ಕಿರುತೆರೆ ಮನರಂಜನಾ ಕ್ಷೇತ್ರದಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಜೀ ಕನ್ನಡ ವಾಹಿನಿ ಹೊಸದೊಂದು ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ 'ಕೃಷ್ಣ ರುಕ್ಕು' ಧಾರಾವಾಹಿಯನ್ನು ಕನ್ನಡ ವೀಕ್ಷಕರಿಗೆ ನೀಡುತ್ತಿದೆ. ಮಾರ್ಚ್ 9 ರಿಂದ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಹೊಸ ಸೀರಿಯಲ್ ಪ್ರಸಾರವಾಗಲಿದೆ.
'ಕೃಷ್ಣ ರುಕ್ಕು' ಧಾರಾವಾಹಿಯ ತಿರುಳೇನು?
ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜೊತೆಗೆ ಅನಿರೀಕ್ಷಿತ ತಿರುವುಗಳು ಕೂಡ ʻಕೃಷ್ಣ ರುಕ್ಕುʼ ಧಾರಾವಾಹಿಯಲ್ಲಿ ಕಾಣಸಿಗಲಿದೆ. ಅಣ್ಣನ ಅಕಾಲಿಕ ನಿಧನದ ನಂತರ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹಾಕಿಕೊಂಡ ರುಕ್ಕು ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಇಲ್ಲಿ ತೋರಿಸಲಾಗಿದೆಯಂತೆ. ಪ್ರೀತಿ, ದ್ವೇಷ ಮತ್ತು ವಿಧಿಯಾಟದ ನಡುವೆ ಕೃಷ್ಣ ಮತ್ತು ರುಕ್ಕುವಿನ ಜೀವನ ಹೇಗೆ ಸಾಗಲಿದೆ ಎನ್ನುವುದು ಈ ಧಾರಾವಾಹಿಯ ಮತ್ತೊಂದು ಕುತೂಹಲಕಾರಿ ಅಂಶ.
ಕಲಾವಿದರು ಯಾರ್ ಯಾರು?
ನಟಿ ಮೌನ ಗುಡ್ಡೇಮನೆ ಅವರು ಇಲ್ಲಿ ರುಕ್ಕು ಆಗಿ ನಟಿಸಿದರೆ, ಕೃಷ್ಣನ ಪಾತ್ರವನ್ನು ಅಕ್ಷಯ್ ನಾಯಕ್ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ, ಹಿರಿಯ ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಅವರಿಲ್ಲಿ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಹಲವು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ ಖ್ಯಾತ ನಟಿ ಸುಚಿತ್ರಾ. ಒಂದು ಮುಖ್ಯ ಪಾತ್ರವನ್ನು ಗಾಯಕ ನವೀನ ಸಜ್ಜು ಮಾಡಿದ್ದಾರೆ.
Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?
ದಿಲೀಪ್ ರಾಜ್ ನಿರ್ಮಾಣದ ಸೀರಿಯಲ್
ಕೃಷ್ಣ ರುಕ್ಕು ಧಾರಾವಾಹಿಯನ್ನು ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ನಿರ್ಮಿಸಿದ್ದಾರೆ. ಇಲ್ಲಿ ಮನಸೆಳೆಯುವ ಕಥೆ ಮತ್ತು ಭಾವನಾತ್ಮಕ ನಟನೆ ಪ್ರೇಕ್ಷಕರಿಗೆ ಕಾಣಸಿಗಲಿದೆಯಂತೆ.
ನಟಿ ಮೌನ ಗುಡ್ಡೆಮನೆ ಸಂದರ್ಶನ
"ಜೀ ಕನ್ನಡ ವಾಹಿನಿ ಯಾವಾಗಲೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ನೈಜ ಭಾವನೆಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಕಥೆಗಳನ್ನು ವೀಕ್ಷಕರಿಗೆ ತಲುಪಿಸಲು ಇಚ್ಚಿಸುತ್ತದೆ. 'ಕೃಷ್ಣ ರುಕ್ಕು' ಧಾರಾವಾಹಿಯು ಪ್ರೀತಿ, ಜವಾಬ್ದಾರಿ ಮತ್ತು ವಿಧಿಯಾಟದ ಸುತ್ತ ನಡೆಯುವ ಒಂದು ಸುಂದರವಾದ ಕಥೆಯಾಗಿದೆ. ಈ ಧಾರಾವಾಹಿಯಲ್ಲಿನ ವೈವಿಧ್ಯಮಯ ಪಾತ್ರಗಳು ಮತ್ತು ಕುತೂಹಲಕಾರಿ ಕಥೆಯು ವೀಕ್ಷಕರ ಮನಸ್ಸನ್ನು ಗೆಲ್ಲುವುದಲ್ಲದೆ, ನಮ್ಮ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ನಂಬಿಕೆ ನಮಗಿದೆ" ಎಂದು ಹೇಳುತ್ತಾರೆ ಜೀ ಕನ್ನಡ ವಾಹಿನಿಯ ಚೀಫ್ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮುಲು.