ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 13' (Bigg Boss Kannada Season 13) ಯಾವಾಗ ಆರಂಭವಾಗಲಿದೆ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಬಾರಿಯ ಶೋದ ಪ್ರೊಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಪ್ರಸಾರದ ದಿನಾಂಕ ಮತ್ತು ಸಮಯವನ್ನು ಅಧಿಕೃತವಾಗಿ ಘೋಷಿಸಿದೆ. ಕಾರ್ಯಕ್ರಮದ ಹೊಸ ಸೀಸನ್‌ಗಾಗಿ ಕೌಂಟ್‌ಡೌನ್ ಶುರುವಾಗಿದೆ.
ಈ ಬಾರಿ ಇರಲಿದೆ ಸಖತ್ ಟ್ವಿಸ್ಟ್!
ಹೌದು, ಈ ಸಲದ ಬಿಗ್ ಬಾಸ್ ಎರಡು ಭಾಗಗಳಾಗಿ ವಿಂಗಡಣೆಯಾಗಿದೆ. ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ನೀಡಲೆಂದೇ ಈ ಬಾರಿ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಎಂಬ ಸಂಚಿಕೆಗಳನ್ನು ಮೊದಲು ಪ್ರಸಾರ ಮಾಡಲು ಬಿಗ್ ಬಾಸ್ ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವ ಆಸೆಯುಳ್ಳವರಿಗಾಗಿ ಈಗಾಗಲೇ ರಾಜ್ಯಾದ್ಯಂತ ವಿಡಿಯೋಗಳ ಮೂಲಕ ಆಡಿಷನ್ ನಡೆಸಲಾಗಿದೆ. ಅಲ್ಲಿ ಆಯ್ಕೆಯಾಗಿರುವ ಒಂದಷ್ಟು ಮಂದಿ ಈಗ ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಕಾಲಿಡಲಿದ್ದಾರೆ. ಇಲ್ಲಿ ಗೆಲ್ಲುವವರು ನೇರವಾಗಿ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Kiccha Sudeep: ಸೆ.6ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭವಾಗುತ್ತಾ? ಏನಿದು ಗುಸುಗುಸು?
ಆಗಸ್ಟ್ 16ರಂದು ಬಿಗ್ ಬಾಸ್ ಅಗ್ನಿಪರೀಕ್ಷೆ ಆರಂಭ
ಸದ್ಯ ಆಗಸ್ಟ್ 16ರ ರಾತ್ರಿ 9 ಗಂಟೆಗೆ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಲಾಂಚ್ ಆಗುತ್ತಿದ್ದು, ನಂತರ ಪ್ರತಿದಿನ ರಾತ್ರಿ 9.30ಕ್ಕೆ ಇದರ ಸಂಚಿಕೆಗಳು ಪ್ರಸಾರವಾಗಲಿವೆ ಎಂದು ಕಲರ್ಸ್ ಕನ್ನಡ ವಾಹಿನಿ ತಿಳಿಸಿದೆ. ಇನ್ನು, ಈ ಅಗ್ನಿಪರೀಕ್ಷೆಯ ಎಪಿಸೋಡ್‌ಗಳಲ್ಲಿ ಮಾಜಿ ಸ್ಪರ್ಧಿಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಇವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿ, ನೀಡುವ ಚಾಲೆಂಜ್‌ಗಳನ್ನು ನಿಭಾಯಿಸಿ ಗೆಲ್ಲುವವರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ.
ಮೇನ್ ಶೋ ಸೆ.6ರಿಂದ ಆರಂಭವಾಗುವ ನಿರೀಕ್ಷೆ
ಕಳೆದ ಸೀಸನ್‌ಗಳ ಮೂವರು ಸ್ಪರ್ಧಿಗಳನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ‘ಬಿಗ್ ಬಾಸ್ ಸೀಸನ್-10’ರ ಸ್ಪರ್ಧಿಗಳಾದ ವಿನಯ್ ಗೌಡ, ಸಂಗೀತಾ ಶೃಂಗೇರಿ ಹಾಗೂ ‘ಬಿಗ್ ಬಾಸ್ ಸೀಸನ್-12’ ವಿನ್ನರ್ 'ಗಿಲ್ಲಿ ನಟ' ಅವರು ಈ ಅಗ್ನಿಪರೀಕ್ಷೆ ಸಂಚಿಕೆಗಳ ತೀರ್ಪುಗಾರರಾಗಿರಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಅಗ್ನಿ ಪರೀಕ್ಷೆ ಪ್ರೋಮೋ ವೈರಲ್
ಅಂದಹಾಗೆ, 'ಅಗ್ನಿಪರೀಕ್ಷೆ' ಹಂತ ಮುಗಿದ ಬಳಿಕ, ಕಿಚ್ಚ ಸುದೀಪ್ ನಡೆಸಿಕೊಡುವ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ ಸೀಸನ್ 13'ರ ಮೇನ್ ಶೋ ಸೆಪ್ಟೆಂಬರ್ 6ರಿಂದ ಆರಂಭವಾಗುವ ಸಾಧ್ಯತೆಯಿದೆ. ಬಿಗ್ ಬಾಸ್ ತಂಡ ನೀಡಿರುವ ಈ ಬಿಗ್ ಅಪ್ಡೇಟ್‌ನಿಂದಾಗಿ ಅಭಿಮಾನಿಗಳಲ್ಲಿ ಕಾರ್ಯಕ್ರಮದ ಮೇಲಿನ ನಿರೀಕ್ಷೆ ಇಮ್ಮಡಿಸಿದೆ.