಾರದ ಹೆಸರಿನಲ್ಲಿ ನನ್ನ ಹೆಸರನ್ನು ಹಾಳುಮಾಡಲು ಪ್ರಯತ್ನವಾಯಿತು. ಆದರೂ ನಾನು ಸತ್ಯದ ದಾರಿಯನ್ನು ಬಿಟ್ಟಿಲ್ಲ. ಏಕೆಂದರೆ ಸತ್ಯ ಯಾವತ್ತೂ ತಲೆಬಾಗುವುದಿಲ್ಲ. ಸತ್ಯ ಸಮಯ ತೆಗೆದುಕೊಳ್ಳಬಹುದು, ಆದರೆ ಸೋಲುವುದಿಲ್ಲ. ಇವತ್ತು ಸತ್ಯ ನನ್ನ ಜೊತೆ ನಿಂತಿದೆ. ನಾನು ತಪ್ಪು ಮಾಡಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಸತ್ಯಮೇವ ಜಯತೆ. ಸತ್ಯ ಮಾತ್ರ ಗೆಲ್ಲುತ್ತದೆ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಕಾವ್ಯ ಗೌಡ ಬರೆದುಕೊಂಡಿದ್ದಾರೆ.





ಇದನ್ನೂ ಓದಿ: Rashmika Vijay Deverakonda : ಉದಯಪುರಕ್ಕೆ ತೆರಳಿದ್ರಾ ರಶ್ಮಿಕಾ-ವಿಜಯ್‌ ಜೋಡಿ?

ನಟಿ ಕಾವ್ಯ ಗೌಡ ಮತ್ತವರ ಪತಿ ಸೋಮಶೇಖರ್‌ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಹಾಗೂ ತನಿಖೆಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗಷ್ಟೇ ಮಧ್ಯಂತರ ತಡೆ ನೀಡಿತು.

Yashaswi Devadiga

View all posts by this author