ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa serial) ರೋಚಕ ತಿರುವು ಪಡೆದುಕೊಂಡಿದ್ದು, ಹೊಸ ಪ್ರೋಮೋ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಜಯಂತ್ - ಜಾಹ್ನವಿ ಮಧ್ಯೆ ಹೊಸ ಕಥೆ ಶುರು ಆಗಿದೆ. ಚಿನ್ನು ಮರಿಯ (Chinnu Mari) ಹೊಸ ಹೆಜ್ಜೆಗೆ ಥ್ರಿಲ್ ಆಗಿದ್ದಾರೆ ವೀಕ್ಷಕರು. ಜಯಂತ್‌ನ (Jayanth) ತಂತ್ರಗಳನ್ನೇ ಬಳಸಿ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಜಾಹ್ನವಿಯ ಉಗ್ರರೂಪಕ್ಕೆ ಚಪ್ಪಾಳೆ ಕೊಡುತ್ತಿದ್ದಾರೆ ವೀಕ್ಷಕರು.
ಚಿನ್ನುಮರಿ ಟಾರ್ಚರ್ ಕೊಡಲು ಶುರು
ಸೈಕೋ ಜಯಂತ್ ಕಾಟಕ್ಕೆ ಬೇಸತ್ತು ಜಾಹ್ನವಿ ಎಷ್ಟೋ ವರ್ಷಗಳ ಕಾಲ ಅವನಿಂದ ದೂರ ಇದ್ದಳು. ಅಜ್ಜಿ ಕೂಡ ಕೋಮಾಗೆ ಹೋಗಿದ್ದರು. ಆದರೆ ಈಗ ಹಾಗಲ್ಲ. ಎಲ್ಲವೂ ಉಲ್ಟಾ ಪಲ್ಟಾ. ಜಾಹ್ನವಿಯನ್ನು ಚಿನ್ನುಮರಿ ಎಂದೇ ಕರೆಯುತ್ತಿದ್ದ ಜಯಂತ್, ಆಕೆಗೆ ಪ್ರೀತಿ ಹೆಸರಲ್ಲಿ ಟಾರ್ಚರ್ ಕೊಡಲು ಆರಂಭಿಸಿದ್ದ. ಇದೇ ಪ್ರೀತಿಯ ಹೆಸರಲ್ಲಿ ಈಗ ಚಿನ್ನುಮರಿ ಟಾರ್ಚರ್ ಕೊಡಲು ಅಣಿಯಾಗಿದ್ದಾಳೆ.
ಇದನ್ನೂ ಓದಿ: Amruthadhaare Serial: ಇಂದು ಅಮೃತಧಾರೆ ಮಹಾಸಂಚಿಕೆ; ಜೋಡಿ ಜೀವಗಳ ರೊಮ್ಯಾಂಟಿಕ್ ಎಪಿಸೋಡ್
ಇಷ್ಟು ದಿನ ಆದ ಮೇಲೆ ಮನೆಗೆ ಬರ್ತಾ ಇದ್ದೀರಾ, ವೆಲ್‌ಕಮ್ ಬ್ಯಾಕ್ ಚಿನ್ನು ಮರಿ ಎಂದು ಗುಲಾಬಿ ಹೂಗುಚ್ಛವನ್ನು ಜಯಂತ್ , ಜಾಹ್ನವಿ ಕೈಗೆ ಇರಿಸಿದ್ದಾರೆ. ಗುಲಾಬಿ ಹೂವು ತೆಗೆದುಕೊಳ್ಳುವ ಬದಲು ಜಯಂತ್ ಕೈಯಲ್ಲೇ ಗುಲಾಬಿ ಹೂವಿನ ಮುಳ್ಳುಗಳು ತಾಗುವಂತೆ ಬಿಗಿಯಾಗಿ ಕೈಹಿಡಿದುಕೊಂಡಿರುವುದು ಇದೆ. ಅಲ್ಲದೆ ಈ ಸೀನ್‌ನಲ್ಲಿ ಜಯಂತ್ ಅವರ ಕೈಯಿಂದ ರಕ್ತಸ್ರಾವ ಆಗುತ್ತಿರುವಂತೆ ತೋರಿಸಲಾಗಿದೆ. ಅದರೊಂದಿಗೆ ಬಿಗ್ ಟ್ವಿಸ್ಟ್ ಎನ್ನುವ ಬರಹವನ್ನು ತೋರಿಸಲಾಗಿದೆ.
ಜಿರಳೆಯನ್ನು ಜಯಂತ್ ಹಾಲಿಗೆ ಹಾಕಿದ್ದ ಸೀನ್ ಇತ್ತು. ಇದೀಗ ಜಾನವಿ ಜಿರಳೆಗೆ ಹೆದರಿಕೊಂಡಂತೆ ಮಾಡಿ ಆ ಜಿರಳೆಯನ್ನು ಹಾಲಿಗೆ ಹಾಕಿದ್ದಾಳೆ. ಕೊಡಿ ಬಿಸಾಕುತ್ತೀನಿ ಎಂದು ಜಯಂತ್ ಕೇಳಿದರೂ, ನೀವು ಜಿರಳೆ ಸಿಕ್ಕರೆ ಏನು ಮಾಡುತ್ತಿದ್ರಿ ಅಂತ ಹಳೆಯದನ್ನ ನೆನಪಿಸಿದ್ದಾಳೆ.
ಬೇಡ ಚಿನ್ನು ಮರಿ ಅಂತಂದ್ರೂ ಜಿರಳೆ ಇರುವ ಹಾಲನ್ನ ಜಯಂತ್‌ಗೆ ಕುಡಿಸಿರುವುದು ಇದೆ. ಜಾನವಿ - ಜಯಂತ್‌ಗೆ ಫೈನಲ್ ವಾರ್ನಿಂಗ್ ಕೊಟ್ಟಿದ್ದಾಳೆ. ನನ್ನನ್ನೇ ನರಳಾಡಿಸಿದವನು ನೀನು, ನರಕ ಅಂದ್ರೆ ಹೇಗಿರುತ್ತೆ ಅಂತ ಇನ್ಮೇಲೆ ನಾನು ನಿನಗೆ ತೋರಿಸುತ್ತೇನೆ ಅಂತ ಪ್ರೋಮೋದಲ್ಲಿ ಹೇಳಿರುವುದು ಇದೆ.
ಇದನ್ನೂ ಓದಿ: Anchor Anushree : ರೋಷನ್ ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅನ್ನೋ ಭಯ ಇತ್ತು; ಅನುಶ್ರೀ
ಇಷ್ಟು ದಿನಗಳ ಕಾಲ ಜಾಹ್ನವಿ ತಲೆಮರಿಸಿಕೊಂಡೇ ಓಡಾಡುತ್ತಿದ್ದಳು. ಆದರೆ, ಈಗ ಕೊನೆಗೂ ಆಕೆ ಸಿಕ್ಕಿದ್ದಾಳೆ. ಜಯಂತ್ ಅದೇ ಮಾರ್ಗದಲ್ಲಿ ಜಾಹ್ನವಿ ಟಾರ್ಚರ್ ನೀಡಲು ಆರಂಭಿಸಿದ್ದಾಳೆ. ಇದು ಧಾರಾವಾಹಿ ದಿಕ್ಕನ್ನೇ ಬದಲಿಸಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಮೂಡಿದೆ. ಲಕ್ಷ್ಮೀ ನಿವಾಸ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಪ್ರಸಾರ ಕಾಣುತ್ತಿದೆ.