ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Muddu Sose Serial: ‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಬಿಗ್‌ ಟ್ವಿಸ್ಟ್!

Muddu Sose Serial: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ‘ಮುದ್ದು ಸೊಸೆ’ (Muddu sose serial) ಇದೀಗ ಹೊಸ ತಿರುವಿನ ಮೂಲಕ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇಷ್ಟು ದಿನ ವಿದ್ಯಾ ಮತ್ತು ಭದ್ರ ನಡುವಿನ ಪ್ರೀತಿ, ಜಗಳ, ಮುನಿಸು, ದೂರವಾಗುವಿಕೆ ಹಾಗೂ ಮತ್ತೆ ಒಂದಾಗುವ ಸನ್ನಿವೇಶಗಳನ್ನೇ ನೋಡುತ್ತಿದ್ದ ಪ್ರೇಕ್ಷಕರಿಗೆ ಇದೀಗ ನಿರ್ದೇಶಕರು ಬಿಗ್ ಟ್ವಿಸ್ಟ್ (Big Twist) ನೀಡಿದ್ದಾರೆ. ಆದರೆ ಈ ಹೊಸ ತಿರುವು ವೀಕ್ಷಕರಿಗೆ ಖುಷಿ ನೀಡುವ ಬದಲು ಶಾಕ್ ನೀಡಿದೆ.

ಮುದ್ದು ಸೊಸೆ ಧಾರಾವಾಹಿ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ‘ಮುದ್ದು ಸೊಸೆ’ (Muddu sose serial) ಇದೀಗ ಹೊಸ ತಿರುವಿನ ಮೂಲಕ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇಷ್ಟು ದಿನ ವಿದ್ಯಾ ಮತ್ತು ಭದ್ರ ನಡುವಿನ ಪ್ರೀತಿ, ಜಗಳ, ಮುನಿಸು, ದೂರವಾಗುವಿಕೆ ಹಾಗೂ ಮತ್ತೆ ಒಂದಾಗುವ ಸನ್ನಿವೇಶಗಳನ್ನೇ ನೋಡುತ್ತಿದ್ದ ಪ್ರೇಕ್ಷಕರಿಗೆ ಇದೀಗ ನಿರ್ದೇಶಕರು ಬಿಗ್ ಟ್ವಿಸ್ಟ್ (Big Twist) ನೀಡಿದ್ದಾರೆ. ಆದರೆ ಈ ಹೊಸ ತಿರುವು ವೀಕ್ಷಕರಿಗೆ ಖುಷಿ ನೀಡುವ ಬದಲು ಶಾಕ್ ನೀಡಿದೆ.

ಮೂರನೇ ಬಾರಿ ದೂರವಾದ ವಿದ್ಯಾ ಮತ್ತು ಭದ್ರ!

ಧಾರಾವಾಹಿಯಲ್ಲಿ ವಿದ್ಯಾ ಮತ್ತು ಭದ್ರ ಈಗಾಗಲೇ ಎರಡು ಬಾರಿ ಒಂದಾಗುವುದು, ಮತ್ತೆ ದೂರವಾಗುವುದನ್ನು ವೀಕ್ಷಕರು ನೋಡಿದ್ದಾರೆ. ವಿದ್ಯಾಳನ್ನು ಅಪಾರವಾಗಿ ಪ್ರೀತಿಸುವ ಭದ್ರ, ಕೆಲವೊಮ್ಮೆ ಆಕೆಯ ಮೇಲೆಯೇ ತಪ್ಪು ಹೊರಿಸಿ ದೂರವಾಗಿದ್ದಾನೆ. ಇತ್ತೀಚೆಗಷ್ಟೇ ಇಬ್ಬರ ನಡುವಿನ ಎಲ್ಲಾ ಮನಸ್ತಾಪಗಳು ದೂರವಾಗಿ ಮತ್ತೆ ಒಂದಾಗಿದ್ದರು.

ಆದರೆ ಇದೀಗ ಮತ್ತೊಮ್ಮೆ ಇಬ್ಬರ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ತುಂಬು ಗರ್ಭಿಣಿಯಾಗಿರುವ ಪತ್ನಿ ವಿದ್ಯಾಳನ್ನು ಬಿಟ್ಟು ಭದ್ರ ಡಿವೋರ್ಸ್ ನೀಡಿದ್ದಾನೆ. ಅಷ್ಟೇ ಅಲ್ಲದೆ, ವಿದ್ಯಾಳ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಮತ್ತೊಂದು ಮದುವೆಯಾಗಲು ಸಿದ್ಧನಾಗಿದ್ದಾನೆ. ಭದ್ರನ ಈ ನಿರ್ಧಾರ ವೀಕ್ಷಕರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: Bigg Boss Kannada 13: ಜಗ್ಗ ಮಮ್ಮಿ ʻಗಂಡಸ್ತನʼ ಪ್ರಶ್ನಿಸಿದ ಮಂಜನಿಗೆ ಕಿಚ್ಚನ ಕ್ಲಾಸ್!

ಮದುವೆ ಮಂಟಪದಲ್ಲಿ ಭದ್ರನಿಗೆ ಶಾಕ್!

ಭದ್ರನ ಎರಡನೇ ಮದುವೆಗೆ ಸಕಲ ಸಿದ್ಧತೆಗಳು ನಡೆದಿವೆ. ಮದುವೆ ಮಂಟಪದಲ್ಲಿ ಗಂಡು-ಹೆಣ್ಣು ಕುಳಿತು, ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಥೆಗೆ ಅನಿರೀಕ್ಷಿತ ತಿರುವು ಸಿಗುತ್ತದೆ.

ಇನ್ನೊಂದೆಡೆ ವಿದ್ಯಾ ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ಲಾರಿಯಿಂದ ಅಪಘಾತ ಮಾಡಿಸಿ, ಆಕೆಯನ್ನು ಮಗುವಿನ ಸಮೇತ ಕೊಲ್ಲಲು ಕುತಂತ್ರಿಗಳು ಸಂಚು ರೂಪಿಸುತ್ತಾರೆ. ಆದರೆ ಅಪಘಾತದ ಸುದ್ದಿ ತಿಳಿದ ಬಳಿಕ ಭದ್ರನ ಮದುವೆ ಮಂಟಪದಲ್ಲೇ ಎಲ್ಲವೂ ಬದಲಾಗುತ್ತದೆ.

ವಿದ್ಯಾಳ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಭದ್ರ ಮದುವೆಯನ್ನು ಬಿಟ್ಟು ನೇರವಾಗಿ ಆಸ್ಪತ್ರೆಗೆ ಓಡಿ ಬರುತ್ತಾನೆ. ಆಸ್ಪತ್ರೆಯಲ್ಲಿ ತನ್ನ ಪತ್ನಿ ಮತ್ತು ಹುಟ್ಟಲಿರುವ ಮಗುವನ್ನು ಕಂಡು ಭಾವುಕನಾಗುತ್ತಾನೆ. ವಿದ್ಯಾಳ ಕೈ ಹಿಡಿದು ಆಕೆಯ ಪ್ರೀತಿ ಮತ್ತು ತ್ಯಾಗವನ್ನು ನೆನೆಯುತ್ತಾನೆ.



ವಿದ್ಯಾಳಿಗೆ ನೆನಪಿನ ಶಕ್ತಿ ಕಳೆದುಹೋಯ್ತಾ?

ಇಲ್ಲಿಯೇ ಧಾರಾವಾಹಿಯ ಪ್ರೋಮೋ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಭದ್ರ ವಿದ್ಯಾಳ ಕೈ ಹಿಡಿದು ಭಾವುಕನಾಗಿರುವಾಗ, ವಿದ್ಯಾ ಮಾತ್ರ ಆತನನ್ನು ಗುರುತಿಸುವುದಿಲ್ಲ. ಅಷ್ಟೇ ಅಲ್ಲದೆ, ಭದ್ರನನ್ನು ನೋಡುತ್ತಾ ನೀನ್ಯಾರು ಎಂದು ಪ್ರಶ್ನಿಸುತ್ತಾಳೆ.

ಹಾಗಾದರೆ ಅಪಘಾತದಲ್ಲಿ ವಿದ್ಯಾಳ ತಲೆಗೆ ಪೆಟ್ಟು ಬಿದ್ದು ನೆನಪಿನ ಶಕ್ತಿ ಕಳೆದುಕೊಂಡಿದ್ದಾಳಾ? ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಭದ್ರನನ್ನೇ ಮರೆತುಬಿಟ್ಟಿದ್ದಾಳಾ? ಎಂಬ ಪ್ರಶ್ನೆಗಳು ಇದೀಗ ವೀಕ್ಷಕರಲ್ಲಿ ಮೂಡಿವೆ.

ಪ್ರೋಮೋ ನೋಡಿ ವೀಕ್ಷಕರು ಗರಂ!

ಇತ್ತೀಚಿನ ದಿನಗಳಲ್ಲಿ ವಿದ್ಯಾ ಮತ್ತು ಭದ್ರ ನಡುವೆ ಒಂದಾಗುವುದು, ದೂರವಾಗುವುದು ಮತ್ತೆ ಮತ್ತೆ ನಡೆಯುತ್ತಿದೆ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದರು. ಇದೀಗ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡಿದ್ದಾಗ ಮತ್ತೊಂದು ದೊಡ್ಡ ಟ್ವಿಸ್ಟ್ ನೀಡಿರುವುದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.

"ಇನ್ನೇನು ಕಥೆ ಮುಗಿಯಿತು ಅಂದುಕೊಂಡರೆ ಮತ್ತೆ ಹೊಸ ಸಮಸ್ಯೆ ಶುರು ಮಾಡಿದ್ದಾರೆ", "ವಿದ್ಯಾಳಿಗೆ ಮತ್ತೆ ನೆನಪು ಬರಲು ಇನ್ನೆಷ್ಟು ದಿನ ಕಾಯಬೇಕು?", "ವಿದ್ಯಾ ವೈದ್ಯೆಯಾಗುತ್ತಾಳೆ ಎಂದುಕೊಂಡಿದ್ದೆವು, ಆದರೆ ಈಗ ಆಕೆಯೇ ನೆನಪಿನ ಶಕ್ತಿ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾಳೆ. ಇದೇನಾ ಕಥೆ?" ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: Rani Kannada Serial: ʻರಾಣಿʼ ಧಾರಾವಾಹಿ ಅಂತಿಮ ಅಧ್ಯಾಯ ಪ್ರಾರಂಭ; ಹೊಸ ಸೀರಿಯಲ್‌ ಇದೇ!

ಒಟ್ಟಿನಲ್ಲಿ ‘ಮುದ್ದು ಸೊಸೆ’ ಧಾರಾವಾಹಿಯ ಹೊಸ ಪ್ರೋಮೋ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

Yashaswi Devadiga

View all posts by this author