ನಟ ದುನಿಯಾ ವಿಜಯ್ (Duniya Vijay) ಅಭಿನಯದ "ಲ್ಯಾಂಡ್ ಲಾರ್ಡ್" (Land Lord Movie) ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ (Direction) ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ವಿಜಯ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದರು. ರಾಜ್. ಬಿ ಶೆಟ್ಟಿ (Raj B shetty) ವಿಲನ್ ಆಗಿ ಅಬ್ಬರಿಸಿದ್ದರು. ಇನ್ನು ವಿಜಯ್ ಪುತ್ರಿ ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು. ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆದ ಈ ಸಿನಿಮಾ ಒಟಿಟಿಯಲ್ಲಿಯೂ ಸಹ ಪ್ರೇಕ್ಷಕರನ್ನು ಸೆಳೆಯಲಿದೆ.
ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ
ಉಮಾಶ್ರೀ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೂರಜ್ ಗೌಡ ಹಾಗೂ ಸತ್ಯ ಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದರು. ವಿಜಯ್, ರಚಿತಾ ರಾಮ್, ಉಮಾಶ್ರೀ, ರಾಜ್ ಬಿ ಶೆಟ್ಟಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ಸರ್ಕಾರದಿಂದ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿತ್ತು.
ಇದನ್ನೂ ಓದಿ: Vijay and Trisha Krishnan: ತ್ರಿಷಾ ಬಗ್ಗೆ ಬಹಿರಂಗ ವೇದಿಕೆಯಲ್ಲೇ ನಿರ್ದೇಶಕ ಪಾರ್ತಿಬನ್ ವ್ಯಂಗ್ಯ!
ಊಳಿಗಮಾನ್ಯ ಪದ್ಧತಿ, ಕೆಳವರ್ಗದ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ರೀತಿಯ ವಿಚಾರಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿತ್ತು. ನಾಯಕಿ ಪಾತ್ರದಲ್ಲಿ ನಟಿಸಿದ್ದ ರಚಿತಾ ರಾಮ್ ಸಹ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದು ವಿಶೇಷವಾಗಿತ್ತು. ಈಗ ಒಟಿಟಿ ಕುರಿತಿ ಸುದ್ದಿಯೊಂದು ವೈರಲ್ ಆಗ್ತಿದೆ.
ಜೀ ಸಂಸ್ಥೆಗೆ ಒಟಿಟಿ ರೈಟ್ಸ್ ಸೇಲ್
‘ಲ್ಯಾಂಡ್‌ಲಾರ್ಡ್’ ಸಿನಿಮಾವು ಜೀ5 ಒಟಿಟಿಯಲ್ಲಿ ಮಾರ್ಚ್ 13 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಯುಗಾದಿ ಹಬ್ಬದ ವೇಳೆಗೆ ಅಂದರೆ ಮಾರ್ಚ್ 18ರ ವೇಳೆಗೆ ಈ ಸಿನಿಮಾ ಒಟಿಟಿಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೀ ಸಂಸ್ಥೆಗೆ ಒಟಿಟಿ ರೈಟ್ಸ್ ಸೇಲ್ ಆಗಿದೆ. ಯಾವಾಗ ಸಿನಿಮಾ ಸ್ಟ್ರೀಮಿಂಗ್ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಯುಗಾದಿ ಹಬ್ಬಕ್ಕೆ ಸಿನಿಮಾ ಒಟಿಟಿಗೆ ಬರಬಹುದು ಎಂದು ಮಾಧ್ಯಮವೊಂದಕ್ಕೆ ಜಡೇಶ್ ಹೇಳಿರುವುದಾಗಿ ವರದಿಯಾಗಿದೆ.
ಈ ಸಿನಿಮಾ ತೆರೆ ಬಂದ ಸಂದರ್ಭದಲ್ಲಿಯೂ ಸಿ ಎಂ ಹಾರೈಸಿದ್ದರು. ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರವು ಸಾಮಾಜಿಕ ಸಂದೇಶದ ಜೊತೆಗೆ ಕಲಾತ್ಮಕತೆಯನ್ನೂ ಹೊಂದಿರುವುದು ಸಂತಸದ ವಿಚಾರವಾಗಿದೆ.
ಇಂತಹ ಕಥಾಹಂದರದ ಚಿತ್ರಗಳು ಜನರಲ್ಲಿ ಚಿಂತನೆ ಮೂಡಿಸಿ, ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಬಲ್ಲವು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೂಲಕ ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟರಿಗೆ ಲ್ಯಾಂಡ್ ಲಾರ್ಡ್ ಒಂದು ಮಾದರಿಯಾಗಲಿ ಎಂದು ಆಶಿಸಿದ್ದರು.
ಇದನ್ನೂ ಓದಿ: Trisha Krishnan: ಬಹಿರಂಗ ವೇದಿಕೆಯಲ್ಲೇ ತ್ರಿಷಾ ಬಗ್ಗೆ ಪಾರ್ತಿಬನ್ ವ್ಯಂಗ್ಯ; ಖಡಕ್ ಆಗಿ ತಿರುಗೇಟು ಕೊಟ್ಟ ನಟಿ!
ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ಸಿರೀಶ್ ಬೈಕಾಡಿ ಸಹ ಈ ಸಿನಿಮಾನಲ್ಲಿ ನಟಿಸಿದ್ದರು. ದುನಿಯಾ ವಿಜಯ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’, ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿ, ವಿಜಯ್ ಸೇತುಪತಿ ನಟಿಸುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾ, ಅವರದ್ದೇ ನಿರ್ದೇಶನದ ‘ಸಿಟಿಲೈಟ್ಸ್’, ಸೂರಿ ನಿರ್ದೇಶನದ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.