ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಮೌಳಿ ಜೊತೆ ʻವಾರಣಾಸಿʼ ಸಿನಿಮಾ ಮಾಡಿದ್ಮೇಲೆ ಮಹೇಶ್ ಬಾಬು ತಲೆಯಲ್ಲಿದೆ ಸೂಪರ್‌ ಪ್ಲ್ಯಾನ್; ಏನದು?

ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರ ʻವಾರಣಾಸಿʼ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಮಹೇಶ್ ಬಾಬು, ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಮುಗಿದ ತಕ್ಷಣ ಸತತವಾಗಿ ಸಿನಿಮಾಗಳನ್ನು ಮಾಡಲು ನಿರ್ಧರಿಸಿದ್ದಾರೆ. 2024ರ ʻಗುಂಟೂರು ಕಾರಂʼ ನಂತರ ಅಭಿಮಾನಿಗಳು 2027ರವರೆಗೆ ಕಾಯಬೇಕಾಗಿರುವುದರಿಂದ, ಆ ಗ್ಯಾಪ್ ತುಂಬಲು ಹೊಸ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಮಹೇಶ್‌ ಬಾಬು.

ತೆಲುಗು ನಟ ಪ್ರಿನ್ಸ್‌ ಮಹೇಶ್‌ ಬಾಬು ಸದ್ಯ ʻವಾರಣಾಸಿʼ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ನಿರ್ದೇಶಕ ರಾಜಮೌಳಿ ಅವರು ಸಿಕ್ಕಾಪಟ್ಟೆ ಶ್ರಮ ಹಾಕಿ ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಅಂದಹಾಗೆ, ಮಹೇಶ್‌ ಬಾಬು ಕಡೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು 2024ರಲ್ಲಿ ತೆರೆಕಂಡ ಗುಂಟೂರು ಕಾರಂ ಚಿತ್ರದಲ್ಲಿ. ಮುಂದೆ ಅವರನ್ನು ತೆರೆಮೇಲೆ ಫ್ಯಾನ್ಸ್‌ ನೋಡುವುದು 2027ರ ಏಪ್ರಿಲ್‌ನಲ್ಲಿ. ಅಲ್ಲಿವರೆಗೂ ಮಹೇಶ್‌ ಬಾಬು ದರ್ಶನ ಫ್ಯಾನ್ಸ್‌ಗೆ ಇಲ್ಲ.

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟನೆ

ಮಹೇಶ್ ಬಾಬು ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೂ ಯಾವುದೇ ಪ್ಯಾನ್-ಇಂಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ, 'ವಾರಣಾಸಿ' ಚಿತ್ರವು ಅವರ ಪಾಲಿಗೆ ಒಂದು ಹೊಸ ಮೈಲಿಗಲ್ಲಾಗಲಿದೆ. ಈ ಬಿಗ್‌ ಬಜೆಟ್ ಚಿತ್ರದ ಬಿಡುಗಡೆಯ ನಂತರ ಮಹೇಶ್ ಬಾಬು ದೊಡ್ಡ ಮಟ್ಟದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಹೌದು, 'ವಾರಣಾಸಿ' ನಂತರ ಮಹೇಶ್ ಬಾಬು ಅವರು ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಮಾಡಲು ಸಜ್ಜಾಗಿದ್ದಾರೆ.

Kichcha Sudeep: ರಾಜಮೌಳಿಯ ‘ವಾರಣಾಸಿ’ ಸಿನಿಮಾದಲ್ಲಿ ಸುದೀಪ್? ಪಾತ್ರ ಏನು?

ಸಂಭಾವನೆ ಹೆಚ್ಚಿಸಿಕೊಂಡ ಮಹೇಶ್‌ ಬಾಬು

ವಾರಣಾಸಿ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಮತ್ತೊಂದು ಸಿನಿಮಾ ಆರಂಭಿಸಲು ಅವರು ಯೋಜಿಸಿದ್ದು, ಮುಂದಿನ ಚಿತ್ರಗಳಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ಬೇಡಿಕೆಯಿಡುತ್ತಿದ್ದಾರೆ ಎನ್ನಲಾಗಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಅವರ ಮುಂದಿನ ಸಿನಿಮಾವನ್ನು ನಿರ್ಮಿಸುವ ಸಾಧ್ಯತೆಯಿದೆ. ಸದ್ಯಕ್ಕೆ ನಿರ್ದೇಶಕರ ಆಯ್ಕೆ ನಡೆಯುತ್ತಿದ್ದು, ಮಾತುಕತೆಗಳು ಮುಂದುವರಿದಿವೆ. ಇದರೊಂದಿಗೆ ಏಷ್ಯನ್ ಸುನಿಲ್ ಅವರ ಜೊತೆಗೂ ಮಹೇಶ್ ಬಾಬು ಒಂದು ಪ್ರಾಜೆಕ್ಟ್ ಮಾಡಲಿದ್ದು, ಅದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆಯಾಗಿ, 'ವಾರಣಾಸಿ' ಬಿಡುಗಡೆಯ ನಂತರ ಮುಂದಿನ ಮೂರು ವರ್ಷಗಳಲ್ಲಿ ಮೂರು ಚಿತ್ರಗಳನ್ನು ತೆರೆಗೆ ತರುವ ಗುರಿಯನ್ನು ಮಹೇಶ್ ಬಾಬು ಹೊಂದಿದ್ದಾರೆ.

Varanasi: 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ! ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಣೆ?

ಫ್ಯಾನ್ಸ್‌ಗೆ ಖುಷಿಪಡಿಸಲು ಈ ನಿರ್ಧಾರ

ಮಹೇಶ್‌ ಬಾಬು ಅವರನ್ನು ತೆರೆಮೇಲೆ ನೋಡಲು ಫ್ಯಾನ್ಸ್‌ ಮೂರು ವರ್ಷ (ಗುಂಟೂರು ಕಾರಂ- 2024, ವಾರಣಾಸಿ- 2027) ಕಾಯಬೇಕಾದ ಸ್ಥಿತಿ ಇದೆ. ಹಾಗಾಗಿ, ಅಭಿಮಾನಿಗಳ ಆ ಕೊರಗನ್ನು ನೀಗಿಸುವ ಸಲುವಾಗಿ ಮಹೇಶ್‌ ಬಾಬು ಈ ಪ್ಲ್ಯಾನ್‌ ಮಾಡಿದ್ದಾರೆ. ವಾರಣಾಸಿ ಸಿನಿಮಾ ಮುಗಿಯುತ್ತಿದ್ದಂತೆಯೇ ಮೂರು ಸಿನಿಮಾಗಳನ್ನು ಒಂದರ ಹಿಂದೊಂದರಂತೆ ಶುರು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಇನ್ನು ರಾಜಮೌಳಿ ನಿರ್ದೇಶನದ ವಾರಣಾಸಿಯಲ್ಲಿ ಮಹೇಶ್‌ ಬಾಬುಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕೆ. ಎಲ್. ನಾರಾಯಣ ಮತ್ತು ರಾಜಮೌಳಿ ಪುತ್ರ ಎಸ್‌ ಎಸ್‌ ಕಾರ್ತಿಕೇಯ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪೃಥ್ವಿರಾಜ್‌ ಸುಕುಮಾರನ್‌‌, ಪ್ರಕಾಶ್‌ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.