ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಮಂತಾ ಪ್ರೆಗ್ನೆನ್ಸಿ ಸೀಕ್ರೆಟ್ ಲೀಕ್ ಮಾಡಿದ್ರಾ ಚಿರಂಜೀವಿ? ʻಮೆಗಾ‌ ಸ್ಟಾರ್‌ʼ ಟ್ವೀಟ್‌ಗೆ ʻಚಿರು ಲೀಕ್ಸ್‌ʼ ಎಂದು ಕಾಮೆಂಟ್‌ ಮಾಡಿದ ಫ್ಯಾನ್ಸ್!

ನಟಿ ಸಮಂತಾ ಮತ್ತು ರಾಜ್ ನಿಡಿಮೋರು ದಂಪತಿಯ ‘ಮಾ ಇಂಟಿ ಬಂಗಾರಂ’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ಬೆನ್ನಲ್ಲೇ ಮೆಗಾಸ್ಟಾರ್ ಚಿರಂಜೀವಿ ಅವರು ಹಂಚಿಕೊಂಡಿರುವ ಒಂದು ಟ್ವೀಟ್‌ ಭಾರಿ ಸಂಚಲನ ಮೂಡಿಸಿದೆ. ಚಿತ್ರತಂಡವನ್ನು ಮನೆಗೆ ಕರೆಸಿ ಸತ್ಕರಿಸಿದ ಚಿರು, "ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಸಮಂತಾ-ರಾಜ್ ದಂಪತಿಗೆ ಶುಭಾಶಯ" ಎಂದು ಬರೆದಿದ್ದಾರೆ. ಅದೇ ಈಗ ಚರ್ಚೆಗೆ ಕಾರಣವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರು ನಟಿ ಸಮಂತಾ ಅವರ ನೂತನ ಚಿತ್ರಕ್ಕೆ ಶುಭ ಕೋರಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿರುವ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರವನ್ನು ಕೊಂಡಾಡಿರುವ ಚಿರಂಜೀವಿ, ತಮ್ಮ ಪೋಸ್ಟ್‌ನಲ್ಲಿ ಬಳಸಿರುವ ಒಂದು ಸಾಲು ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಮಳೆ

ಸಮಂತಾ ಪತಿ ರಾಜ್ ನಿಡಿಮೋರು ಸ್ಕ್ರಿಪ್ಟ್‌ ಬರೆದಿರುವ, ನಂದಿನಿ ರೆಡ್ಡಿ ನಿರ್ದೇಶನದ ‘ಮಾ ಇಂಟಿ ಬಂಗಾರಂ’ ಸಿನಿಮಾ ಉತ್ತಮ ಪ್ರತಿಕ್ರಿಯೆಗಳೊಂದಿಗೆ ಬ್ಲಾಕ್‌ಬಸ್ಟರ್ ಸಕ್ಸಸ್‌ ಪಡೆದುಕೊಳ್ಳುತ್ತಿದೆ. ಮೊದಲ ನಾಲ್ಕು ದಿನಗಳಿಗೆ ಈ ಚಿತ್ರವು ಪ್ರಪಂಚದಾದ್ಯಂತ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಈ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ದೇಶಕಿ ನಂದಿನಿ ರೆಡ್ಡಿ ಹಾಗೂ ಸಮಂತಾ - ರಾಜ್ ನಿಡಿಮೋರು ಜೋಡಿ ಸೋಮವಾರ (ಜೂನ್‌ 22) ಸಂಜೆ ಚಿರಂಜೀವಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಸಮಂತಾ - ರಾಜ್ ದಂಪತಿಗೆ ಸಾಂಪ್ರದಾಯಿಕವಾಗಿ ರೇಷ್ಮೆ ಸೀರೆ ಹಾಗೂ ಒಂದು ಶಂಖವನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದ್ದಾರೆ ಚಿರಂಜೀವಿ - ಸುರೇಖಾ ದಂಪತಿ,

ನಟಿ ಸಾಯಿ ಪಲ್ಲವಿ ಕೈತಪ್ಪಿದ ಲಕ್ಕಿ ಚಾನ್ಸ್; ಸಮಂತಾಗೆ ಭರ್ಜರಿ ಲಾಭ ತಂದುಕೊಟ್ಟ 'ಮಾ ಇಂಟಿ ಬಂಗಾರಂ'!

ಚರ್ಚೆ ಹುಟ್ಟುಹಾಕಿದ ‘ಚಿರು ಲೀಕ್ಸ್’!

ಚಿತ್ರತಂಡವನ್ನು ಶ್ಲಾಘಿಸಿರುವ ನಟ ಚಿರಂಜೀವಿ ಒಂದು ಟ್ವೀಟ್‌ ಮಾಡಿದ್ದಾರೆ. "ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ (ಹೊಸ ಅಧ್ಯಾಯವನ್ನು ಸ್ವಾಗತಿಸುತ್ತಿರುವ) ಸಮಂತಾ ಮತ್ತು ರಾಜ್ ದಂಪತಿಗಳಿಗೆ ವಿಶೇಷ ಶುಭಾಶಯಗಳು" ಚಿರಂಜೀವಿ ಬರೆದುಕೊಂಡಿದ್ದಾರೆ. ಈ ಸಾಲುಗಳೇ ಈಗ ಕುತೂಹಲ ಹುಟ್ಟಿಸಿವೆ. ಸಮಂತಾ ಮತ್ತು ರಾಜ್‌ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂಬ ಅನುಮಾನ ಮೂಡಲು ಇದು ಕಾರಣವಾಗಿದೆ.

ಸಮಂತಾ ಬಗ್ಗೆ ಚಿರಂಜೀವಿ ಟ್ವೀಟ್‌



ಕೇವಲ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದು, ಯಾವುದೇ ಅಧಿಕೃತ ಘೋಷಣೆಗೂ ಮುನ್ನವೇ ಮೆಗಾಸ್ಟಾರ್ ಚಿರಂಜೀವಿ ಅವರು ಸಮಂತಾ ಅವರ ಪ್ರೆಗ್ನೆನ್ಸಿ ವಿಷಯವನ್ನು ಆಕಸ್ಮಿಕವಾಗಿ ಲೀಕ್ ಮಾಡಿದ್ದಾರೆಯೇ ಎಂದು ನೆಟ್ಟಿಗರು ಚರ್ಚಿಸಲು ಶುರು ಮಾಡಿದ್ದಾರೆ. ಚಿರಂಜೀವಿ ಅವರು ತಮಾಷೆಯಾಗಿ ಚಿತ್ರರಂಗದ ಇಂತಹ ವಿಚಾರಗಳನ್ನು ಎಲ್ಲರಿಗಿಂತ ಮೊದಲೇ ವೈರಲ್‌ ಮಾಡುವುದರಿಂದ ಅಭಿಮಾನಿಗಳು 'ಚಿರು ಲೀಕ್ಸ್' ಎಂದೂ ಕರೆಯುತ್ತಿದ್ದಾರೆ.

Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?

ಈಚೆಗೆ ಕೇಳಿಬಂದಿದೆ ಸಮಂತಾ ಪ್ರಗ್ನೆನ್ಸಿ ವದಂತಿ

ಹೌದು, ಈಚೆಗೆ ‘ಮಾ ಇಂಟಿ ಬಂಗಾರಂ’ ಚಿತ್ರದ ಸಕ್ಸಸ್‌ ಸೆಲೆಬ್ರೇಷನ್‌ ವೇಳೆ ಸಮಂತಾ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡ ಬೆನ್ನಲ್ಲೇ ಈ ಊಹಾಪೋಹಗಳು ಶುರುವಾಗಿದ್ದವು. ಶೀಘ್ರದಲ್ಲೇ ಸಮಂತಾ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದರು. ಈಗ ಚಿರಂಜೀವಿ ದಂಪತಿ ಇವರನ್ನು ಮನೆಗೆ ಕರೆಸಿ ಸೀರೆ ನೀಡಿರುವುದು ಹಾಗೂ ಚಿರಂಜೀವಿ ಅವರ ಪೋಸ್ಟ್ ಈ ವದಂತಿಗಳಿಗೆ ಮತ್ತಷ್ಟು ತುಪ್ಪ ಸವರಿದಂತಾಗಿದೆ. ಆದರೆ ಈ ವದಂತಿಗಳ ಬಗ್ಗೆ ಸಮಂತಾ ಆಗಲಿ ಅಥವಾ ರಾಜ್ ಆಗಲಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.