ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಿಚ್ಚನ ಮೇಲೆ ಅಭಿಮಾನ; ತಮಿಳುನಾಡಿನಲ್ಲಿ ಗುಡಿ ಕಟ್ಟಿ ಪೂಜಿಸುತ್ತಿರುವ ಸುದೀಪ್ ಫ್ಯಾನ್‌ ಸಿದ್ದರಾಜು

ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ದೊಡ್ಡಗಾಜನೂರು ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರ ಅಭಿಮಾನಿ ಸಿದ್ದರಾಜು ಎಂಬುವವರು ತಮ್ಮ ಮನೆಯಲ್ಲೇ ನೆಚ್ಚಿನ ನಟನಿಗಾಗಿ ಗುಡಿ ನಿರ್ಮಿಸಿ ಪೂಜಿಸುತ್ತಿದ್ದಾರೆ. ವೃತ್ತಿಯಲ್ಲಿ ಐಸ್ ಕ್ಯಾಂಡಿ ಮಾರಾಟಗಾರರಾದ ಇವರು, ಸುದೀಪ್ ಅವರನ್ನು ದೈವದಂತೆ ಕಾಣುತ್ತಿದ್ದಾರೆ.

ಸಿನಿಮಾ ತಾರೆಯರ ಮೇಲಿನ ಅಭಿಮಾನ ಯಾವ ಮಟ್ಟಕ್ಕೆ ಇರುತ್ತದೆ ಎಂಬುದಕ್ಕೆ ದಕ್ಷಿಣ ಭಾರತದಲ್ಲಿ ಅನೇಕ ಉದಾಹರಣೆಗಳಿವೆ. ಆದರೆ, ಕನ್ನಡದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಮೇಲಿನ ಅತೀವ ಪ್ರೀತಿಯಿಂದ ಅಭಿಮಾನಿಯೊಬ್ಬರು ತಮಿಳುನಾಡಿನಲ್ಲಿ ಅವರಿಗಾಗಿ ಪುಟ್ಟ ಗುಡಿಯೊಂದನ್ನು ನಿರ್ಮಿಸಿ, ಅಲ್ಲಿ ಪೂಜೆ ಸಲ್ಲಿಸುತ್ತಿರುವ ಅಪರೂಪದ ಘಟನೆ ಈಗ ಬೆಳಕಿಗೆ ಬಂದಿದೆ.

ಗಡಿ ಭಾಗದಲ್ಲಿ ಸುದೀಪ್‌ ಹವಾ

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ತಾಲೂಕಿನ ದೊಡ್ಡಗಾಜನೂರು ಗ್ರಾಮದಲ್ಲಿ ಈ ವಿಶೇಷ ಅಭಿಮಾನ ಕಂಡುಬಂದಿದೆ. ಇಲ್ಲಿನ ನಿವಾಸಿ ಸಿದ್ದರಾಜು ಎಂಬ 28 ವರ್ಷದ ಯುವಕ ಸುದೀಪ್ ಅವರ ಪರಮ ಭಕ್ತ. ಕೇವಲ ಅಭಿಮಾನಿಯಾಗಿ ಉಳಿಯದೆ, ತಮ್ಮ ಮನೆಯ ಆವರಣದಲ್ಲಿಯೇ ಸುದೀಪ್ ಅವರಿಗಾಗಿ ಒಂದು ಸಣ್ಣ ಗುಡಿಯನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ, ದೊಡ್ಡಗಾಜನೂರು ವರನಟ ಡಾ. ರಾಜ್‌ಕುಮಾರ್‌ ಅವರ ಹುಟ್ಟೂರು. ಇದೇ ಗ್ರಾಮದಲ್ಲಿ ಈಗ ಸುದೀಪ್‌ ಅಭಿಮಾನಿಯ ನಡೆ ಎಲ್ಲರ ಗಮನಸೆಳೆದಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ, ಆರೋಪಿಗಳಲ್ಲಿ ಸುದೀಪ್‌ ಫ್ಯಾನ್ಸ್‌ ಕೂಡ ಇದ್ದಾರೆ!

ಅಂದಹಾಗೆ, ಈ ಪುಟ್ಟ ಗುಡಿಯಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಚಿತ್ರದುರ್ಗದ ವೀರ ಮದಕರಿ ನಾಯಕ ಅವರ ಭಾವಚಿತ್ರಗಳ ಜೊತೆಗೆ ನಟ ಕಿಚ್ಚ ಸುದೀಪ್ ಅವರ ಫೋಟೋವನ್ನೂ ಇರಿಸಲಾಗಿದೆ. ಸಿದ್ದರಾಜು ಅವರು ಪ್ರತಿದಿನ ಬೆಳಿಗ್ಗೆ ಸ್ನಾನ ಮುಗಿಸಿ, ಈ ಗುಡಿಗೆ ದೀಪ ಹಚ್ಚಿ, ಧೂಪ ಹಾಕಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಸುದೀಪ್ ಅವರ ಸಿನಿಮಾಗಳಲ್ಲಿನ ಸಾಮಾಜಿಕ ಕಳಕಳಿ ಮತ್ತು ಅವರ ವ್ಯಕ್ತಿತ್ವವೇ ತಮಗೆ ಸ್ಫೂರ್ತಿ ಎನ್ನುತ್ತಾರೆ ಈ ಅಭಿಮಾನಿ.‌

Dog Satish: ಸುದೀಪ್‌ ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ಡಾಗ್‌ ಸತೀಶ್‌

'ಕಿಚ್ಚ ಸಿದ್ದರಾಜು' ಎಂದೇ ಪ್ರಸಿದ್ಧಿ

ವೃತ್ತಿಯಲ್ಲಿ ಐಸ್ ಕ್ಯಾಂಡಿ ಮಾರಾಟ ಮಾಡುವ ಕೆಲಸ ಮಾಡುತ್ತಿರುವ ಸಿದ್ದರಾಜು ಅವರ ಬದುಕು ಸುದೀಪ್ ಅವರ ಹೆಸರಿನ ಸುತ್ತಲೇ ಸಾಗುತ್ತದೆ. ಐಸ್ ಕ್ಯಾಂಡಿ ಮಾರುವಾಗಲೂ ಸುದೀಪ್ ಅವರ ಹಾಡುಗಳನ್ನೇ ಕೇಳುತ್ತಾ ಸಾಗುವ ಇವರನ್ನು ಕಂಡು ಸ್ಥಳೀಯರು ಇವರನ್ನು ಪ್ರೀತಿಯಿಂದ 'ಕಿಚ್ಚ ಸಿದ್ದರಾಜು' ಎಂದೇ ಕರೆಯುತ್ತಾರೆ. "ನನಗೆ ಸುದೀಪ್ ಅಣ್ಣ ಅಂದರೆ ದೈವ ಸಮಾನ. ಅವರ ಸಿನಿಮಾಗಳು ನಮಗೆ ಬದುಕುವ ಭರವಸೆ ನೀಡುತ್ತವೆ. ಹಾಗಾಗಿ ಅವರಿಗೆ ಈ ಗೌರವ ಸಲ್ಲಿಸುತ್ತಿದ್ದೇನೆ" ಎಂದು ಸಿದ್ದರಾಜು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರಿಗಾಗಿ ಈ ರೀತಿ ಗುಡಿ ಕಟ್ಟುವುದು ಹೊಸದೇನಲ್ಲ. ರಜನಿಕಾಂತ್‌ ಅವರಿಗಾಗಿ ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿಸಿದ್ದನ್ನು ನಾವು ನೋಡಿದ್ದೇವೆ.