ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Landlord Movie OTT: ಯುಗಾದಿ ಹಬ್ಬಕ್ಕೆ ಬರ್ತಿದ್ದಾನೆ ‘ಲ್ಯಾಂಡ್​​ಲಾರ್ಡ್’! ಸ್ಟ್ರೀಮಿಂಗ್‌ ಎಲ್ಲಿ?

Landlord Movie OTT: ದುನಿಯಾ ವಿಜಯ್ ಅವರ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸಾರಥಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.

ಲ್ಯಾಂಡ್ ಲಾರ್ಡ್ ಸಿನಿಮಾ

ದುನಿಯಾ ವಿಜಯ್ (duniya Vijay) ಅವರ ‘ಲ್ಯಾಂಡ್​​ಲಾರ್ಡ್’ (Land Lord Movie) ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು (OTT) ಹೇಳುತ್ತದೆ. ಈ ಚಿತ್ರವು ಸಾರಥಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.

ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ‌ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿದ್ದಾರೆ. ಇಂತಹ ಒಂದು ಬಹುತಾರಾಗಣವನ್ನು ಹೊಂದಿರುವ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ ಸಿನಿಮಾ.

ಇದನ್ನೂ ಓದಿ: South OTT releases this week: ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

‘ಲ್ಯಾಂಡ್​​ಲಾರ್ಡ್’ ಜೀ5ನಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದಲ್ಲಿ ತನ್ನ ಪಾತ್ರದ ಕುರಿತು ಮಾತನಾಡಿದ ನಟ ದುನಿಯಾ ವಿಜಯ್, "ನಾನು ರಾಚಯ್ಯ ಎಂಬ ಪಾತ್ರವನ್ನು ವಹಿಸಿದ್ದೇನೆ. ರಾಚಯ್ಯನು ಒಬ್ಬ ಅಂತರ್ಮುಖಿ‌. ಹೆಚ್ಚು ಮಾತನಾಡದೇ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಈ ಪಾತ್ರ ನನಗೆ ಒಂದು ಸವಾಲಾಗಿತ್ತು. ಇದೀಗ ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ."ಎಂದರು.



ಚಿತ್ರದ ಬಗ್ಗೆ ಹಾಗೂ ತನ್ನ ಪಾತ್ರದ ಕುರಿತು ಮಾತನಾಡಿದ ನಟಿ ರಚಿತಾ ರಾಮ್, "ಚಿತ್ರವು ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳು ಆಳವಾಗಿವೆ. ಅಗಾಧವಾದ ಭಾವನೆಗಳನ್ನು ವ್ಯಕ್ತಪಡಿಸುವ ಕಥೆಯೇ "ಲ್ಯಾಂಡ್ ಲಾರ್ಡ್". ಇದರಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ ಎಂದರು.

ದುನಿಯಾ ವಿಜಯ್ ಪುತ್ರಿ ರಿತನ್ಯ, ಸಿನಿಮಾನಲ್ಲಿಯೂ ಸಹ ದುನಿಯಾ ವಿಜಯ್ ಪಾತ್ರದ ಪುತ್ರಿಯ ಪಾತ್ರದಲ್ಲಿಯೇ ನಟಿಸಿದ್ದರು. ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ಸಿರೀಶ್ ಬೈಕಾಡಿ ಸಹ ಈ ಸಿನಿಮಾನಲ್ಲಿ ನಟಿಸಿದ್ದರು. ದುನಿಯಾ ವಿಜಯ್ ಪ್ರಸ್ತುತ ಇನ್ನೂ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’, ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿ, ವಿಜಯ್ ಸೇತುಪತಿ ನಟಿಸುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾ, ಅವರದ್ದೇ ನಿರ್ದೇಶನದ ‘ಸಿಟಿಲೈಟ್ಸ್’, ಸೂರಿ ನಿರ್ದೇಶನದ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘

ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Vinay Gowda: ಸರಿಯಾಗಿ ನಾಯಿಗಳ ಹೆಸರೇ ಗೊತ್ತಿಲ್ಲ; ಇಂಥವರನ್ನ ಒದ್ದು ಓಡಿಸಬೇಕು: ಡಾಗ್‌ ಸತೀಶ್‌ ಬಗ್ಗೆ ವಿನಯ್‌ ಗೌಡ ಗರಂ

ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

Yashaswi Devadiga

View all posts by this author