ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮಸೀದಿ ಆವರಣದಲ್ಲಿ ಇಲಿಗಳನ್ನು ತಂದು ಬಿಡುತ್ತಿದ್ದ ವ್ಯಕ್ತಿ; ಆಮೇಲೇನಾಯ್ತು ನೋಡಿ?

ಮಸೀದಿಯ (Sheffield Mosque) ಹೊರಗೆ ವ್ಯಕ್ತಿಯೊಬ್ಬ ಇಲಿಗಳನ್ನು (rats) ತಂದು ಬಿಡುತ್ತಿರುವ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಇದು ಜನಾಂಗೀಯ ದ್ವೇಷದ ಚರ್ಚೆಯನ್ನು ಹುಟ್ಟುಹಾಕಿದೆ. ಇದರ ದೃಶ್ಯವಾಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಈ ಘಟನೆ ಯುಕೆಯ (UK) ಶೆಫೀಲ್ಡ್ ಗ್ರ್ಯಾಂಡ್ ಮಸೀದಿ ( Sheffield Grand Mosque ) ಬಳಿ ನಡೆದಿದೆ. ಬಳಿಕ ಇದು ಸಾಮಾಜಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಸೀದಿ ಆವರಣದಲ್ಲಿ ಇಲಿಯನ್ನು ತಂದು ಬಿಟ್ಟಿರುವ 66 ವರ್ಷದ ಎಡ್ಮಂಡ್ ಫೌಲರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಸೀದಿ ಆವರಣದಲ್ಲಿ ಇಲಿಗಳನ್ನು ತಂದು ಬಿಡುತ್ತಿದ್ದ ವ್ಯಕ್ತಿ!

ಶೆಫೀಲ್ಡ್: ಮಸೀದಿಯ (Sheffield Mosque) ಹೊರಗೆ ವ್ಯಕ್ತಿಯೊಬ್ಬ ಇಲಿಗಳನ್ನು (rats) ತಂದು ಬಿಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದು ಜನಾಂಗೀಯ ದ್ವೇಷದ ಚರ್ಚೆಯನ್ನು ಹುಟ್ಟುಹಾಕಿದೆ. ಇದರ ದೃಶ್ಯವಾಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಈ ಘಟನೆ ಯುಕೆಯ (UK) ಶೆಫೀಲ್ಡ್ ಗ್ರ್ಯಾಂಡ್ ಮಸೀದಿ ( Sheffield Grand Mosque ) ಬಳಿ ನಡೆದಿದೆ. ಬಳಿಕ ಇದು ಸಾಮಾಜಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಸೀದಿ ಆವರಣದಲ್ಲಿ (Viral News) ಇಲಿಯನ್ನು ತಂದು ಬಿಟ್ಟಿರುವ 66 ವರ್ಷದ ಎಡ್ಮಂಡ್ ಫೌಲರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಶೆಫೀಲ್ಡ್ ಗ್ರ್ಯಾಂಡ್ ಮಸೀದಿಯ ಹೊರಗೆ ಇಲಿಗಳನ್ನು ತಂದು ಬಿಟ್ಟ ಎಡ್ಮಂಡ್ ಫೌಲರ್‌ಗೆ ನ್ಯಾಯಾಲಯವು 18 ವಾರಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಮಸೀದಿ ಮತ್ತು ಶೆಫೀಲ್ಡ್‌ನ ಕೆಲವು ಪ್ರದೇಶಗಳ ಬಳಿ ಹೋಗುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮಸೀದಿ ಆವರಣದಲ್ಲಿ ಎಡ್ಮಂಡ್ ಫೌಲರ್ ಇಲಿಗಳನ್ನು ತಂದು ಬಿಟ್ಟಿರುವ ಸಿಸಿಟಿವಿ ದೃಶ್ಯವಾಳಿಗಳನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಲಾಗಿದ್ದು, ಇದನ್ನು ನೋಡಿದ ಮ್ಯಾಜಿಸ್ಟ್ರೇಟ್‌, ಇದೊಂದು ಅಸಹ್ಯಕರ ಮತ್ತು ಅಮಾನವೀಯ ಎಂದು ಹೇಳಿದ್ದಾರೆ. ಅಲ್ಲದೇ ಇದು ಪೂರ್ವಯೋಜಿತ ಅಪರಾಧ ಎಂದು ತಿಳಿಸಿದ್ದಾರೆ.

ಗ್ರಿಮೆಸ್ಟೋರ್ಪ್ ರಸ್ತೆಯಲ್ಲಿರುವ ಮಸೀದಿಯ ಹೊರಗೆ ಪಂಜರದ ಇಲಿಗಳನ್ನು ಬಿಡುಗಡೆ ಮಾಡಿದ 66 ವರ್ಷದ ಎಡ್ಮಂಡ್ ಫೌಲರ್ ಈ ಸಂದರ್ಭದಲ್ಲಿ ಸ್ವತಃ ರೆಕಾರ್ಡ್ ಮಾಡಿದ ಮೊಬೈಲ್ ಫೋನ್ ದೃಶ್ಯಗಳಲ್ಲಿ ಅವರು ಇಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರು ಇಲಿಗಳಿಗೆ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಊಹಿಸಿ. ಬೈ ಬೈ ಹೇಳಿ ನಾನು ನಿಮಗೆ ಸರಿಯಾದ ದಿಕ್ಕು ತೋರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಎಡ್ಮಂಡ್ ಫೌಲರ್ ವಿರುದ್ಧ ಜನಾಂಗೀಯ ನಿಂದನೆ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿದ್ದು, ಈ ಕುರಿತು ವಿಚಾರಣೆ ನಡೆಸಿದ ಶೆಫೀಲ್ಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಅವರಿಗೆ 18 ವಾರಗಳ ಜೈಲು ಶಿಕ್ಷೆಯನ್ನು ಘೋಷಿಸಿ ಮಸೀದಿ ಮತ್ತು ಶೆಫೀಲ್ಡ್‌ನ ಕೆಲವು ಪ್ರದೇಶಗಳ ಬಳಿ ಹೋಗುವುದನ್ನು ನಿಷೇಧಿಸಿ ಆದೇಶ ಹೊರಡಿಸಿದರು.

ಈ ಕುರಿತು ಹೇಳಿಕೆ ನೀಡಿರುವ ಶೆಫೀಲ್ಡ್ ಗ್ರ್ಯಾಂಡ್ ಮಸೀದಿಯ ವ್ಯವಸ್ಥಾಪಕರು, ಎಡ್ಮಂಡ್ ಫೌಲರ್ ಕಿರುಕುಳಕ್ಕೆ ಜನರು ಹೆದರುತ್ತಿದ್ದಾರೆ. ಮಸೀದಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.



ಪೀಠದ ಅಧ್ಯಕ್ಷೆ ಸುಜೇನ್ ಐರಿಶ್ ಡೆವೆರಿಲ್ ಮಾತನಾಡಿ, ಎಡ್ಮಂಡ್ ಫೌಲರ್ ಕೃತ್ಯವು ಪೂರ್ವ ಯೋಜಿತವಾಗಿತ್ತು. ಅಲ್ಲದೆ ಅವರೇ ಅದನ್ನು ತಮ್ಮ ಮೊಬೈಲ್ ನಲ್ಲಿ ದಾಖಲಿಸಿಕೊಂಡಿದ್ದಾರೆ. ಇದು ಅನೇಕರಿಗೆ ಆಘಾತ ಮತ್ತು ಸಂಕಟವನ್ನು ಉಂಟುಮಾಡಿದೆ. ಇದು ದ್ವೇಷ ಅಪರಾಧ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:International Yoga Day:‌ ಸಿಕ್ಕಾಪಟ್ಟೆ ವೈರಲ್‌ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!

ಎಡ್ಮಂಡ್ ಫೌಲರ್ ಪತ್ನಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇದರ ಒತ್ತಡದಿಂದಾಗಿ ಅವರು ಮಾನಸಿಕ ಅಸ್ವಸ್ಥತೆ ಹೊಂದಿರಬಹುದು ಎಂದು ಅವರ ಪರ ವಕೀಲರು ಹೇಳಿದರೂ ಎಡ್ಮಂಡ್ ಫೌಲರ್ ಯಾವುದೇ ಕಾರಣ ನೀಡಲಿಲ್ಲ. ಅವರು ತಮ್ಮ ನಡವಳಿಕೆ ತಪ್ಪು ಎಂದು ಒಪ್ಪಿಕೊಂಡರು ಎನ್ನಲಾಗಿದೆ.