ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahima Chaudhary: 52ನೇ ವಯಸ್ಸಿನಲ್ಲಿ ಸಂಜಯ್ ಮಿಶ್ರಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಹಿಮಾ ಚೌಧರಿ?: ಸುದ್ದಿಯ ಅಸಲಿಯತ್ತೇನು?

Mahima Chaudhary: 62 ವರ್ಷದ ನಟ ಸಂಜಯ್ ಮಿಶ್ರಾ ಜತೆ ಹಿರಿಯ ನಟಿ ಮಹಿಮಾ ಚೌಧರಿ ವಧುವಿನಂತೆ ಕಾಣಿಸಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಉಂಟು ಮಾಡಿದೆ. ಮದುಮಗಳ ಉಡುಗೆಯಲ್ಲಿ ಮಹಿಮಾ ಮತ್ತು ಸಾಂಪ್ರದಾಯಿಕ ಶೇರ್ವಾನಿಯಲ್ಲಿ ಸಂಜಯ್ ಮಿಶ್ರಾ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಗೊಂದಲ ಮೂಡಿಸಿತ್ತು. 52 ವರ್ಷದ ನಟಿಗೆ ಮತ್ತೆ ಮದುವೆಯೇ? ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದರು.‌ ಈ ನಡುವೆ ವಿಡಿಯೊದ ಅಸಲಿ ವಿಚಾರ ಈಗ ತಿಳಿದು ಬಂದಿದ್ದು ಇವರಿಬ್ಬರು ನಿಜವಾಗ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಾ? ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಸಂಜಯ್ ಮಿಶ್ರಾ - ಮಹಿಮಾ ಚೌಧರಿ

ನವದೆಹಲಿ: ಖ್ಯಾತ ಹಿರಿಯ ನಟಿ‌ ಮಹಿಮಾ ಚೌಧರಿ (Mahima Chaudhary) 62 ವರ್ಷದ ನಟ ಸಂಜಯ್ ಮಿಶ್ರಾ (Sanjay Mishra) ಜತೆ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಕೂಡ ನವ-ವಿವಾಹಿತ ದಂಪತಿಯಂತೆ ಕಾಣಿಸಿಕೊಂಡಿರುವ ವಿಡಿಯೊ ಭಾರಿ ವೈರಲ್ ಆಗಿದ್ದು ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಮದು ಮಗಳ ಉಡುಗೆಯಲ್ಲಿ ಮಹಿಮಾ ಮತ್ತು ಸಾಂಪ್ರದಾಯಿಕ ಶೇರ್ವಾನಿಯಲ್ಲಿ ಸಂಜಯ್ ಮಿಶ್ರಾ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಗೊಂದಲ ಮೂಡಿಸಿತ್ತು. 52 ವರ್ಷದ ನಟಿಗೆ ಮತ್ತೆ ಮದುವೆಯೇ? ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದರು.‌ ಈ ನಡುವೆ ಈ ವಿಡಿಯೊದ ಅಸಲಿ ವಿಚಾರ ಈಗ ತಿಳಿದು ಬಂದಿದ್ದು ಇವರಿಬ್ಬರು ನಿಜವಾಗ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರಾ? ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

62 ವರ್ಷದ ನಟ ಸಂಜಯ್ ಮಿಶ್ರಾ ಜತೆ ಹಿರಿಯ ನಟಿ ಮಹಿಮಾ ಚೌಧರಿ ವಧುವಿನಂತೆ ಕಾಣಿಸಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಉಂಟು ಮಾಡಿತ್ತು. ವಿಡಿಯೊದಲ್ಲಿ ನವಜೋಡಿಯಂತೆ ಸಂಜಯ್ ಮಿಶ್ರಾ ಮಹಿಮಾ ಜತೆ ಕ್ಯಾಮರಾಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ವೈರಲ್ ಆದ ಕ್ಲಿಪ್‌ನಲ್ಲಿ, ಮಹಿಮಾ ಛಾಯಾಗ್ರಾಹಕರಿಗೆ, "ನೀವು ಮದುವೆಗೆ ಬರಲು ಸಾಧ್ಯವಿಲ್ಲ, ಆದರೆ ಸ್ವಲ್ಪ ಸಿಹಿತಿಂಡಿಗಳನ್ನು ಈಗಲೇ ಸೇವಿಸಿ" ಎಂದು ತಮಾಷೆಯಾಗಿ ಹೇಳಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಉಂಟು ಮಾಡಿತ್ತು.

ಮಹಿಮಾ ಚೌಧರಿ-ಸಂಜಯ್ ಮಿಶ್ರಾ ವಿಡಿಯೊ ಇಲ್ಲಿದೆ:



ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವರು ಇದು ಎರಡನೇ ಮದುವೆ ಆಗಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು‌. ಅದಾಗ್ಯೂ ಈ ವಿಡಿಯೊದ ಅಸಲಿ ವಿಚಾರ ಬೇರೆಯೇ ಇದೆ. ಇದು ಮದುವೆಯಲ್ಲ, ಬದಲಿಗೆ ಸಿನಿಮಾ ಪ್ರಚಾರ ಎಂಬ ಸ್ಪಷ್ಟನೆ ಸಿಕ್ಕಿದೆ. ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಬದಲಾಗಿ ಇದು ಸಿದ್ಧಾಂತ್ ರಾಜ್ ನಿರ್ದೇಶನದ ಮುಂಬರುವ 'ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿ' ಚಿತ್ರದ ಪ್ರಚಾರ ಅಭಿಯಾನದ ಭಾಗ.

ಇದನ್ನು ಓದಿ:OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?

ಅವರು ತಮ್ಮ ಮುಂಬರುವ ಚಿತ್ರ 'ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿ' ಚಿತ್ರದ ಪ್ರಚಾರಕ್ಕಾಗಿ ವಧು-ವರರ ವೇಷ‌ ಭೂಷಣದಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾಂತ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಮಹಿಮಾ ಮತ್ತು ಸಂಜಯ್ ಮಿಶ್ರಾ ದಂಪತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಚಿತ್ರದ ಪ್ರಚಾರಕ್ಕಾಗಿ ಇಂತಹ ಮದುವೆಯ ದೃಶ್ಯವನ್ನು ಶೂಟ್‌ ಮಾಡಲಾಗಿತ್ತು.

ಈ ಚಿತ್ರದಲ್ಲಿ ಮಹಿಮಾ ಮತ್ತು ಸಂಜಯ್ ಮಿಶ್ರಾ ಇಬ್ಬರೂ ನವ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವ್ಯೋಮ್ (Vyom) ಮತ್ತು ಪಾಲಕ್ ಲಾಲವಾನಿ (Palak Lalwani) ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮಹಿಮಾ ಚೌಧರಿ ಥೇಟ್ ಮದು ಮಗಳಂತೆ ಕಂಡಿದ್ದು, ಈ ಹಿಂದೆ ಕಂಗನಾ ರಣಾವತ್ ಅವರ ʼಎಮರ್ಜೆನ್ಸಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.‌ ಸದ್ಯ ಈ ಸಿನಿಮಾದ ಬಗ್ಗೆಯೂ ನಿರೀಕ್ಷೆ ಹೆಚ್ಚಾಗಿದೆ.