ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Muddhu Sose Serial: ಮುದ್ದು ಸೊಸೆ ಮಹಾಸಂಚಿಕೆ; ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ

Muddu Sose Kannada Serial: ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿಯ ಈ ಮಹಾ ಸಂಚಿಕೆಯು ಇಂದಿನಿಂದ ಆರಂಭವಾಗಲಿದೆ. ಸ್ವಂತ ಮಗಳು ಭವಾನಿ ಕಾಲೇಜಿನಲ್ಲಿ ಓದುವಾಗ ಲವ್ ಮಾಡಿ ಮದುವೆ ಮಾಡಿಕೊಂಡಳು ಎಂಬ ಸಿಟ್ಟಿನಿಂದ, ‘ಇನ್ಮುಂದೆ ಮನೆ ಹೆಣ್ಮಕ್ಕಳು ಕಾಲೇಜಿಗೆ ಹೋಗಂಗಿಲ್ಲ’ ಅಂತ ಶಿವರಾಮೇಗೌಡ ಎಂದೋ ನಿರ್ಧಾರ ಮಾಡಿ ಆಗಿದೆ. ಶಿವರಾಮೇಗೌಡ್ರ ಸೊಸೆಯಾಗಿ ಬಂದಿರೋದು ವಿದ್ಯಾ. ಹೆಸರಿನ ತಕ್ಕಂತೆ ಈಕೆ ವಿದ್ಯಾವಂತೆ. ಡಾಕ್ಟರ್ ಆಗಬೇಕು ಎಂಬ ಮಹದಾಸೆ ವಿದ್ಯಾಗಿದೆ. ಆದರೆ ಸಾಕಷ್ಟು ಅಡೆ ತಡೆಗಳು ಆಕೆಗೆ ಇದೆ.

ಮುದ್ದು ಸೊಸೆ ಧಾರಾವಾಹಿ

ಕಲರ್ಸ್‌ ಕನ್ನಡದ (Colors Kannada) ಮುದ್ದು ಸೊಸೆ ಧಾರಾವಾಹಿಯ ಈ ಮಹಾ ಸಂಚಿಕೆಯು ಇಂದಿನಿಂದ ಆರಂಭವಾಗಲಿದೆ. ಸ್ವಂತ ಮಗಳು ಭವಾನಿ ಕಾಲೇಜಿನಲ್ಲಿ ಓದುವಾಗ ಲವ್ ಮಾಡಿ ಮದುವೆ ಮಾಡಿಕೊಂಡಳು ಎಂಬ ಸಿಟ್ಟಿನಿಂದ, ‘ಇನ್ಮುಂದೆ ಮನೆ ಹೆಣ್ಮಕ್ಕಳು ಕಾಲೇಜಿಗೆ ಹೋಗಂಗಿಲ್ಲ’ ಅಂತ ಶಿವರಾಮೇಗೌಡ (Shivarame Gowd) ಎಂದೋ ನಿರ್ಧಾರ ಮಾಡಿ ಆಗಿದೆ. ಶಿವರಾಮೇಗೌಡ್ರ ಸೊಸೆಯಾಗಿ ಬಂದಿರೋದು ವಿದ್ಯಾ. ಹೆಸರಿನ ತಕ್ಕಂತೆ ಈಕೆ ವಿದ್ಯಾವಂತೆ. ಡಾಕ್ಟರ್ ಆಗಬೇಕು ಎಂಬ ಮಹದಾಸೆ ವಿದ್ಯಾಗಿದೆ. ಆದರೆ ಸಾಕಷ್ಟು ಅಡೆ ತಡೆಗಳು ಆಕೆಗೆ ಇದೆ. ಈಗ ಕಥೆಯಲ್ಲಿ ಭದ್ರ ಮತ್ತು ವಿದ್ಯಾಳ (Bhadra Vidya) ಜೀವನದಲ್ಲಿ ಬಿರುಗಾಳಿ ಎದ್ದಿದೆ. ಇವರ ಸಂಬಂಧವನ್ನು ಹಾಳು ಮಾಡಲು ವಿರೋಧಿಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ರೋಚಕ ತಿರುವು

ಕಲರ್ಸ್ ಕನ್ನಡ ವಾಹಿನಿಯ 'ಮುದ್ದು ಸೊಸೆ' ಧಾರಾವಾಹಿ ಈಗ ರೋಚಕ ತಿರುವು ಪಡೆದುಕೊಂಡಿದೆ. ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಮಹಾ ಸಂಚಿಕೆ ಈಗ ಪ್ರಸಾರಕ್ಕೆ ಸಿದ್ಧವಾಗಿದೆ. ಭದ್ರನು ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: Ranbir Kapoor : ಲವ್ & ವಾರ್ ಪೋಸ್ಟ್‌ಪೋನ್‌? ರಣಬೀರ್ ಕಪೂರ್ ಮೂವಿ ಕುರಿತು ಬಿಗ್‌ ಅಪ್‌ಡೇಟ್



ಮನೆಯ ಹಿರಿಯರು ಭದ್ರನ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.ವಿದ್ಯಾಳ ನಂಬಿಕೆಗೆ ದ್ರೋಹ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಭದ್ರನಿಗೆ ಅತೀವ ನೋವುಂಟು ಮಾಡಿದೆ. ಭದ್ರ ತನ್ನ ತಪ್ಪನ್ನು ಒಪ್ಪಿಕೊಂಡು ನನ್ನ ಮಗಳ ಕೊರಳಿಗೆ ತಾಳಿ ಕಟ್ಟಬೇಕು ಎನ್ನುತ್ತಾರೆ. ಆದರೆ ವಿದ್ಯಾ ಮುಂದೆ ಈನ್ನೊಬ್ಬಳ ಕುತ್ತಿಗೆಗೆ ಭದ್ರ ತಾಳಿ ಕಟ್ಟುತ್ತಾನಾ? ವಿದ್ಯಾ ಧೈರ್ಯಗೆಡದೆ ತನ್ನ ಸಂಸಾರವನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದಾಳೆ.

ಅಮ್ಮಮ್ಮ ಸಾಥ್‌

ವಿದ್ಯಾಳಿಗೆ ಇಷ್ಟೂ ದಿನ ಅಮ್ಮಮ್ಮ ನೆರವಾಗಿದ್ದರು. ಅಮ್ಮಮ್ಮ ಭಾಗೀರಥಿ ಮತ್ತು ಪತಿ ಭದ್ರೇಗೌಡ್ರ ಸಹಾಯ, ಸಹಕಾರದಿಂದ ವಿದ್ಯಾ ಪಿಯುಸಿ ಪೂರಕ ಪರೀಕ್ಷೆ ಬರೆದಿದ್ದಾಯ್ತು. ಪೂರಕ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಅಂಕಗಳನ್ನ ಪಡೆದು ರಾಜ್ಯಕ್ಕೇ ಪ್ರಥಮ ರಾಂಕ್ ಬಂದಿದ್ದೂ ಆಯ್ತು. ವಿಷಯ ಗೊತ್ತಾಗಿ, ಹೆತ್ತ ತಾಯಿ ಭಾಗೀರಥಿ ಮೇಲೇ ಶಿವರಾಮೇಗೌಡ ಮುನಿಸಿಕೊಂಡರು.

ಇದಾದ ಬಳಿಕ ಮೊದಲಿನಿಂದಲೂ ವಿದ್ಯಾ ಮೇಲೆ ಈಶ್ವರಿಗೆ ಜಿದ್ದು. ವಿದ್ಯಾ ಓದಿದರೆ ತಾನೆ ಡಾಕ್ಟರ್ ಆಗೋದು. ಮೆಡಿಕಲ್ ಎಂಟ್ರೆನ್ಸ್‌ ಎಕ್ಸಾಂನಲ್ಲಿ ವಿದ್ಯಾ ಪಾಸ್ ಆಗಬಾರದು ಅಂತ ಶಿವರಾಮೇಗೌಡ್ರಿಗೆ ಈಶ್ವರಿ ಐಡಿಯಾ ಕೊಟ್ಟಿದ್ದಾಳೆ. ಇದೆಲ್ಲದರ ಮಧ್ಯೆ ಹೊಸ ಸಮಸ್ಯೆ ಎದುರಾಗಿದೆ. ಭದ್ರನ ವಿಚಾರವಾಗಿ ಹೊಸ ಅಗ್ನಿ ಪರೀಕ್ಷೆ ಎದುರಾಗಿದೆ. ಭದ್ರ ಮತ್ತು ವಿದ್ಯಾ ಒಂದಾಗುತ್ತಾರಾ? ಕುತಂತ್ರಿಗಳ ಕೈ ಮೇಲೆರುತ್ತಾ? ಎಂಬುದು ವೀಕ್ಷಕರಲ್ಲಿಮಿರೋ ಕುತೂಹಲ.

ಇದನ್ನೂ ಓದಿ: Abhishek Bachchan : AI ಪ್ರತಿಯೊಬ್ಬ ನಟನನ್ನೂ ಹೆದರಿಸುವಂತಿದೆ; ಅಭಿಷೇಕ್ ಬಚ್ಚನ್

ಮುದ್ದು ಸೊಸೆ ರಾತ್ರಿ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. , ‘ಮುದ್ದು ಸೊಸೆ’ ಸೀರಿಯಲ್‌ನಲ್ಲಿ ತ್ರಿವಿಕ್ರಮ್, ಪ್ರತಿಮಾ ಠಾಕೂರ್, ಮುನಿ ಮುಂತಾದವರು ಅಭಿನಯಿಸುತ್ತಿದ್ದಾರೆ.

Yashaswi Devadiga

View all posts by this author