ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Krishi Thapanda: ಇದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ! ಕೃಷಿ ತಾಪಂಡ ಪೋಸ್ಟ್‌

Krishi Thapanda: ಕೃಷಿ ತಾಪಂಡ ಮನೆಯಲ್ಲಿ ಅವರ ಸ್ನೇಹಿತ ಆತ್ಮಹತ್ಯೆ ಮಾಡಿಕೊಂಡಿದ್ದರು. ಉದ್ಯಮಿ ವೈಶಾಖ್ ಮೃತರು. ಆರ್​ಆರ್​ ನಗರದಲ್ಲಿರುವ ಎಲಿಗೆಂಟ್ ಟೆರೇಸ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿತ್ತು. ವೈಶಾಖ್ ತಂದೆ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ. ಇದಾದ ಬಳಿಕ ನಟಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಅತ್ಯಂತ ದುಃಖದಿಂದ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಕೃಷಿ ತಾಪಂಡ

ನಟಿ ಹಾಗೂ ಬಿಗ್​ ಬಾಸ್​ನ ಮಾಜಿ ಸ್ಪರ್ಧಿ ಕೃಷಿ ತಾಪಂಡ (krishi tapanda) ಮನೆಯಲ್ಲಿ ಅವರ ಸ್ನೇಹಿತ ಆತ್ಮಹತ್ಯೆ ಮಾಡಿಕೊಂಡಿದ್ದರು. ಉದ್ಯಮಿ ವೈಶಾಖ್ (Vaishak) ಮೃತರು. ಆರ್​ಆರ್​ ನಗರದಲ್ಲಿರುವ ಎಲಿಗೆಂಟ್ ಟೆರೇಸ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿತ್ತು. ವೈಶಾಖ್ ತಂದೆ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ. ಇದಾದ ಬಳಿಕ ನಟಿ ಭಾವನಾತ್ಮಕ (Emotional Post) ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಅತ್ಯಂತ ದುಃಖದಿಂದ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಕೃಷಿ ತಾಪಂಡ ಪೋಸ್ಟ್‌

ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ…

ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ.

ಆಯ್ಕೆ ಮಾಡಿಕೊಂಡದ್ದರಿಂದಲ್ಲ…

ಬೇರೆ ದಾರಿಯೇ ಇಲ್ಲದ ಕಾರಣ ಎಂದು ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಪೂರ್ಣ ಎಂದು ಏಕಾಂತದಲ್ಲಿ ಕುಳಿತುಕೊಂಡಿರುವ ಫೋಟೋ, ಶ್ವಾನಗಳ ಫೋಟೋ, ಪುಸ್ತಕದ ಫೋಟೋ, ಗಿಡಕ್ಕೆ ನೀರು ಹಾಕುವ ಈ ರೀತಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಕ್ಕಿ ಡಿಕ್ಕಿ: ಬೆಂಗಳೂರು-ಮುಂಬೈ ಇಂಡಿಗೋ ವಿಮಾನ ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬ

ಇದಕ್ಕೂ ಮುಂಚೆ ನಟಿ ''ನಾನು ಇಂಥದ್ದನ್ನು ಬರೆಯಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಇದನ್ನು ಬರೆಯಲು ಅಥವಾ ಜಗತ್ತಿನೊಂದಿಗೆ ಹಂಚಿಕೊಳ್ಳಲು ನನಗೆ ಮಾನಸಿಕ ಶಕ್ತಿಯೂ ಇಲ್ಲ. ಇಂತಹ ಸಮಯದಲ್ಲಿ ನಾನು ಮಾಡಲು ಬಯಸದ ಕೆಲಸವೆಂದರೆ ಸಾರ್ವಜನಿಕ ಹೇಳಿಕೆ ನೀಡುವುದು. ಆದರೆ ನನ್ನ ಮೇಲೆ, ನನ್ನ ಸ್ನೇಹಿತರ ಮೇಲೆ ಮತ್ತು ನಮ್ಮ ಕುಟುಂಬಗಳ ಮೇಲೆ ಅಪಾರ ಒತ್ತಡ, ನಿರಂತರ ಊಹಾಪೋಹಗಳು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಂದಾಗಿ ನಾನು ಹೇಳಿಕೆ ನೀಡುತ್ತಿದ್ದೇನೆ. ಊಹಿಸಲಾಗದ ನಷ್ಟದಿಂದ ಬದುಕುಳಿಯಲು ನಾವು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಅದನ್ನು ವಿವರಿಸಬೇಕೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಕಳೆದ ಕೆಲ ದಿನಗಳು ನನ್ನ ಜೀವನವನ್ನು ನಾನು ಎಂದಿಗೂ ಊಹಿಸದ ರೀತಿಯಲ್ಲಿ ಬದಲಾಯಿಸಿವೆ.



ನಡೆದ ಎಲ್ಲಾ ವಿಷಯಗಳ ಜೊತೆಗೆ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದ ಒಬ್ಬ ವ್ಯಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ - ನನ್ನೊಂದಿಗೆ ಸದಾ ನಿಂತು, ನನ್ನನ್ನು ರಕ್ಷಿಸಿ, ನನ್ನನ್ನು ದಯೆಯಿಂದ ನೋಡಿಕೊಂಡ ವ್ಯಕ್ತಿ. ಅವರನ್ನು ಕಳೆದುಕೊಂಡಿರುವುದು ಪದಗಳಿಂದ ವಿವರಿಸಲಾಗದಷ್ಟು ಶೂನ್ಯ ಅನುಭವ. ಈ ನಷ್ಟವನ್ನು ನಾನು ನಿಜವಾಗಿಯೂ ನಿಭಾಯಿಸುತ್ತೇನೆಯೇ ಎಂಬುದು ನನಗೆ ತಿಳಿದಿಲ್ಲ'' ಎಂದು ಪೋಸ್ಟ್​​ನ ಮೊದಲ ಪೇಜ್​ನಲ್ಲಿ ಬರೆದುಕೊಂಡಿದ್ದರು.

'ನಾನು ಯಾವಾಗಲೂ ನಂಬುವ ಒಂದು ವಿಷಯವಿದ್ದರೆ, ಅದು ಇದಾಗಿದೆ: ನೀವು ಯಾರನ್ನಾದರೂ ನಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅವರ ಕಣ್ಣೀರಿಗೆ ಕಾರಣರಾಗಬೇಡಿ. ನೀವು ಯಾರಿಗಾದರೂ ಬದುಕಲು ಒಂದು ಕಾರಣವನ್ನು ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳಲು ಕಾರಣರಾಗಬೇಡಿ. ಕೈಮುಗಿದು ಕೇಳುತ್ತೇನೆ, ಲೆಟ್​ ಹಿಮ್​ ರೆಸ್ಟ್ ಇನ್ ಪೀಸ್. ಮತ್ತು ಅವರ ಕುಟುಂಬ, ಅವರ ಸ್ನೇಹಿತರು ಮತ್ತು ನಮ್ಮನ್ನು ಈ ದುಃಖದಲ್ಲಿ ಶಾಂತಿಯಿಂದ ಇರಲು ಬಿಡಿ.

ಇದನ್ನೂ ಓದಿ: Dolly Dhananjay: ಮಗನ ಮೊದಲ ಫೋಟೋ ಹಂಚಿಕೊಂಡ ಡಾಲಿ ಧನಂಜಯ್‌

ದಯವಿಟ್ಟು ದಯೆಯನ್ನು ಆರಿಸಿ. ನಾನು ನಿಮ್ಮನ್ನು ಬೆಗ್​ ಮಾಡಿಕೊಳ್ಳುತ್ತೇನೆ, ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಬರೆದುಕೊಂಡಿದ್ದರು.

Yashaswi Devadiga

View all posts by this author