ಕನ್ನಡ ಕಿರುತೆರೆಯಲ್ಲಿ (Kannada serial) ಹೊಸ ಧಾರಾವಾಹಿಯೊಂದು (New Serial) ಬರುತ್ತಿದೆ. ಅದುವೇ ‘ಮರ್ಯಾದೆ ರಾಮಣ್ಣ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ ಪೈಲ್ವಾನ್ ಕುರಿತ ಕಥೆ ಹೊಂದಿದ್ದು, ಎರಡನೇ ಪ್ರೋಮೋ (Second Promo) ರಿಲೀಸ್ ಆಗಿದೆ. ಹಠಮಾರಿ ನಾಯಕ ಮತ್ತು ಮೃದು ಸ್ವಭಾವದ ನಾಯಕಿಯ ನಡುವಿನ ಜಟಾಪಟಿ ಇದೆ. ಈ ಧಾರಾವಾಹಿಯಲ್ಲಿ ನಾಯಕ ಚೇತನ್ ಚಂದ್ರ (chetan chandra) . ಶ್ರೀ ದೇವಿ ಮಾಹಾತ್ಮೆ ಧಾರಾವಾಹಿ ಮೂಲಕ ಪಾರ್ವತಿ, ಸತಿ, ಕಾಳಿ, ಗಿರಿಜೆಯಾಗಿ ನಟಿಸಿದ ಜೀವಿತಾ ವಸಿಷ್ಠ ನಾಯಕಿ.
ಚೇತನ್ ಚಂದ್ರ ಮತ್ತೆ ಕಿರುತೆರೆಗೆ
ನಾಯಕ ಚೇತನ್ ಚಂದ್ರ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ರಾಜಧಾನಿ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ‘ಜಾತ್ರೆ’ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಸತ್ಯಂ ಶಿವಂ ಸುಂದರಂ, ‘ನಾನು ನನ್ನ ಕನಸು’, ‘ಗಿರಿಜಾ ಕಲ್ಯಾಣ’, ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ಲಾಕ್ ಆಗಬಾರದಿತ್ತು, ಅವ್ರು ಪಟ್ಟ ಕಷ್ಟ ಕಡಿಮೆಯೇನಲ್ಲ; ಖಳನಟ ಕಿಲ್ಲರ್ ವೆಂಕಟೇಶ್
ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಬಹಳ ದಿನಗಳ ನಂತರ ನಟ ಚೇತನ್ ಚಂದ್ರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅವರು ಈ ಧಾರಾವಾಹಿಯಲ್ಲಿ ನಾಯಕ 'ರಾಮಣ್ಣ'ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನ ತಾಯಿ 'ಜಯಮ್ಮ'ನ ಪಾತ್ರದಲ್ಲಿ ಹಿರಿಯ ನಟಿ ವೀಣಾ ಸುಂದರ್ ಕಾಣಿಸಿಕೊಂಡಿದ್ದಾರೆ.
ಕಟ್ಟುನಿಟ್ಟಿನ ನಿಯಮಗಳು ಕಥೆಗೆ ಟ್ವಿಸ್ಟ್
ಮಗನನ್ನು ಬೆಳೆಸಿದ ರೀತಿ ಮತ್ತು ಹಾಕುವ ಕಟ್ಟುನಿಟ್ಟಿನ ನಿಯಮಗಳು ಕಥೆಗೆ ಟ್ವಿಸ್ಟ್ ನೀಡುತ್ತವೆ. ಮಗನ ಮೇಲೆ ಅತೀವ ಪ್ರೀತಿ ಹೊಂದಿರುವ ಈ ತಾಯಿ, ಸೊಸೆ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಧಾರಾವಾಹಿಯು ಮರ್ಯಾದೆ ಮತ್ತು ಸಂಬಂಧಗಳ ನಡುವಿನ ಹೋರಾಟವನ್ನು ಎತ್ತಿ ತೋರಿಸುತ್ತದೆ. ಆಧುನಿಕ ಮನ:ಸ್ಥಿತಿಯ ಹುಡುಗಿ, ಹಳ್ಳಿಯ ಸಾಂಪ್ರದಾಯಿಕ ಕಟ್ಟುಪಾಡುಗಳಗಳಿಗೆ ಹೇಗೆ ಹೊಂದಿಕೊಳ್ಳುತ್ತಾಳೆ ಎಂಬುದು ಕಥೆ.
ಮಗ ಬ್ರಹ್ಮಚಾರಿ ಆಗಿಯೇ ಇರಬೇಕು ಎಂಬುವುದು ಜಯಮ್ಮನ ದಿಟ್ಟ ನಿರ್ಧಾರ. ಯಾಕೆ ಹೀಗೆ ಅನ್ನೋದೆ ಧಾರಾವಾಹಿ ನೋಡಿದ ಬಳಿಕ ಗೊತ್ತಾಗಲಿದೆ.
ಇದನ್ನೂ ಓದಿ: Amruthadhaare Serial: ಜೇಡಿಯ ದರ್ಪಕ್ಕೆ ಸಿಡಿದೆದ್ದ ಗೌತಮ್ ದಿವಾನ್! ಶಕುಂತಲಾ ಶಾಕ್
ಮರ್ಯಾದೆ ರಾಮಣ್ಣ ಧಾರಾವಾಹಿ ಪ್ರಸಾರ ಆಗಲಿದೆ ಎಂದಾದರೆ, ಇನ್ನೊಂದು ಸೀರಿಯಲ್ ಅಂತ್ಯ ಆಗಬೇಕಿದೆ. ಸ್ನೇಹದ ಕಡಲಲ್ಲಿ, ನೀ ಇರಲು ಜೊತೆಯಲ್ಲಿ ಧಾರಾವಾಹಿಗಳ ಮಧ್ಯೆ ಒಂದು ಸೀರಿಯಲ್ ಅಂತ್ಯ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.