ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಏನೇ ಮಾಡಿದರೂ ಅಥವಾ ಯಾವುದೇ ಹೇಳಿಕೆ ನೀಡಿದರೂ ಸಖತ್ ಚರ್ಚೆಯಲ್ಲಿ ಇರುತ್ತದೆ. ಸಿದ್ಧಾರ್ಥ್ ಮಲ್ಹೋತ್ರಾ (sidharth malhotra) ಅವರೊಂದಿಗೆ ಸಂತೋಷದ ದಾಂಪತ್ಯ ಜೀವನವನ್ನು ನಡೆಸುತ್ತಿರುವ ನಟಿ ಇತ್ತೀಚೆಗೆ ತಮ್ಮ ಮಗಳ ಬಗ್ಗೆ ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ (Viral). ಅಷ್ಟೇ ಅಲ್ಲ ನಟಿ ಟೀಕೆ ಎದುರಿಸುತ್ತಿದ್ದಾರೆ.
ಪಾಡ್‌ಕ್ಯಾಸ್ಟ್‌ನಲ್ಲಿ ಭಾಗಿ
ಬಾಲಿವುಡ್ ಸ್ಟಾರ್ ನಾಯಕಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ರಾಜ್ ಶಮಾನಿ ನಡೆಸಿಕೊಡುವ 'ಫಿಗರಿಂಗ್ ಔಟ್' ಎಂಬ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದರು. ಈ ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ, ಕಿಯಾರಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಸಮಾಜದಲ್ಲಿರುವ ಹುಡುಗರ ಬಗ್ಗೆ ನಿಮ್ಮ ಮಗಳಿಗೆ ಏನು ಹೇಳುತ್ತೀರಿ ಎಂದು ನಿರೂಪಕರು ಕೇಳಿದರು. ಇದಕ್ಕೆ ಕಿಯಾರಾ ಅಡ್ವಾಣಿಯವರ ಉತ್ತರ ತೀವ್ರ ಟೀಕೆಗೆ ಗುರಿಯಾಗುತ್ತಿದೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಒಬ್ಬಳು ಮಗಳಿದ್ದಾಳೆ. ಆಕೆಯ ಹೆಸರು ಸರಯಾ. ಭವಿಷ್ಯದಲ್ಲಿ ತನ್ನ ಮಗಳು ಹೇಗಿರಬೇಕೆಂದು ಬಯಸುತ್ತಾಳೆ ಎಂಬುದರ ಕುರಿತು ಮಾತನಾಡುತ್ತಾ ಕಿಯಾರಾ ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: Trisha Krishnan: ದಳಪತಿ ವಿಜಯ್ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್
ಆಕೆ ಒಬ್ಬ ವ್ಯಕ್ತಿ ಜೊತೆ ಡೇಟ್ ಮಾಡಬೇಕು ಅಂತ ಏನಿಲ್ಲ. ಆಕೆಗೆ ಯಾವುದೇ ಕಟ್ಟಲೆ ಇರಲ್ಲ. ಮದುವೆ ಆಗಬೇಕು ಅಂದ್ರೆ ಆಗಲಿ.. ಇಲ್ಲ ಅಂದ್ರೆ ಬೇಡ. ನನ್ನ ಪೋಷಕರು ಪ್ರೀತಿಸಿ ಮದುವೆ ಆದ್ರು, ಕೊನೆಗೆ ನಾನು ಪ್ರೀತಿಸಿದವನನ್ನೇ ಮದುವೆ ಆಗಿದ್ದು. ಡೇಟ್ ಮಾಡಿದ ಪ್ರತಿಯೊಬ್ಬರನ್ನು ಮಗಳು ಮದುವೆ ಆಗಬೇಕು ಅಂತ ಇಲ್ಲ. ಅವಳದ್ದೇ ಎಲ್ಲಾ ಆಯ್ಕೆ.. ನನ್ನ ಪೋಷಕರು ನನ್ನ ಅದೇ ರೀತಿ ಬೆಳೆಸಿದ್ರು." ಎಂದಿದ್ದಾರೆ.
"ನಾವು ಬೆಳೆದಂತೆ ಈ ಎಲ್ಲಾ ಸಂಬಂಧಗಳು ನಮಗೆ ಪಾಠಗಳನ್ನು ಕಲಿಸುತ್ತವೆ. ಅವು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತವೆ. ನಾವು ಜೀವನವನ್ನು ಪೂರ್ಣವಾಗಿ ಅನುಭವಿಸಬೇಕು. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಆದರೆ ನಾವು ಆ ತಪ್ಪುಗಳಿಂದ ಕಲಿಯುತ್ತೇವೆ" ಎಂದು ಕಿಯಾರಾ ಅಡ್ವಾಣಿ ಹೇಳಿದರು.
ಕಿಯಾರಾ ಅಡ್ವಾಣಿಯವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ತಾಯಿ ತನ್ನ ಮಕ್ಕಳಿಗೆ ಹೀಗೆ ಹೇಳುತ್ತಾರಾ ಎಂದು ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಸ್ತ್ರೀವಾದವೇ ಎಂದು ಅವರು ಕೇಳುತ್ತಿದ್ದಾರೆ. "ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಪದಗಳ ಉಪಯೋಗವೇನು?" ಎಂದು ಅವರು ಟೀಕಿಸುತ್ತಿದ್ದಾರೆ.
ನಮ್ಮ ಅನುಭವದಂತೆ ಅವಳ ಜೀವನ ಇರಬೇಕು ಎಂದು ಬಯಸಲ್ಲ. ಅವಳು ತನ್ನದೇ ರೀತಿ ಜೀವನವನ್ನು ಅನುಭವಿಸಲಿ ಎಂದು ಕಿಯಾರಾ ಮಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Trisha Krishnan: ದಳಪತಿ ವಿಜಯ್ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್
ಈ ವೀಡಿಯೋ ವೈರಲ್ ಆಗ್ತಿದ್ದು ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. 2014ರಲ್ಲಿ ಬಂದಿದ್ದ 'ಫಗ್ಲಿ' ಸಿನಿಮಾ ಮೂಲಕ ಕಿಯಾರಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ಭರತ್ ಅನೆ ನೇನು' ಚಿತ್ರದಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿದ್ದರು.