ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mohanlal: ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರದ ಟೀಸರ್ ರಿಲೀಸ್‌; ಈ ಸಲವಾದರೂ ಸಿಕ್ಕಿಬೀಳುತ್ತಾ ಜಾರ್ಜ್‌ ಕುಟ್ಟಿ ಫ್ಯಾಮಿಲಿ?

Drishyam 3 Teaser: ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಜಾರ್ಜ್‌ಕುಟ್ಟಿಯ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾ ಮೋಹನ್‌ಲಾಲ್ ಜನ್ಮದಿನದ ಅಂಗವಾಗಿ ಮೇ 21ರಂದು ತೆರೆಗೆ ಬರಲಿದೆ. ಈ ಬಾರಿಯೂ ಜಾರ್ಜ್‌ಕುಟ್ಟಿ ಕುಟುಂಬ ಕೊನೆಗೂ ಪೊಲೀಸರಿಗೆ ಸಿಕ್ಕಿಬೀಳುತ್ತಾ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ 'ದೃಶ್ಯಂ 3' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕಳೆದ ಒಂದು ದಶಕದಿಂದ ಪ್ರೇಕ್ಷಕರನ್ನು ಸೆರೆಹಿಡಿದಿರುವ ಜಾರ್ಜ್‌ಕುಟ್ಟಿಯ ರೋಚಕ ಕಥೆಯನ್ನು ಜೀತು ಜೋಸೆಫ್ ನಿರ್ದೇಶನದ ಈ ಯಶಸ್ವಿ ಫ್ರಾಂಚೈಸಿಯ ಮೂರನೇ ಭಾಗವು ಮುಂದುವರಿಸಲಿದೆ. ಮೊದಲ ಎರಡು ಭಾಗಗಳ ಭಾರಿ ಟ್ವಿಸ್ಟ್‌ಗಳ ನಂತರ ಕಥೆ ಹೇಗೆ ಸಾಗಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ʻದೃಶ್ಯಂ 3ʼ ಚಿತ್ರವು ಮೋಹನ್ ಲಾಲ್ ಅವರ ಜನ್ಮದಿನದ ಅಂಗವಾಗಿ ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಅಭಿಮಾನಿಗಳಿಗೆ ಇದು ವಿಶೇಷ ಉಡುಗೊರೆಯಾಗಲಿದೆ. ʻದೃಶ್ಯಂʼ ಫ್ರಾಂಚೈಸಿಯು ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಕ್ರೈಮ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾಗಿದೆ.

Drishyam 3: ಜಾರ್ಜ್ ಕುಟ್ಟಿ ಬಂದೇ ಬಿಟ್ಟ; 'ದೃಶ್ಯಂ 3'ಯಿಂದ ಬಂತು ಬಿಗ್‌ ಅಪ್‌ಡೇಟ್‌!

2013 ರಲ್ಲಿ ಬಿಡುಗಡೆಯಾದ ಮೊದಲ ಭಾಗವು ಜಾರ್ಜ್‌ಕುಟ್ಟಿ ಎಂಬ ಸಾಮಾನ್ಯ ಕೇಬಲ್ ಟಿವಿ ಆಪರೇಟರ್‌ನ ಜೀವನವನ್ನು ಪರಿಚಯಿಸಿತ್ತು. 2021 ರಲ್ಲಿ ಒಟಿಟಿಯಲ್ಲಿ ಬಿಡುಗಡೆಯಾದ ಸೀಕ್ವೆಲ್ ಕೂಡ ಅಷ್ಟೇ ಮೆಚ್ಚುಗೆ ಗಳಿಸಿತ್ತು. ಇದೀಗ ಮೂರನೇ ಭಾಗವನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಈ ಬಾರಿಯಾದರೂ ಜೃಡ್‌ ಕುಟ್ಟಿ ಕುಟುಂಬ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬೀಳಲಿದೆಯಾ? ಕಾದುನೋಡಬೇಕು.

ಟೀಸರ್‌ನಲ್ಲಿ ಏನಿದೆ?

'ದೃಶ್ಯಂ 3' ಚಿತ್ರದ ಟೀಸರ್‌ನಲ್ಲಿ ಜಾರ್ಜ್‌ಕುಟ್ಟಿಯ ಜೀವನದ ಮುಂದಿನ ಅಧ್ಯಾಯದ ಮೇಲೆ ಬೆಳಕು ಚೆಲ್ಲಾಗಿದೆ. ಮೋಹನ್ ಲಾಲ್ ಚರ್ಚ್‌ನೊಳಗೆ ಮೊಣಕಾಲೂರಿ ತಾನು ಮಾಡಿದ ಕೆಲಸಗಳನ್ನು ದೇವರ ಮುಂದೆ ಒಪ್ಪಿಕೊಳ್ಳುತ್ತಿರುವ ದೃಶ್ಯಗಳು ಟೀಸರ್‌ನಲ್ಲಿವೆ. ನಂತರದ ದೃಶ್ಯದಲ್ಲಿ ಕಿಟಕಿಯ ಪಕ್ಕದಲ್ಲಿ ನಿಂತಿರುವ ಜಾರ್ಜ್‌ ಕುಟ್ಟಿ ಹಿನ್ನೆಲೆಯಲ್ಲಿ ದೊಡ್ಡ ಯೋಜನೆಯೊಂದು ರೂಪಿತವಾಗುತ್ತಿರುವುದರ ಸುಳಿವು ನೀಡುತ್ತದೆ. ಟೀಸರ್‌ನಲ್ಲಿ ಆಶಾ ಶರತ್, ಸಿದ್ದಿಕ್ ಮತ್ತು ಮುರಳಿ ಗೋಪಿ ಅವರು ನಿರ್ವಹಿಸಿರುವ ಪಾತ್ರಗಳ ಅವರ ಸಣ್ಣ ತುಣುಕುಗಳನ್ನೂ ಕಾಣಬಹುದು.

Drishyam 3 Release Date: ದೃಶ್ಯಂ 3 ರಿಲೀಸ್‌ ಡೇಟ್‌ ಅನೌನ್ಸ್‌; ಮೋಹನ್‌ ಲಾಲ್‌ ಮುಂಚೆಯೇ ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

ಅತಿ ವೇಗವಾಗಿ ಚಿತ್ರೀಕರಣ ಮುಗಿಸಿದ್ದ ಜೀತು

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿದ್ದ ದೃಶ್ಯಂ 3 ಚಿತ್ರತಂಡ, ತೊಡುಪುಳ, ವಾಗಮನ್ ಮತ್ತು ಎರ್ನಾಕುಲಂನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿತ್ತು. ಡಿಸೆಂಬರ್‌ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿತ್ತು. ಈ ಮೊದಲು ಏಪ್ರಿಲ್ 2 ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ವಿಗ್ನತೆಯಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಮೋಹನ್ ಲಾಲ್ ಅವರ 66ನೇ ಹುಟ್ಟುಹಬ್ಬದ ಪ್ರಯುಕ್ತ ಈಗ ಮೇ 21 ರಂದು ದೃಶ್ಯಂ 3 ಸಿನಿಮಾ ಬಿಡುಗಡೆಯಾಗಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಸಿನಿಮಾ ಈಗಾಗಲೇ ಸದ್ದು ಮಾಡಿದ್ದು, ಬಿಡುಗಡೆಗೆ ಇನ್ನೂ ನಾಲ್ಕು ವಾರಗಳು ಬಾಕಿ ಇರುವಾಗಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ಇದು ಭಾರತೀಯ ಸಿನಿಮಾವೊಂದರ ಅಪರೂಪದ ಸಾಧನೆಯಾಗಿದೆ. ಪೆನ್ ಸ್ಟುಡಿಯೋಸ್, ಆಶೀರ್ವಾದ್ ಸಿನಿಮಾಸ್ ಮತ್ತು ಪನೋರಮಾ ಸ್ಟುಡಿಯೋಸ್ ಸಹಯೋಗದೊಂದಿಗೆ 100 ಕೋಟಿ ರೂ. ಹೂಡಿಕೆಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಮೋಹನ್‌ಲಾಲ್‌ ಜೊತೆಗೆ ಮೀನಾ, ಅನ್ಸಿಬಾ ಹಾಸನ್, ಎಸ್ತರ್ ಅನಿಲ್, ಆಶಾ ಶರತ್, ಮುರಳಿ ಗೋಪಿ ಮತ್ತು ಸಿದ್ದಿಕ್ ಸೇರಿದಂತೆ ಈ ಹಿಂದಿನ ಭಾಗಗಳಲ್ಲಿದ್ದ ಪ್ರಮುಖ ಕಲಾವಿದರು ದೃಶ್ಯಂ 3 ಚಿತ್ರದಲ್ಲೂ ಮುಂದುವರಿದಿದ್ದಾರೆ.