ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಲ್ಲರೆದುರು ತುಟಿಗೆ ಮುತ್ತಿಕ್ಕಿದ ಮಹಿಳಾ ಅಭಿಮಾನಿ; ನಟಿ ನಿಖಿತಾ ರಾವಲ್‌ಗೆ ತೀವ್ರ ಮುಜುಗರ!

ನಟಿ ನಿಖಿತಾ ರಾವಲ್ ಅವರಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರಿಂದ ತೀವ್ರ ಮುಜುಗರದ ಘಟನೆ ಎದುರಾಗಿದೆ. ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದಾಗ ಸೆಲ್ಫಿಗಾಗಿ ಬಂದ ಮಹಿಳೆ, ಬಲವಂತವಾಗಿ ನಿಖಿತಾ ಅವರ ಕೆನ್ನೆ ಹಾಗೂ ತುಟಿಗೆ ಮುತ್ತಿಟ್ಟಿದ್ದಾಳೆ.

ನಟಿ ನಿಕಿತಾ ರಾವಲ್ ಅವರಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಅನಿರೀಕ್ಷಿತ ಹಾಗೂ ಮುಜುಗರದ ಘಟನೆಯೊಂದು ಎದುರಾಗಿದೆ. ಕಾರ್ಯಕ್ರಮದ ವೇಳೆಯಲ್ಲಿ ನಿಕಿತಾ ಅವರ ಬಳಿ ಬಂದ ಮಹಿಳಾ ಅಭಿಮಾನಿಯೊಬ್ಬರು, ಇದ್ದಕ್ಕಿದ್ದಂತೆ ನಿಕಿತಾ ಅವರ ತುಟಿಗೆ ಮುತ್ತಿಟ್ಟಿದ್ದು, ಈ ಘಟನೆಯಿಂದಾಗಿ ನಿಕಿತಾ ತೀವ್ರ ಆಘಾತ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಷ್ಟಕ್ಕೂ ನಡೆದಿದ್ದೇನು?

ಕಾರ್ಯಕ್ರಮವೊಂದರಲ್ಲಿ ನಿಕಿತಾ ರಾವಲ್ ಅವರು ಪಾಪರಾಜಿ ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿದ್ದಾಗ, ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿಗಾಗಿ ಕೇಳಿಕೊಂಡರು. ನಿಕಿತಾ ಆರಂಭದಲ್ಲಿ ತುಂಬಾ ಕೂಲ್‌ ಆಗಿ ಸ್ಪಂದಿಸಿ, ಆ ಅಭಿಮಾನಿಯ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಆದರೆ, ಆ ಮಹಿಳಾ ಅಭಿಮಾನಿ ಮೊದಲು ನಿಕಿತಾ ಕೆನ್ನೆಗೆ ಮುತ್ತಿಟ್ಟಿದ್ದಾರೆ. ನಂತರ ಇದ್ದಕ್ಕಿದ್ದಂತೆ ತಮ್ಮತ್ತ ಎಳೆದುಕೊಂಡು ತುಟಿಗೆ ಮುತ್ತಿಟ್ಟಿದ್ದಾರೆ.

Actress Samantha: ಪಿರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ಈಗಲೂ ಮುಜುಗರದ ವಿಚಾರ- ನಟಿ ಸಮಂತಾ ಬೇಸರ!

ಆ ಮಹಿಳೆಯ ಇಂತಹ ವರ್ತನೆಯಿಂದ ನಿಕಿತಾ ಆಘಾತಗೊಂಡಿದ್ದಾರೆ. ಆ ಮಹಿಳೆಯನ್ನು ನಿಕಿತಾ ತಡೆಯಲು ಯತ್ನಿಸಿದರೂ, ಅದು ಯಶಸ್ವಿ ಆಗಲಿಲ್ಲ. ಆ ಅಭಿಮಾನಿ ನಿಕಿತಾರನ್ನು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಲ್ಲಿಂದ ತೆರಳುವ ಮುನ್ನ ಮತ್ತೆ ಕೆನ್ನೆಗೆ ಮುತ್ತಿಟ್ಟಿದ್ದು, ಇದರಿಂದ ನಟಿ ತೀವ್ರ ಮುಜುಗರಕ್ಕೆ ಒಳಗಾಗುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡಿದೆ.

ನಟಿ ನಿಕಿತಾ ರಾವಲ್ ಅವರ ಹಿನ್ನೆಲೆ

ಮುಂಬೈನಲ್ಲಿ ಜನಿಸಿ, ಮಿಥಿಬಾಯಿ ಕಾಲೇಜಿನಲ್ಲಿ ಪದವಿ ಮುಗಿಸಿರುವ ನಿಕಿತಾ ರಾವಲ್, ನಟಿ ಹಾಗೂ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. 'ಮಿಸ್ಟರ್ ಹಾಟ್ ಮಿಸ್ಟರ್ ಕೂಲ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಹಿಂದಿ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದ್ದಾರೆ. ಅನಿಲ್ ಕಪೂರ್ ನಟನೆಯ 'ಬ್ಲ್ಯಾಕ್ & ವೈಟ್', ಅಕ್ಷಯ್ ಕುಮಾರ್ ಅಭಿನಯದ 'ಗರಂ ಮಸಾಲಾ', 'ಅಮ್ಮಾ ಕಿ ಬೋಲಿ' ಮತ್ತು 'ಕ್ಯೂಟ್ ಕಮೀನಾ' ಮುಂತಾದ ಹಿಂದಿ ಸಿನಿಮಾಗಳಲ್ಲಿ ನಿಕಿತಾ ಮಿಂಚಿದ್ದಾರೆ.

2012ರಲ್ಲಿ 'ತಿಂಪಾ' ಎಂಬ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು, ವಿಕ್ರಮ್ ರಾಯ್ ಜೊತೆಗೆ 'ಇಚ್ಛಾಧಾರಿ ನಾಗಿಣಿ' ಪಾತ್ರದಲ್ಲೂ ಅಭಿನಯಿಸಿದ್ದಾರೆ. ಸದ್ಯ ನಿಕಿತಾ ರಾವಲ್ ಅವರು ನಟರಾದ ಅರ್ಷದ್ ವರ್ಸಿ ಮತ್ತು ಚಂಕಿ ಪಾಂಡೆ ಅವರೊಂದಿಗೆ 'ರೋಟಿ ಕಪ್ಡಾ ಔರ್ ರೊಮ್ಯಾನ್ಸ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.