ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಗಣಪ' ಖ್ಯಾತಿಯ ಸಂತೋಷ್ ಬಾಲರಾಜ್ ನಟನೆಯ ಕೊನೆಯ ಸಿನಿಮಾ ಬಿಡುಗಡೆಗೆ ಸಜ್ಜು; ಪುಣ್ಯತಿಥಿಯಂದು ಫಸ್ಟ್‌ಲುಕ್‌ ರಿಲೀಸ್!‌

'ಗಣಪ' ಹಾಗೂ 'ಕರಿಯ-2' ಚಿತ್ರಗಳ ಮೂಲಕ ಜನಪ್ರಿಯರಾಗಿದ್ದ ನಟ ಸಂತೋಷ್ ಬಾಲರಾಜ್ ಅಭಿನಯದ ಕೊನೆಯ ಚಿತ್ರ 'ರತ್ನಗರ್ಭ' ಬಿಡುಗಡೆಗೆ ಸಿದ್ಧವಾಗಿದೆ. ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ದಿನವಾದ ಆಗಸ್ಟ್ 5 ರಂದು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್‌ ಆಗಲಿದೆ.

'ಗಣಪ' ಮತ್ತು 'ಕರಿಯ-2' ಚಿತ್ರಗಳ ಮೂಲಕ ಹೆಸರುವಾಸಿಯಾಗಿದ್ದ ನಟ ಸಂತೋಷ್ ಬಾಲರಾಜ್ ಅವರು ಕಳೆದ ವರ್ಷದ ಆಗಸ್ಟ್‌ನಲ್ಲಿ ನಿಧನರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಸಂಭವಿಸಿದ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನು ಉಂಟುಮಾಡಿತ್ತು. ಸಂತೋಷ್ ಅವರು ಕೊನೆಯದಾಗಿ ಅಭಿನಯಿಸಿದ್ದ 'ರತ್ನಗರ್ಭ' ಸಿನಿಮಾ ಈಗ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡವು ಆಗಸ್ಟ್ 5 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ.

ಅಂತಿಮ ಹಂತದಲ್ಲಿ ಪ್ರೊಡಕ್ಷನ್‌ ಕೆಲಸಗಳು

ಈ ಚಿತ್ರದಲ್ಲಿ ಸಂತೋಷ್ ಅವರು ಇದುವರೆಗೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರವೊಂದರಲ್ಲಿ ನಟಿಸಿದ್ದರಂತೆ. ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರರಾದ ಸಂತೋಷ್ ನಾಯಕನಾಗಿ ಅಭಿನಯಿಸಿದ ಕೊನೆಯ ಚಿತ್ರವಿದು. ಅವರ ಆಕಸ್ಮಿಕ ನಿಧನದ ನಂತರ, ಚಿತ್ರತಂಡವು ಬಾಕಿ ಇದ್ದ ಸಣ್ಣಪುಟ್ಟ ಚಿತ್ರೀಕರಣದ ಪ್ಯಾಚ್ ವರ್ಕ್ ಹಾಗೂ ವಿಎಫ್‌ಎಕ್ಸ್ ಕೆಲಸಗಳನ್ನು ಪೂರ್ಣಗೊಳಿಸಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ ಈ ಸಿನಿಮಾ, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಪುಣ್ಯಸ್ಮರಣೆಯಂದು ಫಸ್ಟ್‌ ಲುಕ್‌ ರಿಲೀಸ್

ನಟ ಸಂತೋಷ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ (ಆಗಸ್ಟ್ 5) ಅಂಗವಾಗಿ, ಅಂದು ಸಂಜೆ 7 ಗಂಟೆಗೆ ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿಯ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲೇ 'ರತ್ನಗರ್ಭ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ.

Ranjani Raghavan: ಕಮಲ್ ಹಾಸನ್​ಗೆ ರಂಜನಿ ರಾಘವನ್ ಕನ್ನಡ ಪುಸ್ತಕ ಕೊಟ್ಟಿದ್ದೇಕೆ?: ಕೊನೆಗೂ ಸಿಕ್ಕಿತು ಉತ್ತರ

ಸಂಗೀತ ನೀಡಿದ ರವಿ ಬಸ್ರೂರು

ವಿಶಿಷ್ಟ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ 'ಶ್ರೀ ಮಾತಾ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ಮಹಾಂತೇಶ್ ವಿ. ಕೆ. ಬಂಡವಾಳ ಹೂಡಿದ್ದು, ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಹೊಸ ಸ್ಪರ್ಶ ನೀಡಲು ಜನಾರ್ದನ ಪಿ. ಜಾನಿ ಅವರು ಚಿತ್ರಕಥೆ ಬರೆದು, ಕ್ರಿಯೇಟಿವ್ ಡೈರೆಕ್ಟರ್ ಹಾಗೂ ವಿಎಫ್‌ಎಕ್ಸ್ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ, ಗೋಪಾಲ್ ವೆಂಕಟೇಶ್ ಹಾಗೂ ಎ. ಟಿ. ರವೀಶ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸುರೇಶ್ ಅರಸ್ ಮತ್ತು ಕುಮಾರ್ ಎಚ್. ಅವರ ಸಂಕಲನ ಈ ಚಿತ್ರಕ್ಕಿದೆ.‌

ನಾಯಕಿಯಾಗಿ ರಂಜಿನಿ ರಾಘವನ್‌ ನಟನೆ

'ರತ್ನಗರ್ಭ' ಚಿತ್ರದಲ್ಲಿ ಸಂತೋಷ್ ಬಾಲರಾಜ್ ಅವರಿಗೆ ಜೋಡಿಯಾಗಿ 'ಕನ್ನಡತಿ' ಧಾರಾವಾಹಿ ಖ್ಯಾತಿಯ ರಂಜಿನಿ ರಾಘವನ್ ನಟಿಸಿದ್ದಾರೆ. ಜೊತೆಗೆ ಸುಮನ್, ವಿನಯಾ ಪ್ರಸಾದ್, ಸಯ್ಯಾಜಿ ರಾವ್ ಶಿಂಧೆ, ಅವಿನಾಶ್, ಪವಿತ್ರಾ ಲೋಕೇಶ್, ಮುಖ್ಯಮಂತ್ರಿ ಚಂದ್ರು ಮತ್ತು ಎಂ. ಎಸ್. ಉಮೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.