ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಕೆಡಿʼ ಚಿತ್ರದ ಹಾಡಿನಲ್ಲಿ ಬಿಂದಾಸ್‌ ಆಗಿ ಸ್ಪೆಪ್‌ ಹಾಕಿದ್ದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ

'ಕೆಡಿ' ಚಿತ್ರದ "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ" ಹಾಡಿನಲ್ಲಿನ ಅಸಭ್ಯ ನೃತ್ಯ ಮತ್ತು ಸಾಹಿತ್ಯವನ್ನು ಖಂಡಿಸಿ ಉತ್ತರ ಪ್ರದೇಶದ ಅಲಿಗಢ ಮೂಲದ ಧಾರ್ಮಿಕ ಸಂಸ್ಥೆಯು ನಟಿ ನೋರಾ ಫತೇಹಿ ವಿರುದ್ಧ 'ಫತ್ವಾ' ಹೊರಡಿಸಿದೆ. ಇತ್ತ ಸಂಸತ್ತಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಾಡಿನ ಅಧಿಕೃತ ನಿಷೇಧವನ್ನು ಘೋಷಿಸಿದ್ದರೆ, ರಾಷ್ಟ್ರೀಯ ಮಹಿಳಾ ಆಯೋಗವು ಚಿತ್ರತಂಡಕ್ಕೆ ಸಮನ್ಸ್ ಜಾರಿ ಮಾಡಿದೆ.

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಸೆ ಸೆರಗು’ ಹಾಡು ಈಗ ರಾಷ್ಟ್ರಮಟ್ಟದ ವಿವಾದವಾಗಿ ಮಾರ್ಪಟ್ಟಿರುವುದು ಗೊತ್ತಿದೆ. ಚಿತ್ರತಂಡಕ್ಕೆ ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗದಿಂದ ನೋಟಿಸ್‌ ಕೂಡ ಬಂದಿದೆ. ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣದ ಶೈಲಿ ಈಗ ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿದ್ದು, ಕಾನೂನು ಹೋರಾಟದ ಜೊತೆಗೆ ಈಗ ಧಾರ್ಮಿಕ ಆಕ್ರೋಶಕ್ಕೂ ಕಾರಣವಾಗಿದೆ.

ನೋರಾ ಫತೇಹಿ ವಿರುದ್ಧ ‘ಫತ್ವಾ’ ಜಾರಿ

ಉತ್ತರ ಪ್ರದೇಶದ ಅಲಿಗಢ ಮೂಲದ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆಯು ನಟಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. "ಹಾಡಿನಲ್ಲಿನ ನೃತ್ಯದ ಭಂಗಿಗಳು ಮತ್ತು ಸಾಹಿತ್ಯವು ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾಗಿವೆ.

ʻಕೆಡಿʼ ಸಿನಿಮಾ ಹಾಡಿನ ವಿವಾದ; ʻಜೋಗಿʼ ಪ್ರೇಮ್​​- ನೋರಾ ಫತೇಹಿಗೆ ನೊಟೀಸ್ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗ

ಇಂತಹ ಅಶ್ಲೀಲ ಪ್ರದರ್ಶನಗಳು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ. ಇದನ್ನು ಹರಾಮ್ ಮತ್ತು ಗಂಭೀರ ಪಾಪ (ಗುನಾಹ್-ಎ-ಕಬೀರಾ) ಅಂತ ಸಂಸ್ಥೆ ಕರೆದಿದೆ" ಎಂದು ಸಂಸ್ಥೆಯ ಮೌಲಾನಾ ಚೌಧರಿ ಇಫ್ರಾಹೀಮ್ ಹುಸೇನ್ ಹೇಳಿದ್ದಾರೆ.

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಹಾಡಿನ ವಿವಾದ

ಈ ಹಾಡಿನಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆ ಅಧಿವೇಶನದಲ್ಲೂ ಇದರ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, "ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿರಬೇಕು" ಎಂದು ಹೇಳುತ್ತಾ, ಹಾಡನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ ಎಂದಿದ್ದಾರೆ.

Nora Fatehi: ಪ್ರೇಮ್​​ಗೆ ಆ ದಿನವೇ ಹೇಳಿದ್ದೆ! ತಿರುಗಿಬಿದ್ದ ನೋರಾ ಫತೇಹಿ

ಸ್ಪಷ್ಟನೆ ನೀಡಿರುವ ನೋರಾ

ಯಾವಾಗ ಈ ಸಾಂಗ್‌ ವಿವಾದದ ಕೇಂದ್ರಬಿಂದುವಾಯಿತೋ, ತಕ್ಷಣ ಅಲರ್ಟ್‌ ಆದ ನಟಿ ನೋರಾ ಫತೇಹಿ ಅವರು ವಿಡಿಯೋ ಬಿಡುಗಡೆ ಮಾಡಿ, ಸ್ಪಷ್ಟನೆ ನೀಡಿದ್ದರು. "ನಾನು ಈ ಹಾಡನ್ನು 3 ವರ್ಷಗಳ ಹಿಂದೆಯೇ ಕನ್ನಡದಲ್ಲಿ ಚಿತ್ರೀಕರಿಸಿದ್ದೆ. ಆಗ ಚಿತ್ರತಂಡ ನೀಡಿದ ವಿವರಣೆಯನ್ನೇ ನಾನು ನಂಬಿದ್ದೆ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ಅದರ ಅರ್ಥ ಗೊತ್ತಿರಲಿಲ್ಲ. ಹಿಂದಿ ಆವೃತ್ತಿಯ ಸಾಹಿತ್ಯ ಮತ್ತು ಡಬ್ಬಿಂಗ್ ನನ್ನ ಗಮನಕ್ಕೆ ಬಂದಿರಲಿಲ್ಲ. ಹಿಂದಿ ವರ್ಷನ್‌ ಕೇಳಿದಾಗ ನಿರ್ದೇಶಕ ಪ್ರೇಮ್‌ಗೆ ಎಚ್ಚರಿಸಿದ್ದೆ. ಇದು ವಿವಾದ ಆಗಲಿದೆ ಎಂದು ನಾನು ತಿಳಿಸಿದ್ದೆ. ಈ ಹಾಡನ್ನು ಯಾರೂ ಹಂಚಿಕೊಳ್ಳಬೇಡಿ" ಎಂದು ನೋರಾ ಫತೇಹಿ ಹೇಳಿದ್ದರು.

ನೋಟಿಸ್ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗ

ವಿವಾದದ ಕಾವು ಏರುತ್ತಿದ್ದಂತೆಯೇ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್ ಮತ್ತು ಗೀತರಚನೆಕಾರ ರಕೀಬ್ ಆಲಂ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈಗಾಗಲೇ ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ) ಮತ್ತು ಸೈಬರ್ ಪೊಲೀಸರಿಗೂ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ.