ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳಿನ ʻಕಯಲ್ʼ ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆ; ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನಡೆದ ಘಟನೆ!

ತಮಿಳಿನ 'ಕಯಲ್' ಧಾರಾವಾಹಿಯ ನಟಿ ಸುಭಾಷಿಣಿ ಅವರು ಏಪ್ರಿಲ್ 5ರ ರಾತ್ರಿ ಚೆನ್ನೈನ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಪತಿ ಬಿಪಿನ್ ಚಂದ್ರನ್ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಜಗಳವಾಡುತ್ತಿದ್ದ ನಟಿ, ಅದೇ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ತಮಿಳಿನ ಜನಪ್ರಿಯ 'ಕಯಲ್' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟಿ ಸುಭಾಷಿಣಿ ಅವರು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಶ್ರೀಲಂಕಾದವರಾದ ಸುಭಾಷಿಣಿ ಅವರು ಚೆನ್ನೈನ ಅಯ್ಯಪ್ಪನ್ತಂಗಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಸುಭಾಷಿಣಿ ಅವರ ಆತ್ಮಹತ್ಯೆಯು ಆಪ್ತರಿಗೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ಆಘಾತ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ.

ಘಟನೆ ಕುರಿತ ಮಾಹಿತಿ ಸಿಗುತ್ತಿದ್ದಂತೆಯೇ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸುಭಾಷಿಣಿ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಪೂನಮಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಜಗಳವಾಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಯ ಕಠಿಣ ನಿರ್ಧಾರವನ್ನು ಅವರು ತೆಗೆದುಕೊಂಡಿರಬಹುದು ಪೊಲೀಸ್‌ ಮೂಲಗಳು ತಿಳಿಸಿವೆ.

ʻಸರ್ಕಾರಿ ನೌಕರಿ ಇಷ್ಟವಿಲ್ಲ, ನಟನೆ ಮೇಲೆಯೇ ಆಸಕ್ತಿʼ; ನಟಿ ನಂದಿನಿ ಆತ್ಮಹತ್ಯೆ ಕಾರಣ ಬಹಿರಂಗ, ಡೆತ್‌ನೋಟ್‌ನಲ್ಲಿ ಏನಿದೆ?

ಬೆಂಗಳೂರು ಮೂಲದ ಪತಿ

36 ವರ್ಷದ ಸುಭಾಷಿಣಿ ಅವರು ಶ್ರೀಲಂಕಾ ಮೂಲದವರಾಗಿದ್ದರೂ, ಮದುವೆಯಾಗಿದ್ದು ಮಾತ್ರ ಬೆಂಗಳೂರು ಮೂಲದ ಬಿಪಿನ್ ಚಂದ್ರನ್ ಎಂಬುವವರನ್ನು. ತಮ್ಮ ಧಾರಾವಾಹಿಗಳ ಶೂಟಿಂಗ್‌ಗೆ ಅನುಕೂಲವಾಗುವಂತೆ ಚೆನ್ನೈನ ಪೋರೂರ್ ಸಮೀಪದ ಅಯ್ಯಪ್ಪಂತಾಂಗಲ್ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ಒಂದರ ಫ್ಲಾಟ್‌ ಅನ್ನು ಬಾಡಿಗೆಗೆ ಪಡೆದು, ಅಲ್ಲಿಯೇ ಸುಭಾಷಿಣಿ ಅವರು ವಾಸವಾಗಿದ್ದರು. ಏಪ್ರಿಲ್‌ 3ರಂದು ಚೆನ್ನೈಗೆ ಆಗಮಿಸಿದ್ದ ಅವರು, ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು.

Actress Shobitha: 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ

ಏಪ್ರಿಲ್‌ 5ರ ರಾತ್ರಿ ಪತಿ ಬಿಪಿನ್‌ ಚಂದ್ರನ್‌ ಅವರ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಸುಭಾಷಿಣಿ ಮಾತನಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ದಂಪತಿಗಳ ನಡುವೆ ಇದ್ದಕ್ಕಿದ್ದಂತೆ ಜಗಳ ನಡೆದಿದೆ ಎನ್ನಲಾಗಿದೆ. ಇದರಿಂದ ಮನನೊಂದ ಸುಭಾಷಿಣಿ, ವಿಡಿಯೋ ಕಾಲ್‌ನಲ್ಲಿರುವಾಗಲೇ ಬೆಡ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಘಟನೆಯನ್ನೆಲ್ಲಾ ವಿಡಿಯೋ ಕಾಲ್‌ನಲ್ಲಿ ನೋಡುತ್ತಿದ್ದ ಪತಿ ಬಿಪಿನ್‌ ಚಂದ್ರನ್‌, ಕೂಡಲೇ ಪೋರೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸುಭಾಷಿಣಿ ಅವರಿದ್ದ ಫ್ಲಾಟ್‌ಗೆ ಧಾವಿಸಿ, ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ಅಷ್ಟರಲ್ಲಿ ಸುಭಾಷಿಣಿ ಮೃತಪಟ್ಟಿದ್ದರು.

ನಟಿ ಸುಭಾಷಿಣಿ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್



ಪತಿಯನ್ನು ವಿಚಾರಣೆ ಮಾಡಲಿರುವ ಪೊಲೀಸರು

ಸುಭಾಷಿಣಿ ಅವರು ಕೇವಲ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಅವರ ಸಾವಿಗೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಭಾಷಿಣಿ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಪತಿ ಬಿಪಿನ್ ಚಂದ್ರನ್ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.