ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮ್ ಚರಣ್ ಆಯ್ತು, ʻಕಿಚ್ಚʼ ಸುದೀಪ್‌ಗೂ ವಿದೇಶಿ ಬಾಡಿಗಾರ್ಡ್; ʻಮ್ಯಾಂಗೋ ಪಚ್ಚʼ ಶೋನಲ್ಲಿ ಹೈಲೈಟ್‌ ಆದ ಈ ವ್ಯಕ್ತಿ ಯಾರು?

ʻಕಿಚ್ಚʼ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಬೆಂಗಳೂರಿನ ಸಂತೋಷ್ ಥಿಯೇಟರ್‌ಗೆ ಕಿಚ್ಚ ಸುದೀಪ್ ಕುಟುಂಬ ಸಮೇತ ಆಗಮಿಸಿದ್ದರು. ಈ ವೇಳೆ ವಿದೇಶಿ ಬಾಡಿಗಾರ್ಡ್ ಒಬ್ಬರು ಸುದೀಪ್ ಭದ್ರತೆಗೆ ನಿಂತಿದ್ದು ಭಾರಿ ಕುತೂಹಲ ಮೂಡಿಸಿದೆ.

ತೆಲುಗಿನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಬಿಗ್ ಬಜೆಟ್ ಚಿತ್ರ ‘ಪೆದ್ದಿ’ ಸಿನಿಮಾದ ಪ್ರಚಾರದ ವೇಳೆ ಕೆವಿನ್ ಕುಂಟಾ ಎಂಬ ಹೊಸ ಬಾಡಿಗಾರ್ಡ್‌ ಎಲ್ಲೆಡೆ ಹೈಲೈಟ್‌ ಆಗಿದ್ದು ಗೊತ್ತೇ ಇದೆ. ಈ ವಿದೇಶಿ ಬಾಡಿಗಾರ್ಡ್‌ಗೆ ಚರಣ್‌ ಕೈತುಂಬಾ ಕಾಸು ನೀಡುತ್ತಿದ್ದಾರೆ. ಮೂಲಗಳ ಪ್ರಕಾರ, ಕೆವಿನ್‌ಗೆ ಚರಣ್‌ ಕಡೆಯಿಂದ ದಿನಕ್ಕೆ 2 ಲಕ್ಷ ರೂ. ಹಣ ಸಿಗುತ್ತಿದೆಯಂತೆ! ಇದೀಗ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರಿಗೂ ಓರ್ವ ಹೊಸ ವಿದೇಶಿ ಬಾಡಿಗಾರ್ಡ್ ಸಿಕ್ಕಿದ್ದಾರೆ! ಸದ್ಯ ಮ್ಯಾಂಗೋ ಪಚ್ಚ ಸಿನಿಮಾ ನೋಡಲು ಬಂದ ಸುದೀಪ್‌ ಮತ್ತು ಕುಟುಂಬಕ್ಕೆ ಬೆಂಗಾವಲಾಗಿ ನಿಂತಿದ್ದ ಈ ಬಾಡಿಗಾರ್ಡ್‌ ಈಗ ಸಖತ್‌ ಸುದ್ದಿಯಲ್ಲಿದ್ದಾರೆ.

ಕಿಚ್ಚನಿಗೆ ಹೊಸ ಬಾಡಿಗಾರ್ಡ್‌

ಹೌದು, ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು (ಜೂನ್‌ 5) ರಾಜ್ಯಾದ್ಯಂತ ತೆರೆಕಂಡಿದೆ. ಈ ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಲು ಸುದೀಪ್ ಅವರು ಬೆಂಗಳೂರಿನ ಸಂತೋಷ್ ಥಿಯೇಟರ್‌ಗೆ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುದೀಪ್ ಅವರ ಭದ್ರತೆಗೆ ನಿಂತಿದ್ದ ಎತ್ತರದ ವಿದೇಶಿ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದರು. ಕಿಚ್ಚ ಸುದೀಪ್ ಅವರೇ ಸಖತ್‌ ಹೈಟ್‌ ಇದ್ದಾರೆ. ಆದರೆ ಈ ಬಾರಿಗಾರ್ಡ್‌ ಸುದೀಪ್‌ಗಿಂತಲೂ ಎತ್ತರ ಇರೋದು ವಿಶೇಷ. ಸದ್ಯ ಈ ವಿದೇಶಿ ವ್ಯಕ್ತಿಯ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, "ಇವರು ಕಿಚ್ಚನ ಹೊಸ ಪರ್ಸನಲ್ ಬಾಡಿಗಾರ್ಡ್ ಇರಬಹುದೇ?" ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.‌

Mango Pachcha Movie: ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್

ಕಿಚ್ಚ ಕಿರಣ್ ಎಲ್ಲಿ?

ಸಾಮಾನ್ಯವಾಗಿ ಸುದೀಪ್‌ ಇದ್ದ ಕಡೆ ‘ಕಿಚ್ಚ ಕಿರಣ್’ ಇದ್ದೇ ಇರುತ್ತಾರೆ. ಹಲವು ಸಮಯದಿಂದ ಅವರೇ ಸುದೀಪ್‌ಗೆ ಪರ್ಸನಲ್ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಶೂಟಿಂಗ್ ಸೆಟ್‌ಗಳಲ್ಲಿ ಸುದೀಪ್ ಅವರನ್ನು ಸುರಕ್ಷಿತೆಯ ಜವಾಬ್ದಾರಿಯನ್ನು ಕಿರಣ್ ಅವರೇ ನಿಭಾಯಿಸುತ್ತ ಬಂದಿದ್ದಾರೆ. ಹೀಗಿರುವಾಗ, ಇಂದು ಕೇವಲ ಒಂದು ದಿನದ ಥಿಯೇಟರ್ ಭದ್ರತೆಗಾಗಿ ಈ ವಿದೇಶಿ ವ್ಯಕ್ತಿ ಬಂದಿದ್ದಾರಾ? ಅಥವಾ ಸುದೀಪ್ ಅವರು ಅಂತಾರಾಷ್ಟ್ರೀಯ ಮಟ್ಟದ ಹೊಸ ಸೆಕ್ಯೂರಿಟಿಯನ್ನು ನೇಮಿಸಿಕೊಂಡಿದ್ದಾರಾ? ಈ ಬಾಡಿಗಾರ್ಡ್‌ ಯಾರು? ಯಾವ ಊರಿನವರು ಎಂಬ ಕುತೂಹಲಕ್ಕೆ ಇನ್ನಷ್ಟೇ ಅಧಿಕೃತ ಉತ್ತರ ಸಿಗಬೇಕಿದೆ.

ಸುದೀಪ್‌ ಹೊಸ ಬಾಡಿಗಾರ್ಡ್ ವಿಡಿಯೋ ವೈರಲ್



ಮ್ಯಾಂಗೋ ಪಚ್ಚ ಹೇಗಿದೆ?

ಇನ್ನು, ಸುದೀಪ್‌ ಸೋದರಳಿಯ ಸಂಚಿತ್‌ ಅವರ ಮೊದಲ ಸಿನಿಮಾ ʻಮ್ಯಾಂಗೋ ಪಚ್ಚʼ ತೆರಕಂಡಿದೆ. ಕುಟುಂಬ ಸಮೇತ ಥಿಯೇಟರ್‌ಗೆ ಹೋಗಿದ್ದ ಸುದೀಪ್‌ ಕುಟುಂಬ, ಸೋದರಳಿಯನಿಗೆ ವಿಶ್‌ ಮಾಡಿದೆ. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್‌ ಸಿಕ್ಕಿದ್ದು, ಸಂಚಿತ್‌ ನಟನೆಗೆ ಭಾರಿ ಮೆಚ್ಚುಗೆ ಸಿಕ್ಕಿದೆ. ವಿವೇಕ ನಿರ್ದೇಶನದ ಈ ಸಿನಿಮಾವನ್ನು ಪ್ರಿಯಾ ಸುದೀಪ್‌, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌ ನಿರ್ಮಾಣ ಮಾಡಿದ್ದಾರೆ. ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನೀಡಿದ್ದಾರೆ.