ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

Love Mocktail 3 : ಲವ್ ಮಾಕ್ಟೇಲ್ 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಐವತ್ತು ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ. ಬಿಡುಗಡೆಗೆ ಸುಮುಹೂರ್ತ ಒದಗಿ ಬಂದಿದ್ದರೂ ಸಹ, ಈ ಚಿತ್ರಕ್ಕೆ ಧುರಂಧರ್ 2 ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ಎದುರಿಸಿದ ಲವ್ ಮಾಕ್ಟೇಲ್ 3 ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

ಲವ್ ಮಾಕ್ಟೇಲ್ 3

ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಲವ್ ಮಾಕ್ಟೇಲ್ 3 (love mocktail 3) ಚಿತ್ರ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿಕೊಂಡಿದೆ. ಯಶಸ್ವಿಯಾಗಿ 50 ದಿನ ಪೂರೈಸಿಕೊಂಡಿರೋ ಸಂಭ್ರಮವೀಗ ಚಿತ್ರತಂಡವನ್ನು ಎದುರುಗೊಂಡಿದೆ. ಈ ಸಲುವಾಗಿ ಇಂಥಾದ್ದೊಂದು ರೋಮಾಂಚಕ ಗೆಲುವು ತಂದುಕೊಟ್ಟ ಪ್ರೇಕ್ಷಕರಿಗೆಲ್ಲ ಡಾರ್ಲಿಂಗ್ ಕೃಷ್ಣ (Darling Krishna) ಧನ್ಯವಾದ ಸಲ್ಲಿಸಿದ್ದಾರೆ.

ಲವ್ ಮಾಕ್ಟೇಲ್ 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಐವತ್ತು ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ. ಬಿಡುಗಡೆಗೆ ಸುಮುಹೂರ್ತ ಒದಗಿ ಬಂದಿದ್ದರೂ ಸಹ, ಈ ಚಿತ್ರಕ್ಕೆ ಧುರಂಧರ್ 2 ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ಎದುರಿಸಿದ ಲವ್ ಮಾಕ್ಟೇಲ್ 3 ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

ಇದನ್ನೂ ಓದಿ: Actress Simran: ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.



ಲವ್ ಮಾಕ್ಟೇಲ್ 2ನ ಯಶಸ್ಸಿನ ನಂತರ, ಹಲವಾರು ವರ್ಷಗಳು ಕಳೆದ ಮೇಲೆ ಲವ್ ಮಾಕ್ಟೇಲ್ 3 ತೆರೆ ಮೇಲೆ ಬಂದಿತ್ತು. ಈ ಕಥೆಯು ಆದಿತ್ಯ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ(ಸಂವೃತಾ) ಸುತ್ತ ಸುತ್ತುತ್ತದೆ. ನಿಧಿಯನ್ನು ಆದಿತ್ಯ ಲವ್ ಮಾಕ್ಟೇಲ್ 2ನಲ್ಲಿ ದತ್ತು ತೆಗೆದುಕೊಂಡಿರುತ್ತಾನೆ. ಅವರಿಬ್ಬರ ನಡುವಿನ ತಂದೆ-ಮಗಳ ಬಾಂಧವ್ಯವನ್ನು ಈ ಕಥೆ ಎತ್ತಿ ಹಿಡಿಯಲಿದೆ. ಕಥೆಯು ಈ ತಂದೆ-ಮಗಳ ದಿನಚರಿ, ತುಂಟಾಟ,‌ ಅವರಿಬ್ಬರ ನಡುವಿನ ಪ್ರೀತಿ, ಅವರೊಂದಿಗೆ ಅವರ ಮನೆಯ ಕೇರ್‌ಟೇಕರ್‌ ಜಗ್ಗನ ತಮಾಷೆ ಮುಂತಾದವುಗಳನ್ನು ಹೇಳುತ್ತದೆ.

ಡಾ.ಶಾಂತಾ,‌ ನಿಧಿಯ ನಿಜವಾದ ಅಜ್ಜಿ ತನ್ನ ಮೊಮ್ಮಗಳನ್ನು ಹಿಂದಿರುಗಿಸಲು ಒತ್ತಾಯಿಸಿದಾಗ ಈ ಸುಂದರವಾದ ಸಂಸಾರಕ್ಕೆ ಸಿಡಿಲು ಬಡಿದಂತೆ ಆಗುತ್ತದೆ. ಇದನ್ನು ಆದಿತ್ಯ ಹೇಗೆ ಸರಿಪಡಿಸುತ್ತಾನೆ,‌ ಅವನು ಎದುರಿಸುವ ಸವಾಲುಗಳು, ಆ‌ ಭಾವನಾತ್ಮಕ ತೊಳಲಾಟ ಇತ್ಯಾದಿಗಳನ್ನು ಈ ಚಿತ್ರವು ಬಿಂಬಿಸುತ್ತದೆ.

ಇದನ್ನೂ ಓದಿ: Annayya Serial: ತಂಗಿಗಾಗಿ ಒಂದು ಹೆಜ್ಜೆ ಮುಂದೆ ಇಟ್ಟ ಶಿವಣ್ಣ; ಸೊಸೆಗಾಗಿ ಮುದ್ದಿನ ಮಾವ ಧರಣಿ

ಒಟ್ಟಾರೆ, ಲವ್ ಮೋಕ್ಟೇಲ್ 3 ಒಂದು ವಿಶೇಷವಾದ ಭಾವನಾತ್ಮಕ ಡ್ರಾಮಾ ಚಿತ್ರವಾಗಿದೆ. ಪ್ರೀತಿ, ಬಾಂಧವ್ಯ,‌ ಸ್ನೇಹ, ಮುಂತಾದುವುಗಳನ್ನು ಈ ಕಥೆ ಹೇಳುತ್ತದೆ. ಇದೇ ಮೇ 8ಕ್ಕೆ ಲವ್ ಮಾಕ್ಟೇಲ್ 3 ಜೀ 5 ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

Yashaswi Devadiga

View all posts by this author