ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಹಣ ಹಾಕಿರುವ ಬಾಲನ್ ದಿ ಬಾಯ್ ( Balan The Boy Cinema) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 19ಕ್ಕೆ ಈ ಚಿತ್ರ ಮಲಯಾಳಂ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ (Tamil and Kannada) ತೆರೆಗೆ ಎಂಟ್ರಿ ಕೊಡುತ್ತಿದೆ.
ತೆರೆಗೆ ಯಾವಾಗ?
ಕೆವಿಎನ್ ಸಂಸ್ಥೆ ಒಡೆಯ ವೆಂಕಟ್ ಕೆ ನಾರಾಯಣ್ ಬಾಲನ್ ದಿ ಬಾಯ್ ಸಿನಿಮಾವನ್ನು ಅಂತರರಾಷ್ಟ್ರೀಯ ವೇದಿಕೆಗೆ ತೆಗೆದುಕೊಂಡು ಹೋಗ್ತಿದ್ದಾರೆ. ಇದೇ ತಿಂಗಳ 14ರಂದು ಅದ್ಧೂರಿಯಾಗಿ ಆರಂಭವಾಗಲಿರುವ ಕಾನ್ಸ್ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಸಂಭ್ರಮದ ನಡುವೆ ಚಿತ್ರತಂಡ ಬಿಡುಗಡೆ ದಿನಾಂಕ ಪ್ರಕಟಗೊಳಿಸಿದೆ.
ಇದನ್ನೂ ಓದಿ: Amruthadhaare Serial: ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!
ಚಿತ್ರಕ್ಕೆ 'ಮಂಜುಮ್ಮೆಲ್ ಬಾಯ್ಸ್' ಖ್ಯಾತಿಯ ಚಿದಂಬರಂ ಅವರು ಆಕ್ಷನ್ ಕಟ್ ಹೇಳಿದ್ದು, ಹಾಗಾಗಿ ಚಿತ್ರದ ಮೇಲೆ ಸಹಜವಾಗಿಯೇ ಭಾರಿ ನಿರೀಕ್ಷೆಗಳಿವೆ. ಈ ಚಿತ್ರವನ್ನು 'ಆವೇಶಮ್' ಚಿತ್ರಕ್ಕೆ ಹೆಸರುವಾಸಿಯಾಗಿರುವ ಜಿತು ಮಾಧವನ್ ಬರೆದಿದ್ದಾರೆ.
ಈ ಚಿತ್ರ ಮಂಜುಮ್ಮೆಲ್ ಬಾಯ್ಸ್‌ನ ವಿಶ್ವಾಸಾರ್ಹ ತಾಂತ್ರಿಕ ತಂಡವನ್ನು ಮರಳಿ ತಂದಿದೆ. ಶೈಜು ಖಾಲಿದ್ ಕ್ಯಾಮರಾ ಕೈಚಳಕ, ವಿವೇಕ್ ಹರ್ಷನ್ ಎಡಿಟಿಂಗ್, ಸುಶಿನ್ ಶ್ಯಾಮ್ ಸಂಗೀತವಿದ್ದು, ನಿರ್ಮಾಣ ವಿನ್ಯಾಸವನ್ನು ಅಜಯನ್ ಚಾಲಿಸ್ಸೆರಿ ನಿರ್ವಹಿಸಿದ್ದಾರೆ. ನಟ-ಲೇಖಕ ಗಣಪತಿ ಕಾರ್ಯಕಾರಿ ನಿರ್ಮಾಪಕ ಮತ್ತು ಕಾಸ್ಟಿಂಗ್ ಡೈರೆಕ್ಟರ್ ಆಗಿ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಚಿತ್ರವನ್ನು ಚಿದಂಬರಂ ನಿರ್ದೇಶಿಸಿದ್ದಾರೆ ಮತ್ತು ಜಿತು ಮಾಧವನ್ ಬರೆದಿದ್ದಾರೆ ಜೂನ್ 19, 2026 ರಂದು ಮಲಯಾಳಂ, ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ