ಮಹೇಶ್ ಬಾಬು (Mahesh Babu) ಅವರ 'ರಾಮ' ಪಾತ್ರ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' (Varanasi Movie) ಮತ್ತೆ ಸುದ್ದಿಯಲ್ಲಿದೆ. ಅಭಿಮಾನಿಗಳ ಹ್ಯಾಂಡಲ್‌ಗಳಲ್ಲಿ ಕಾಣಿಸಿಕೊಂಡಿರುವ ಫೋಟೋದಲ್ಲಿ, ನಟ ಕೇಸರಿ ನಿಲುವಂಗಿಯನ್ನು ಧರಿಸಿ ಭುಜಕ್ಕೆ ಬಿಲ್ಲು ಹಿಡಿದುಕೊಂಡಿರುವುದು ಕಂಡು ಬಂದಿದೆ. ರಣ್ಬೀರ್ ಕಪೂರ್ (Ranbir kapoor) ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಕೆಲವರು ರಣ್ಬೀರ್ ಅವರು ರಾಮನ ಪಾತ್ರಕ್ಕೆ ಸೂಟ್ ಆಗುವುದಿಲ್ಲ, ಮಹೇಶ್ ಬಾಬು ಅವರನ್ನು ಹಾಕಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ವೈರಲ್ ಆಗಿರುವ ದೃಶ್ಯವು ಗ್ರಾಮೀಣ ವಾತಾವರಣದ ನಡುವೆ ಇರುವಂತೆ ಕಾಣುತ್ತದೆ. ಅಸಲಿಗೆ ಲೀಕ್ ಆಗಿದ್ದು ಎನ್ನಲಾಗುತ್ತಿರುವ ಫೋಟೊ ನಿಜವಾದ ಫೋಟೊ ಅಲ್ಲ, ಬದಲಿಗೆ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ನಕಲಿ ಫೋಟೊ. ಎಐ ಹಾಗೂ ಗ್ರಾಫಿಕ್ಸ್ ಬಳಸಿ ಯಾರೋ ಈ ಫೋಟೊ ಸೃಷ್ಟಿಸಿದ್ದು, ಅದನ್ನೇ ಹಲವರು ‘ವಾರಣಾಸಿ’ ಸೆಟ್ನ ಲೀಕ್ಡ್ ಫೋಟೊ ಎಂಬ ಒಕ್ಕಣೆಯೊಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಅಧಿಕೃತ ಫ್ಯಾನ್ ಫೇಜ್ಗಳು, ಇದು ಫೇಕ್ ಫೋಟೊ ಎಂಬುದನ್ನು ಖಾತ್ರಿ ಪಡಿಸಿವೆ.
ಇದನ್ನೂ ಓದಿ: Dose OTT Release: ಒಂದೊಳ್ಳೆ ಸೈಕಲಾಜಿಕಲ್ ಥ್ರಿಲ್ಲರ್ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್!
ತಯಾರಕರು ಇಲ್ಲಿಯವರೆಗೆ, ಟೀಸರ್ ಟ್ರೇಲರ್‌ನಲ್ಲಿ ಮಹೇಶ್ ಬಾಬು ಅವರ ಲುಕ್ ಅನ್ನು ಮಾತ್ರ ಟೀಸರ್ ಮಾಡಿದ್ದಾರೆ.
ಸಿನಿಮಾದ ಪೋಸ್ಟರ್, ಟೀಸರ್ನಲ್ಲಿಯೂ ಸಹ ಆಂಜನೇಯ, ಶ್ರೀರಾಮನ ದೃಶ್ಯಗಳು ಇವೆ. ಮಹೇಶ್ ಬಾಬು ಅವರು ಸಿನಿಮಾದ ಕೆಲವು ದೃಶ್ಯಗಳಲ್ಲಿ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ ಫ್ರಾನ್ಸ್‌ನಲ್ಲಿ 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ಹೋದ ನಂತರ, 'ವಾರಣಾಸಿ' ಚಿತ್ರದ ಬಗ್ಗೆ ಹೊಸ ಆಸಕ್ತಿ ಮೂಡಿದ ನಡುವೆ ಈ ಚಿತ್ರ ಬಂದಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಮಹೇಶ್ ಬಾಬು ನಟಿಸಿರುವ 'ವಾರಣಾಸಿ' ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ರಾಜಮೌಳಿ ಇತ್ತೀಚೆಗೆ ಈ ಚಿತ್ರವು ಸುಮಾರು 80 ದಿನಗಳ ಚಿತ್ರೀಕರಣ ಬಾಕಿ ಇದ್ದು, ನಿರ್ಮಾಣದ ನಂತರದ ಕೆಲಸಗಳನ್ನು ಪ್ರಾರಂಭಿಸುವುದಾಗಿ ಬಹಿರಂಗಪಡಿಸಿದ್ದಾರೆ. ಈ ಚಿತ್ರವು ಏಪ್ರಿಲ್ 2027 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದರ್ಶನದ ಚಿತ್ರದಲ್ಲಿ ತೆಲಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ದ್ವಿಪಾತ್ರದಲ್ಲಿ ನಟಿಸುತಿದ್ದಾರೆ ಎನ್ನಲಾಗಿದ್ದು, ನಾಯಕಿಯಾಗಿ ಪ್ರಿಯಾಂಕಾ ಚೊಪ್ರಾ ನಟಿಸುತಿದ್ದಾರೆ.
ಇದನ್ನೂ ಓದಿ: Amruthadhaare: 'ಅಮೃತಧಾರೆ'ಯ ಪ್ರೇಮ ಪರ್ವಕ್ಕೆ ಗೌತಮ್ - ಭೂಮಿಕಾನೇ ಮೇರು ಶಿಖರಗಳು!
ಈ ಮೂಲಕ 7 ವರ್ಷಗಳ ತರುವಾಯು ಪಿಂಕಿ, ಭಾರತೀಯ ಸಿನಿರಂಗಕ್ಕೆ ರೀ-ಎಂಟ್ರಿ ಕೂಡುತಿದ್ದಾರೆ. ಇವರೊಂದಿಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಖಳನಟನಾಗಿ ನಟಿಸುವ ಮೂಲಕ ಟಾಲಿವುಡ್ ಗೆ ರೀ-ಎಂಟ್ರಿ ಕೂಡುತಿದ್ದಾರೆ.