ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಪುತ್ರಿ ದುವಾ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟ್ ಹಂಚಿಕೊಂಡ ದೀಪಿಕಾ ಪಡುಕೋಣೆ

Deepika Padukone Daughter Dua: ಮಗಳು ದುವಾ ಮೊದಲ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿ ನಟಿ ದೀಪಿಕಾ ಬಹಳ ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ. 2024ರ ಸೆಪ್ಟೆಂಬರ್ 8ರಂದು ದುವಾ ಜನಿಸಿದ್ದು ಮೊನ್ನೆಯಷ್ಟೇ ಮಗುವಿಗೆ ಒಂದು ವರ್ಷ ಪೂರೈಸಿದೆ. ಹೀಗಾಗಿ ನಟಿ ಪಡುಕೋಣೆ ಹಾಗೂ ಅವರ ಪತಿ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಸ್ಪೆಷಲ್ ಚಾಕೊಲೇಟ್ ಕೇಕ್‌ ತಯಾರಿಸಿದ್ದಾರೆ.

ಮಗಳಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ದೀಪಿಕಾ

ದೀಪಿಕಾ ಪಡುಕೋಣೆ -

Profile Pushpa Kumari Sep 10, 2025 5:23 PM

ಮುಂಬೈ: ಬಾಲಿವುಡ್ ನ ಕ್ಯೂಟ್ ಕಪಲ್‌ಗಳಲ್ಲಿ ಒಂದಾ ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದ್ದಾರೆ. ಮಗಳು ದುವಾ ಮೊದಲ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿ ನಟಿ ದೀಪಿಕಾ ಬಹಳ ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ. 2024ರ ಸೆಪ್ಟೆಂಬರ್ 8ರಂದು ದುವಾ ಜನಿಸಿದ್ದು ಮೊನ್ನೆಯಷ್ಟೇ ಮಗುವಿಗೆ ಒಂದು ವರ್ಷ ಪೂರೈಸಿದೆ. ಹೀಗಾಗಿ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಪತಿ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಸ್ಪೆಷಲ್ ಚಾಕೊಲೇಟ್ ಕೇಕ್‌ನ ತಯಾರಿಸಿದ್ದಾರೆ. ಇದರ ಜೊತೆ ವಿಶೇಷ ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ.‌

ದುವಾ ಎಂದರೆ ಪಾರ್ಥನೆ ಎಂದರ್ಥ. ಈ ಹೆಸರನ್ನು ನನಗೆ ಆಯ್ಕೆ ಮಾಡಲು ಮಗು ಜನಿಸಿದ ನಂತರ ಸುಮಾರು ಎರಡು ತಿಂಗಳುಗಳೇ ಬೇಕಾಯಿತು ಎಂದು ದೀಪಿಕಾ ಈ ಹಿಂದೆ ಒಂದು ಪೋಸ್ಟ್‌ನಲ್ಲಿ ತಿಳಿಸಿದ್ದರು. ಇದೀಗ ಅವರು ಹಂಚಿಕೊಂಡ ಹೊಸ ಪೋಸ್ಟ್‌ನಲ್ಲಿ ಮಗಳಿಗಾಗಿ ರೆಡಿ ಮಾಡಿದ್ದ ಕೇಕ್ ಫೋಟೊ ಇದೆ. ಜತೆಗೆ ವಿಶೇಷ ಕ್ಯಾಪ್ಶನ್ ಗಮನ ಸೆಳೆದಿದೆ. ʼʼನನ್ನ ಪ್ರೀತಿ‌ ನೀನು... ನನ್ನ ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಕೇಕ್ ರೆಡಿ ಮಾಡಿದ್ದೇನೆʼʼ ಎಂದು ಬರೆದಿದ್ದಾರೆ.

ದೀಪಿಕಾ ತಾಯ್ತನದ ಹೊಸ ಪ್ರಯಾಣದ ಬಗ್ಗೆ ರಣವೀರ್ ಸಿಂಗ್ ಇತ್ತೀಚೆಗೆ ಮಾತನಾಡಿದ್ದರು. ದೀಪಿಕಾಳನ್ನು ನಟಿಯಾಗಿ ನೋಡಿದ್ದೇನೆ, ಪತ್ನಿಯಾಗಿ ನೋಡಿದ್ದೇನೆ ಬಳಿಕ ಈಗ ತಾಯಿಯಾಗಿ ಅವಳ ಕರ್ತವ್ಯದಲ್ಲಿ ಬಹಳ ಜಾಗರೂಕತೆಯಿಂದ ಇದ್ದಾಳೆ. ದೀಪಿಕಾಳ ಜೀವನದಲ್ಲಿ ಈಗ ಎಲ್ಲವೂ ದುವಾ ಆಗಿದ್ದಾಳೆ ಎನ್ನಬಹುದು. ಅಷ್ಟರ ಮಟ್ಟಿಗೆ ಪ್ರೀತಿ, ಮಮತೆ, ವಾತ್ಸಲ್ಯವಿಟ್ಟು ಸಮಯ ಕೊಟ್ಟು ಮಗುವನ್ನು ಪೋಷಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇದನ್ನು ಓದಿ:Karavali Movie: ಪ್ರಜ್ವಲ್ ದೇವರಾಜ್‌ ಅಭಿನಯದ 'ಕರಾವಳಿ' ಸದ್ಯದಲ್ಲೇ ತೆರೆಗೆ

ಅದಾಗ್ಯೂ ದೀಪಿಕಾ ಮತ್ತು ರಣವೀರ್ ಮಗಳು ದುವಾ ಮುಖವನ್ನು ಇದುವರೆಗೆ ರಿವೀಲ್‌ ಮಾಡಿಲ್ಲ. ಮಗು ದುವಾ ಮುಖ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಈ ಹಿಂದಿನಿಂದಲೂ ಇದೆ. ದೀಪಿಕಾ ಕೂಡ ಇತ್ತೀಚೆಗಷ್ಟೇ ತಮ್ಮ ಮಗುವಿನ ಮುಖವನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಮಗು ಸಾಮಾನ್ಯ ಮಕ್ಕಳಂತೆ ಬೆಳೆಯಬೇಕು. ಮಗುವಿನ ಬಾಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದ್ದರು.

ಸದ್ಯ ನಟ ರಣವೀರ್ ಸಿಂಗ್ ತಮ್ಮ ಮುಂದಿನ ಚಿತ್ರ ʼಧುರಂಧರ್ʼನ ಕೆಲಸ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ವರ್ಷದ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಇದಾದ ಬಳಿಕ ಅವರು ʼಡಾನ್ 3ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಸದ್ಯ ಮಗುವಿಗಾಗಿ ಸಿನಿಮಾ ಕೆಲಸಕ್ಕೆ ಬ್ರೇಕ್‌ ನೀಡಿದ್ದಾರೆ. ನವೆಂಬರ್‌ನಲ್ಲಿ ಅಟ್ಲಿ ಮತ್ತು ಅಲ್ಲು ಅರ್ಜುನ್ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ.