Kiara Advani: "ನಮ್ಮ ಪೇರೆಂಟ್‌ವುಡ್ ಆನಂದಿಸಲು ಪ್ರೈವಸಿ ನೀಡಿ"; ಫ್ಯಾನ್ಸ್ ಬಳಿ ಮನವಿ ಮಾಡಿದ ಸಿದ್ದ್-ಕಿಯಾರಾ
ಬಾಲಿವುಡ್ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ..ಇದೀಗ ಆಸ್ಪತ್ರೆಯಿಂದ ಮಗಳಿನೊಂದಿಗೆ ಕಿಯಾರಾ ಡಿಸ್ಚಾರ್ಜ್ ಆಗಿದ್ದು, ತಮ್ಮ ಬೇಬಿ ಜೊತೆ ಜೊತೆ ಸಮಯವನ್ನು ಕಳೆಯಲು ಇಚ್ಚಿಸಿರುವ ಈ ಜೋಡಿ ತಮ್ಮ ಅಭಿಮಾನಿಗಳ ಬಳಿ ವಿಷೇಶ ಮನವಿ ಮಾಡಿಕೊಂಡಿದ್ದು, ಪರೆಂಟ್ ವುಡ್ ಅನ್ನು ನಾವು ಅನುಭವಿಸಿ ಜೀವಿಸಲು ಕಾತುರರಾಗಿದ್ದೇವೆ ಎಂದಿದ್ದಾರೆ.

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ

ಮುಂಬೈ: ಬಾಲಿವುಡ್ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ.ಜುಲೈ 15ರಂದು ಮುಂಬೈನ ಗಿರ್ಗಾಂವ್‌ನಲ್ಲಿರುವ ರಿಲಯನ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದ್ದು, ಈ ವಿಚಾರವನ್ನು ದಂಪತಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು, ಸ್ಟಾರ್ ನಟ-ನಟಿಯರು, ಆಪ್ತರು ಎಲ್ಲರೂ ವಿಶ್ ಮಾಡಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ನಟಿಗೆ ಆಗಸ್ಟ್‌ನಲ್ಲಿ ಮಗು ಜನಿಸಬೇಕಿತ್ತು. ಆದರೆ ಮಗು ಬೇಗನೆ ಜನಿಸಿದೆ. ಕಿಯಾರಾಳನ್ನು ಹೆರಿಗೆಗಾಗಿ ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆಯಿಂದ ಮಗಳಿನೊಂದಿಗೆ ಕಿಯಾರಾ ಡಿಸ್ಚಾರ್ಜ್ ಆಗಿದ್ದು, ತಮ್ಮ ಬೇಬಿ ಜೊತೆ ಜೊತೆ ಸಮಯವನ್ನು ಕಳೆಯಲು ಇಚ್ಚಿಸಿರುವ ಈ ಜೋಡಿ ತಮ್ಮ ಅಭಿಮಾನಿಗಳ ಬಳಿ ವಿಷೇಶ ಮನವಿ ಮಾಡಿಕೊಂಡಿದ್ದು, ಪರೆಂಟ್ ವುಡ್ ಅನ್ನು ನಾವು ಅನುಭವಿಸಿ ಜೀವಿಸಲು ಕಾತುರರಾಗಿದ್ದೇವೆ ಎಂದಿದ್ದಾರೆ.
ಹೌದು ತಂದೆ-ತಾಯಿಯಾಗಿ ಪ್ರಮೋಷನ್ ಪಡೆದ ಕಿಯಾರಾ-ಸಿದ್ಧಾರ್ಥ್ ದಂಪತಿ ತಾವು ಅಪ್ಪ-ಅಮ್ಮ ಆಗಿರುವ ಖುಷಿಯ ಕ್ಷಣವನ್ನು ಅನಂದಿಸಲು ಗೌಪ್ಯತೆಗಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು,“ನಮ್ಮ ಹೃದಯ ತುಂಬಿ ಬಂದಿದೆ. ಈ ವಿಶೇಷ ಸಮಯವನ್ನು ಖಾಸಗಿಯಾಗಿ ಆನಂದಿಸಲು ಬಯಸುತ್ತೇವೆ,” ಎಂದು ತಿಳಿಸಿದ್ದಾರೆ. ಜೊತೆಗೆ “ಚಿತ್ರಗಳಿಲ್ಲ, ಕೇವಲ ಆಶೀರ್ವಾದ,” ಎಂದು ಹೇಳಿ, ಎಲ್ಲರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.
ಇನ್ನು, ಕಿಯಾರಾ ಮತ್ತು ಸಿದ್ಧಾರ್ಥ್ ಪಾಪರಾಜಿಗಳಿಗೆ ಸಿಹಿ ಹಂಚಿ ಗೌಪ್ಯತೆಗಾಗಿ ಮನವಿ ಮಾಡಿದ್ದಾರೆ. ಸೆಲೆಬ್ರಿಟಿ ಛಾಯಾಗ್ರಾಹಕ ಸ್ನೇಹ ಜಾಲಾ ಹಂಚಿಕೊಂಡ ವಿಡಿಯೋದಲ್ಲಿ, ಹೃದಯಾಕಾರದ ಬಲೂನ್‌ಗಳಿಂದ ಅಲಂಕರಿಸಿದ ಗುಲಾಬಿ ಪೆಟ್ಟಿಗೆಗಳು ಕಂಡುಬಂದಿವೆ. ಪೆಟ್ಟಿಗೆಯ ಟಿಪ್ಪಣಿಯಲ್ಲಿ, “ನಮ್ಮ ಮಗು ಆಗಮಿಸಿದೆ. ಈ ವಿಶೇಷ ಕ್ಷಣವನ್ನು ಆಚರಿಸಲು ಚಿಕ್ಕದಾಗಿ ಸಿಹಿ ಹಂಚಿಕೊಂಡಿದ್ದೇವೆ. ಚಿತ್ರಗಳಿಲ್ಲ, ಕೇವಲ ಆಶೀರ್ವಾದ,” ಎಂದು ಕಿಯಾರಾ ಮತ್ತು ಸಿದ್ಧಾರ್ಥ್ ಬರೆದಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಮಸೀದಿ ಆವರಣದಲ್ಲಿ ಇಲಿಗಳನ್ನು ತಂದು ಬಿಡುತ್ತಿದ್ದ ವ್ಯಕ್ತಿಗೆ ಜೈಲು ಶಿಕ್ಷೆ
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ 2018ರಲ್ಲಿ ಚಿತ್ರದ ಸಮಾರಂಭದಲ್ಲಿ ಮೊದಲು ಭೇಟಿಯಾದರು. 2021ರ ‘ಶೇರ್‌ಶಾಹ್’ ಚಿತ್ರೀಕರಣದ ವೇಳೆ ಇವರ ಸಂಬಂಧ ಬೆಳೆಯಿತು. ತೆರೆಯ ಮೇಲಿನ ಕೆಮಿಸ್ಟ್ರಿ, ಡೇಟಿಂಗ್ ಗಾಸಿಪ್‌ಗೆ ಕಾರಣವಾಯಿತು. 2023ರ ಫೆಬ್ರವರಿ 7ರಂದು ಜೈಸಲ್ಮೇರ್‌ನ ಸೂರ್ಯಗಢ್ ಪ್ಯಾಲೇಸ್‌ನಲ್ಲಿ ಇವರು ವಿವಾಹವಾದರು. “ನಮ್ಮ ಶಾಶ್ವತ ಬುಕಿಂಗ್ ಆಗಿದೆ,” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದರು.