ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

22ನೇ ವಯಸ್ಸಿಗೆ ಜೀವ ಕಳೆದುಕೊಂಡ ʻಕುಂಕುಮ್‌ ಭಾಗ್ಯʼ ಸೀರಿಯಲ್‌ ನಟಿ ಸಂಚಿತಾ ಉಗಾಲೆ; ಆತ್ಮಹತ್ಯೆಗೂ ಮುನ್ನ ಶೇರ್‌ ಮಾಡಿದ ರೀಲ್ಸ್‌ನಲ್ಲಿ ಏನಿದೆ?

'ಕುಂಕುಮ್ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ 22 ವರ್ಷದ ಯುವ ನಟಿ ಸಂಚಿತಾ ಉಗಾಲೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎನ್ನಲಾಗಿದೆ.

'ಕುಂಕುಮ್ ಭಾಗ್ಯ' ಮತ್ತು 'ವಾಗ್ಲೆ ಕಿ ದುನಿಯಾ' ದಂತಹ ಜನಪ್ರಿಯ ದೂರದರ್ಶನ ಧಾರಾವಾಹಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದ ನಟಿ ಸಂಚಿತಾ ಉಗಾಲೆ ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

22ನೇ ವಯಸ್ಸಿಗೆ ಪ್ರಾಣಬಿಟ್ಟ ನಟಿ ಸಂಚಿತಾ

ನಟಿ ಸಂಚಿತಾ ಅವರಿಗೆ ಈಗ ಕೇವಲ 22 ವರ್ಷ ವಯಸ್ಸು. ಇಷ್ಟು ಚಿಕ್ಕವಯಸ್ಸಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದೇನಾಗಿತ್ತು ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಭಾನುವಾರ ಸಂಜೆ 7 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ನಲ್ಲಸೋಪಾರಾ ಪ್ರದೇಶದಲ್ಲಿರುವ ತಮ್ಮ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂಚಿತಾ ಉಗಾಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. "ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸ್‌ ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ನಮಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಮತ್ತು ಯಾವುದೇ ಡೆತ್ ನೋಟ್ ಕೂಡ ಸಿಕ್ಕಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳಿನ ʻಕಯಲ್ʼ ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆ; ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನಡೆದ ಘಟನೆ!

ಅತ್ತ ಸಂಚಿತಾ ಉಗಾಲೆ ಪೋಷಕರು ಕೂಡ ಮಗಳ ಸಾವಿನಲ್ಲಿ ನಮಗೆ ಯಾವುದೇ ರೀತಿಯ ಸಂಶಯವಿಲ್ಲ ಮತ್ತು ಮಗಳ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಟಿ ಸಂಚಿತಾ ಉಗಾಲೆ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರೀಲ್ಸ್‌ ಹಂಚಿಕೊಂಡಿದ್ದ ಸಂಚಿತಾ

ಸಂಚಿತಾ ಉಗಾಲೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಗಂಟೆಗಳ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೊನೆಯ ಪೋಸ್ಟ್ ಹಂಚಿಕೊಂಡಿದ್ದರು. ಆ ವೀಡಿಯೊದಲ್ಲಿ ಅವರು ಅತ್ಯಂತ ಸಂತೋಷದಿಂದ ಮತ್ತು ಉತ್ಸಾಹದಿಂದ ಕಾಣಿಸಿಕೊಂಡಿದ್ದರು. ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಸೂಪರ್ ಹಿಟ್ ಹಾಡು ‘ರಾಧಾ’ಗೆ ಅವರು ಹೆಜ್ಜೆ ಹಾಕಿದ್ದರು. ಸದ್ಯ ಈ ವಿಡಿಯೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸಂಚಿತಾ ಶೇರ್‌ ಮಾಡಿದ ಕೊನೇ ರೀಲ್ಸ್



ಯಾರೀ ಸಂಚಿತಾ ಉಗಾಲೆ?

ಸಂಚಿತಾ ಉಗಾಲೆ ಅವರು 'ಕುಂಕುಮ್ ಭಾಗ್ಯ' ಧಾರಾವಾಹಿಯಲ್ಲಿ ‘ದಿಯಾ ಟಂಡನ್’ ಪಾತ್ರದ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಈ ಪಾತ್ರ ಸಿಕ್ಕಿದ್ದು ತಮ್ಮ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಯಿತು ಮತ್ತು ಇದು ತಮಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿತು ಎಂದು ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಸಂಚಿತಾ ಹೇಳಿಕೊಂಡಿದ್ದರು. ಇದಲ್ಲದೆ ಅವರು 'ವಾಗ್ಲೆ ಕಿ ದುನಿಯಾ - ನಯಿ ಪೀಢಿ ನಯೇ ಕಿಸ್ಸೆ' ಧಾರಾವಾಹಿಯಲ್ಲೂ ನಟಿಸಿದ್ದರು ಮತ್ತು 'ದಿಲ್‌ವಾಲಿ ದುಲ್ಹಾ ಲೇ ಜಾಯೇಗಿ' ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಕಿರುತೆರೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲೂ ಸಂಚಿತಾ ಕಾಣಿಸಿಕೊಂಡಿದ್ದರು. ವಿಕ್ಕಿ ಕೌಶಲ್ ನಟನೆಯ ಐತಿಹಾಸಿಕ ಸಾಹಸ ಪ್ರಧಾನ ಚಿತ್ರ ‘ಛಾವಾ’ ಸಿನಿಮಾದಲ್ಲಿ ‘ತಾರಾ ರಾಣಿ’ಯ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಜೊತೆಗೆ ಮನೋಜ್ ಬಾಜಪೇಯಿ ನಟನೆಯ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸಿನಿಮಾ ‘ಸೈಲೆನ್ಸ್ 2: ದಿ ನೈಟ್ ಔಲ್ ಬಾರ್ ಶೂಟೌಟ್’ನಲ್ಲೂ ಒಂದು ಸಣ್ಣ ಪಾತ್ರದಲ್ಲಿ ಸಂಚಿತಾ ನಟಿಸಿದ್ದರು.