ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Sumukha: ಸೆಟ್ಟೇರಿತು 'ಮನದ ಕಡಲು' ನಾಯಕನ ಹೊಸ ಸಿನಿಮಾ; ರಗಡ್ ಅವತಾರದಲ್ಲಿ ಚಾಕಲೇಟ್ ಹೀರೋ ಸುಮುಖ್

ಸಾಕಷ್ಟು ನಿರೀಕ್ಷೆಯೊಂದಿಗೆ ಈ ವರ್ಷಾರಂಭದಲ್ಲಿ ತೆರೆಗೆ ಬಂದ ಮನದ ಕಡಲು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಯುವ ಪ್ರತಿಭೆ ಸುಮುಖ್‌ ಅಬಿನಯದ ಹೊಸ ಚಿತ್ರ ಸೆಟ್ಟೇರಿದೆ. ಟೈಟಲ್‌ ಅಂತಿಮವಾಗದ ಈ ಸಿನಿಮಾವನ್ನು ಸಂಜಯ್ ಕೆ.ಕೆ. ನಿರ್ದೇಸಿಸಲಿದ್ದಾರೆ.

ಸೆಟ್ಟೇರಿತು 'ಮನದ ಕಡಲು' ನಾಯಕ ಸುಮುಖ್‌ನ ಹೊಸ ಸಿನಿಮಾ

-

Ramesh B Ramesh B Sep 10, 2025 9:07 PM

ಬೆಂಗಳೂರು: ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕಾಂಬಿನೇಷನ್‌ನಲ್ಲಿ ಮೂಡಿಬಂದ, ಈ ವರ್ಷಾರಂಭದಲ್ಲಿ ತೆರೆಗ ಬಂದ ʼಮನದ ಕಡಲುʼ (Manada Kadalu) ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಸುಮುಖ್‌ (Actor Sumukha) ಅಭಿನಯದ ಹೊಸ ಚಿತ್ರ ಘೋಷಣೆಯಾಗಿದೆ. ಇತ್ತೀಚೆಗೆ ಅವರು ಬರ್ತಡೇ ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ʼಮನದ ಕಡಲುʼ ಚಿತ್ರದಲ್ಲಿ ಲವಲವಿಕೆಯ ಹುಡುಗನಾಗಿ, ಲವರ್ ಬಾಯ್ ಆಗಿದ್ದ ಸುಮುಖ್ ಈಗ ಹೊಸ ಅವತಾರವೆತ್ತಿದ್ದಾರೆ‌. ಅಂದರೆ ಚಾಕಲೇಟ್ ಹೀರೋ ಸುಮುಖ್ ಕಂಪ್ಲೀಟ್ ರಗಡ್ ವೇಷದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ಅದರ ಸೂಚನೆ ಪೋಸ್ಟರ್‌ನಲ್ಲಿ ಸಿಕ್ಕಿದ್ದು, ಚಿತ್ರದ ಟೈಟಲ್‌ ಇನ್ನೂ ಅಂತಿಮಗೊಂಡಿಲ್ಲ.

ಸುಮುಖ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿರುವ ಹೊಸ ಸಿನಿಮಾದ ಪೋಸ್ಟರ್ ಹಲವರ ಮನ ಗೆದ್ದಿದೆ. ಗಣೇಶ ಪೇಟಿಂಗ್ ಮುಂದೆ ಕೈಯಲ್ಲಿ ಪೇಂಟ್ ಬಾಕ್ಸ್ ಹಿಡಿದು ಸುಮುಖ್‌ ನಿಂತಿದ್ದಾರೆ. ಪಕ್ಕದಲ್ಲಿ ಜನ ಸಮೂಹವೇ ಕಂಡು ಬಂದಿದೆ.

ಸುಮುಖ್‌ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಈ ಸುದ್ದಿಯನ್ನೂ ಓದಿ: Kamal Sridevi Movie: ಸ್ಯಾಂಡಲ್‌ವುಡ್‌ನಲ್ಲಿ ಇನ್ನು ʼಕಮಲ್ ಶ್ರೀದೇವಿʼ ಹವಾ; ಟ್ರೈಲರ್ ಬಿಡುಗಡೆ: ಸೆಪ್ಟೆಂಬರ್ 19ಕ್ಕೆ ರಾಜ್ಯದಾದ್ಯಂತ ಚಿತ್ರ ರಿಲೀಸ್‌

ನಿರ್ದೇಶಕ ಯಾರು?

ಕಳೆದ ಹತ್ತದಿನೈದು ವರ್ಷಗಳಿಂದ ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಸಂಜಯ್ ಕೆ.ಕೆ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿರುವ ಸಂಜಯ್ ಅವರೇ ಕಥೆ ಬರೆದಿರುವುದು ವಿಶೇಷ.

ನೈಜ ಕಥೆಯಲ್ಲಿ ಸುಮುಖ್

ಸಂಜಯ್ ಇಲ್ಲಿ ನೈಜ ಕಥೆಗೆ ಸಿನಿಮಾ ರೂಪ ಕೊಟ್ಟಿದ್ದಾರೆ. ಅಂದರೆ ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ‌. ಕಳೆದ ಐದು ವರ್ಷಗಳಿಂದ ಕಥೆ ಹಣೆದು ಇದೀಗ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ‌. ಈ ಚಿತ್ರದಲ್ಲಿ ಸುಮುಖ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಹಾಗೂ ಸುಮುಖ್ ಅವರ ಹೊಸ ಸಾಹಸಕ್ಕೆ ರಾಯಲ್ ಫೈ ಎಂಟರ್‌ಟೈನ್‌ಮೆಂಟ್‌ ಬಂಡವಾಳ ಹಾಕುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಉಳಿದ ಅಪ್ ಡೇಟ್ ನೀಡಲಿದೆ. ಚಿತ್ರದ ನಾಯಕಿ ಯಾರು, ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ವಿವರವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

2017ರಲ್ಲಿ ತೆರೆಕಂಡ ʼರಾಜು; ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸುಮುಖ್‌ ಇದುವರೆಗೆ ʼಯಾನʼ, ʼಫಿಸಿಕ್ಸ್‌ ಟೀಚರ್‌ʼ, ʼಮನದ ಕಡಲುʼ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹೇಳಿಕೊಳ್ಳುವಂತಹ ಬ್ರೇಕ್‌ ಸಿಕ್ಕಿಲ್ಲ. ʼಮನದ ಕಡಲುʼ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿತ್ತು. ಸದ್ಯ ಅವರು ಹೇಗಾದರೂ ಮಾಡಿ ಗೆಲುವಿನ ಹಳಿ ಏರಬೇಕೆಂಬ ಪ್ರಯತ್ನದಲ್ಲಿದ್ದು, ʼರಾಜಸ್ಥಾನ್‌ ಡೈರೀಸ್‌ʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದು ಕನ್ನಡದ ಜತೆಗೆ ಮರಾಠಿಯಲ್ಲೂ ತೆರೆಗೆ ಬರಲಿದೆ.