ಕಿಚ್ಚ ಸುದೀಪ್ (Baadshah Kichcha Sudeep) ನಟಿಸಿರುವ 'ಮಾರ್ಕ್' ಸಿನಿಮಾ (Mark Success) ರಿಲೀಸ್ ಆಗಿದೆ. ಮಾರ್ಕ್ ಸಿನಿಮಾಗೆ ಪೈರಸಿ ಮಹಾಮಾರಿ ಕಂಟಕವಾಗಿ ಪರಿಣಮಿಸುತ್ತಿದೆ. ಇದೀಗ ಸಿನಿಮಾ ಸಕ್ಸೆಸ್ ವಿಚಾರವಾಗಿ ಪ್ರೆಸ್ ಮೀಟ್ ತಂಡ ಆಯೋಜಿಸಿದ್ದು, ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಿಚ್ಚ ಸುದೀಪ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಸೋಶಿಯಲ್ ಮೀಡಿಯಾದಲ್ಲಿ (Social Media Bad Comment) ಕೆಲವು ನೆಟ್ಟಿಗರು ಖಾಲಿ ಥಿಯೇಟರ್‌ಗಳ ವಿಡಿಯೋವನ್ನು ಶೇರ್ ಮಾಡುತ್ತಿರೋ ಬಗ್ಗೆ ಅಭಿಪ್ರಾಯಗಳನ್ನು ಕೇಳಿದ್ದರು. ಹಾಗೇ ಅವರ ಮಗಳು ಸಾನ್ವಿಯನ್ನು (Sanvi Sudeeop) ಟೀಕೆ ಮಾಡುತ್ತಿರುವ ಬಗ್ಗೆನೂ ಕೇಳಲಾಯ್ತು. ಈ ಎಲ್ಲ ವಿಚಾರಗಳ ಬಗ್ಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ ಕಿಚ್ಚ.
ಸುದೀಪ್ ಪೈರೆಸಿ ವಿಚಾರವಾಗಿ ಮಾತನಾಡಿ, ʻ4000 ಅಧಿಕ ಲಿಂಕ್‌ಗಳನ್ನು ಡಿಲಿಟ್ ಮಾಡಲಾಗಿದೆ. ಮಾರ್ನಿಂಗ್ ಶೋ ಮುಕ್ತಾಯವಾಗಲೇ ಇಲ್ಲ ಆಗಲೇ ಪೈರೆಸಿ ಕಾಟ ಶುರು ವಾಗಿತ್ತು. ಅದಕ್ಕೆ ಏನೇನು ಆಕ್ಷನ್ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಿದ್ದೇವೆʼ ಎಂದರು.
ಇದನ್ನೂ ಓದಿ: Mark Review: ಮ್ಯಾಕ್ಸಿಮಮ್ ಮಾಸ್‌ನೊಂದಿಗೆ ʻಮಾರ್ಕ್ʼ ಮಾರಾಮಾರಿ; ಸುದೀಪ್ ಅಭಿಮಾನಿಗಳಿಗೆ ಇದು ಹಬ್ಬ ಕಣ್ರೀ!
ವೇಸ್ಟ್ ನನ್ ಮಕ್ಳು!
ಇನ್ನು ಸೋಷಿಯಲ್ ಮೀಡಿಯಾ ಕಮೆಂಟ್ ಬಗ್ಗೆ ಮಾತನಾಡಿ, ʻಐದು ಬೆರಳು ಕೈಯಲ್ಲಿ ಇದೆ. ಚಪ್ಪಾಳೆ ತಟ್ಟಿ ಪ್ರೋತ್ಸಾಹ ಕೊಟ್ಟವರಿರುವಾಗ, ಯಾವುದೋ ಕಿತ್ತೋಗಿರೋ ವಿಡಿಯೋ ನೋಡಿಕೊಂಡು, ಇರೋರ ಬಗ್ಗೆ ಯೋಚನೆ ಮಾಡೋದು ಏಕೆ? ಅವರಿಗೆ ಏನು ನೋವಿದೆಯೋ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಕರುನಾಡಿನಾದ್ಯಂತ ತಾಯಂದಿರು ಮೆಚ್ಚುಗೆ ಬಗ್ಗೆ ಮಾತಾಡೋಣ. ನೆಗೆಟಿವ್, ಕೆಟ್ಟದಾಗಿ ಟ್ರೋಲ್ ಮಾಡೋರ ಬಗ್ಗೆ ನಾನು ಮಾತಾಡಿ ನನ್ನ ಟೈಮ್ ಯಾಕೆ ವೇಸ್ಟ್ ಮಾಡ್ಲಿ ವೇಸ್ಟ್ ನನ್ ಮಕ್ಳುʼ ಎಂದಿದ್ದಾರೆ.
ದೇವರು ಚೆನ್ನಾಗಿ ಇಟ್ಟಿರಲಿ
ಅಷ್ಟು ಜನ ಚಪ್ಪಾಳೆ ತಟ್ಟಿ, ಅಷ್ಟು ಜನ ಪ್ರೋತ್ಸಾಹ ಕೊಟ್ಟು, ಶಿಳ್ಳೆ ಹಾಕಬೇಕಾದರೆ, ಯಾವುದೋ ಕಿತ್ತೋಗಿರೋ ವಿಡಿಯೋ ನೋಡಿಕೊಂಡು ಕೇಳ್ತಿದೀರ. ಅವರಿಗೆ ಪಾಪ ಏನು ನೋವಿದೆಯೋ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ಅವೆಲ್ಲ ತಲೆ ಕೆಡಿಸಿಕೊಳ್ಳಬಾರದು. ದೇವರು ಚೆನ್ನಾಗಿ ಇಟ್ಟಿರಲಿ.
ಸೆಲೆಬ್ರೇಷನ್ ಮಾಡ್ತಾ ಇದ್ದಾರಲ್ಲ ಅವರ ಬಗ್ಗೆ ಮಾತನಾಡಿ. ಯಾವುದೋ ಒಂದು ವಿಡಿಯೋ ಬಗ್ಗೆ ಅದರ ಬಗ್ಗೆ ಮಾತನಾಡೋದು ನಾವು ಚೀಪ್ ಆಗ್ತೇವೆ ಎಂದರು.
ಹತ್ತರಷ್ಟು ಬೆಳೆಯುತ್ತಾಳೆ
ಇನ್ನು ನನ್ನ ಮಗಳು. ನಾನೇ ಫೇಸ್ ಮಾಡಿದ್ದೀನಿ ಅಂದ್ಮೇಲೆ. ಅದರ ಹತ್ತರಷ್ಟು ಫೇಸ್ ಮಾಡುತ್ತಾಳೆ. ಹತ್ತರಷ್ಟು ಬೆಳೆಯುತ್ತಾಳೆ. ಹತ್ತರಷ್ಟು ದೊಡ್ಡವಳಾಗುತ್ತಾಳೆ. ನನಗಿಂತ ಹತ್ತರಷ್ಟು ಒಳ್ಳೆಯ ಮನಸ್ಸು ಇದೆ. ಅಷ್ಟೇ ಕೈ ಹಿಡಿತಾಳೆ. ಇನ್ನು ನನ್ನ ಮಗಳ ಹಾಡನ್ನು ಮೆಚ್ಚಿದಂತ ಅದೆಷ್ಟೋ ಚಿತ್ರರಂಗದ ಮಿತ್ರರು ಇದ್ದಾರೆ. ಅಭಿಮಾನಿಗಳು ಇದ್ದಾರೆ. ನಿಮ್ಮಲ್ಲಿಯೇ ಎಷ್ಟೋ ಜನ ಪ್ರೀತಿ ಮಾಡಿದ್ದಾರೆ ಎಂದು ಮಗಳನ್ನು ಹಾಡಿ ಹೊಗಳಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಇದೇ ಡಿ.25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Kiccha Sudeep: ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ! ದರ್ಶನ್ ಪತ್ನಿಗೆ ಸುದೀಪ್ ತಿರುಗೇಟು
ಹಾಡುಗಳಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದು, ನವೀನ್ ಚಂದ್ರ, ಯೋಗಿ ಬಾಬು, ಗುರು ಸೋಮಸುಂದರಂ, ದೀಪ್ಶಿಕಾ, ರೋಶಿಣಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಅಶ್ವಿನ್ ಹಾಸನ್ ಮುಂತಾದವರು ನಟಿಸಿದ್ದಾರೆ.