ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ರಾಮಾಚಾರಿ (Ramachari Serial) ಸೀರಿಯಲ್ ಶುರುವಾಗಿ ನಾಲ್ಕು ವರ್ಷ ಕಳೆದು ಮುಕ್ತಾಯವಾಗಿದೆ. ಈ ಧಾರಾವಾಹಿ ನಾಯಕಿ ಮೌನ ಗುಡ್ಡೆಮನೆ (mouna guddemane). ಇನ್ನು ಮೌನ ಗುಡ್ಡೆಮನೆ ಕಿರುತೆರೆಯ ಪ್ರೇಕ್ಷಕರಿಗೆ ಚಾರು ಆಗಿ ಪರಿಚಿತರಾದವರು. ನಟಿಯ ಫ್ಯಾನ್ಸ್‌ಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಮೌನ ಗುಡ್ಡೆಮನೆಗೆ ಬಂಪರ್ ಆಫರ್ ಸಿಕ್ಕಿದೆ. ಹೊಸ ಧಾರಾವಾಹಿಯಲ್ಲಿ ನಟಿ ನಾಯಕಿಯಾಗಿ (Actress) ಮಿಂಚಲಿದ್ದಾರೆ . ಯಾವುದು ಅದು?
ಭರ್ಜರಿ ಆಫರ್
ರಾಮಾಚಾರಿ ಧಾರಾವಾಹಿಯಲ್ಲಿ ಸೊಕ್ಕಿನ ಬೆಡಗಿ ಚಾರು ಆಗಿ, ಬಳಿಕ ಪ್ರೇಮಿಯಾಗಿ, ನಂತರ ನಾರಾಯಣಾಚಾರ್ಯರ ಮನೆಯ ಮುದ್ದಿನ ಸೊಸೆಯಾಗಿ ವಿಭಿನ್ನ ರೀತಿಯ ಪಾತ್ರ ಬದಲಾವಣೆ ಮೂಲಕ ಗಮನ ಸೆಳೆದಿದ್ದರು. ಈ ಸೀರಿಯಲ್ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆಗೆ ಭರ್ಜರಿ ಆಫರ್ ಸಿಕ್ಕಿದೆ. ಹಾಗಂತ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಈ ಬಗ್ಗೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: Shruti Haasan: ಸಿಗರೇಟ್ ಹೊಡೆಯುತ್ತಿರುವ ಶ್ರುತಿ ಹಾಸನ್! ಖಡಕ್ ಪೋಸ್ಟರ್ ಔಟ್
‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ?
ಕಲರ್ಸ್‌ನಿಂದ ಜೀಗೆ ಎಂಟ್ರಿ ಕೊಡ್ತಿದ್ದಾರೆ. ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗೇ ‘ಒಲವಿನ ನಿಲ್ದಾಣ’ ಧಾರಾವಾಹಿ ನಾಯಕ, ಅಕ್ಷಯ್ ನಾಯಕ್ ಆಯ್ಕೆಯಾಗಿದ್ದಾರೆ. ಈ ಧಾರಾವಾಹಿ ಯಾವಾಗಿನಿಂದ ಪ್ರಾರಂಭ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಇವರು ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದು, ಮಧ್ಯಮ ವರ್ಗದ, ಆರ್ಮಿ ಹಿನ್ನೆಲೆಯ ಕುಟುಂಬದಿಂದ ಬಂದವರು. ಜೀ ವಾಹಿನಿಯಲ್ಲಿ ಸಾಕಷ್ಟು ಉತ್ತಮ ಧಾರಾವಾಹಿಗಳು ಪ್ರಸಾರ ಕಾಣುತ್ತಿದೆ.
TRPಯಲ್ಲಿಯೂ ಬಹುತೇಕ ಜೀ ಕನ್ನಡ ಧಾರಾವಾಹಿಗಳೇ ಇರ್ತವೆ. ಜೀ ಕನ್ನಡ ವಾಹಿನಿಯು ಎರಡು ಹೊಸ ಧಾರಾವಾಹಿಗಳ ಪ್ರೋಮೋನ ಹಂಚಿಕೊಂಡಿದೆ. ‘ಕೃಷ್ಣ ರುಕ್ಕು’ ಎಂಬುದು ಧಾರಾವಾಹಿಯ ಹೆಸರು.ಜಗದ್ಧಾತ್ರಿ ಹೆಸರಿನ ಧಾರಾವಾಹಿ ಕೂಡ ಬರುತ್ತಿದೆ.ಈ ಧಾರಾವಾಹಿ ಪ್ರೋಮೋಗೆ ‘ಇವಳು ಮನೆ ಬೆಳಗೋ ದೀಪವೂ ಹೌದು, ಅಧರ್ಮಕ್ಕೆ ಅಂತ್ಯ ಹಾಡೋ ಜ್ವಾಲೆಯೂ ಹೌದು’ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಇದನ್ನೂ ಓದಿ: Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ.