ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keerthy Suresh: ಕೀರ್ತಿ ಸುರೇಶ್ ಕಾಲು ಮುಟ್ಟಿದ ನಿರ್ಮಾಪಕ; ಟ್ರೋಲ್‌ಗಳಿಗೆ ಖಡಕ್ ತಿರುಗೇಟು ಕೊಟ್ಟ ನಟಿ

Keerthy Suresh: ನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ‘ಸತ್ಯವಾನ್ ಸಾವಿತ್ರಿ’ (Sathyavan Savithiri) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಕೋರ್ಟ್‌ರೂಂ ಡ್ರಾಮಾ ಕಥಾಹಂದರ ಹೊಂದಿರುವ ಈ ಸಿನಿಮಾದ ಪ್ರಚಾರಕ್ಕಾಗಿ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕರೊಬ್ಬರು ನಟಿಯ ಕಾಲ ಮೇಲೆ ಕೈಯಿಟ್ಟು ಮಾತಾಡುವ ವಿಡಿಯೋ ಅದಾಗಿದೆ. ಇದು ಕೀರ್ತಿ ಸುರೇಶ್ ಅವರ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ ಖುದ್ದು ನಟಿಯೇ ಅದಕ್ಕೆ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಕೀರ್ತಿ ಸುರೇಶ್

ನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ‘ಸತ್ಯವಾನ್ ಸಾವಿತ್ರಿ’ (Sathyavan Savithiri) ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಕೋರ್ಟ್‌ರೂಂ ಡ್ರಾಮಾ ಕಥಾಹಂದರ ಹೊಂದಿರುವ ಈ ಸಿನಿಮಾದ ಪ್ರಚಾರಕ್ಕಾಗಿ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕರೊಬ್ಬರು ನಟಿಯ ಕಾಲ ಮೇಲೆ ಕೈಯಿಟ್ಟು ಮಾತಾಡುವ ವಿಡಿಯೋ ಅದಾಗಿದೆ. ಇದು ಕೀರ್ತಿ ಸುರೇಶ್ ಅವರ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು. ಆದರೆ ಖುದ್ದು ನಟಿಯೇ ಅದಕ್ಕೆ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಆದರೆ ಸುದ್ದಿಗೋಷ್ಠಿಯ ವೇಳೆ ನಡೆದ ಕೆಲವು ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಮಾತನಾಡುವ ಸಂದರ್ಭದಲ್ಲಿ ಮಿಸ್ಕಿನ್ ಕೀರ್ತಿ ಅವರ ಮೊಣಕಾಲಿನ ಮೇಲೆ ಕೈ ಇಟ್ಟಿದ್ದ ವಿಡಿಯೋ ವೈರಲ್ ಆಗಿದ್ದು, ಕೀರ್ತಿ ಮುಜುಗರ ಅನುಭವಿಸುತ್ತಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದರು. ಇದೀಗ ಈ ಆರೋಪಗಳಿಗೆ ಕೀರ್ತಿ ಸುರೇಶ್ ಸಾಮಾಜಿಕ ಜಾಲತಾಣದಲ್ಲೇ ಖಡಕ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Dorothy: ಕಾರ್ತಿಕ್ ಸುಬ್ಬರಾಜ್ 10 ನೇ ಸಿನಿಮಾ ಘೋಷಣೆ! ಕೀರ್ತಿ ಸುರೇಶ್ ನಾಯಕಿ

ಟ್ರೋಲಿಗರಿಗೆ ಕೀರ್ತಿ ಸುರೇಶ್ ಖಡಕ್ ಉತ್ತರ

ಸುದ್ದಿಗೋಷ್ಠಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಮಿಸ್ಕಿನ್ ಕೀರ್ತಿ ಅವರ ಮೊಣಕಾಲಿನ ಮೇಲೆ ಕೈ ಇಟ್ಟಿರುವ ದೃಶ್ಯವನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಕೀರ್ತಿ ಅಸಹಜವಾಗಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.

ಇನ್ನು ಎಕ್ಸ್ (ಹಿಂದಿನ ಟ್ವಿಟರ್) ಬಳಕೆದಾರರೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ, ಸಿನಿಮಾಗಳಲ್ಲಿ ಸಹನಟರು ಕೀರ್ತಿಯನ್ನು ಮುಟ್ಟಿದರೂ ಅವರು ನಟಿಸುತ್ತಾರೆ. ಹೀಗಿರುವಾಗ ಸಾರ್ವಜನಿಕವಾಗಿ ಮಿಸ್ಕಿನ್ ಮುಟ್ಟಿದರೆ ಅವರು ಬೇಸರಪಡುವ ಅಗತ್ಯವಿಲ್ಲ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕೀರ್ತಿ ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

"ಮೊದಲನೆಯದಾಗಿ, ನನ್ನ ಮುಖದಲ್ಲಿ ನಿಮಗೆ ಎಲ್ಲಿ ಅಸಹಜತೆ ಕಾಣಿಸಿದೆ? ಅವರು ಮತ್ತು ನಾನು ತಂದೆ-ಮಗಳಂತಹ ಸಂಬಂಧ ಹೊಂದಿದ್ದೇವೆ ಎಂದು ಹೇಳಿರುವುದು ನಿಮಗೆ ಕೇಳಿಸಲಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, "ಒಂದು ವೇಳೆ ನಾನು ಅಸಹಜವಾಗಿ ಭಾವಿಸಿದ್ದೇನೆ ಎಂದೇ ಇಟ್ಟುಕೊಳ್ಳಿ. ಸಿನಿಮಾಗಳಲ್ಲಿ ನಮ್ಮ ಸಹನಟರು ನಮ್ಮನ್ನು ಮುಟ್ಟುತ್ತಾರೆ, ಹಾಗಾಗಿ ಸಾರ್ವಜನಿಕವಾಗಿಯೂ ಯಾರಾದರೂ ಮುಟ್ಟಿದರೆ ಅದನ್ನು ಒಪ್ಪಿಕೊಳ್ಳಬೇಕು ಎಂದು ನೀವು ಹೇಳುತ್ತಿದ್ದೀರಾ? ಮೊದಲು ಕೆಲವು ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಸಹೋದರ," ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ಕೀರ್ತಿ ಅವರ ಪ್ರತಿಕ್ರಿಯೆಯ ಬಳಿಕ ಆ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಕ್ಷಮೆಯಾಚಿಸಿದ್ದು, ತಮ್ಮ ಪೋಸ್ಟ್ ಅನ್ನೂ ಅಳಿಸಿದ್ದಾರೆ.

ಕೀರ್ತಿ ಸುರೇಶ್‌ಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಮಿಸ್ಕಿನ್

ಇನ್ನು ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಮಿಸ್ಕಿನ್ ಕೀರ್ತಿ ಸುರೇಶ್ ಅವರನ್ನು ಮನಸಾರೆ ಹೊಗಳಿದ್ದಾರೆ. ಅವರ ಪಕ್ಕದಲ್ಲೇ ಕುಳಿತು ಮಾತನಾಡಿದ ಮಿಸ್ಕಿನ್, ಕೀರ್ತಿ ಅವರಿಗೆ ‘ನಟಿಗೈಯರ್ ತಿಲಗಂ’ ಎಂಬ ಬಿರುದನ್ನು ನೀಡುವುದಾಗಿ ಘೋಷಿಸಿದ್ದಾರೆ. "ಈ ಬಿರುದಿಗೆ ಕೀರ್ತಿ ಸಂಪೂರ್ಣ ಅರ್ಹರು. ಅವರಿಗೆ ಈ ಬಿರುದನ್ನು ನೀಡುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ," ಎಂದು ಹೇಳುತ್ತಾ ಅವರ ತಲೆಯನ್ನು ಪ್ರೀತಿಯಿಂದ ಮುಟ್ಟಿದ್ದಾರೆ.

ಅಷ್ಟೇ ಅಲ್ಲದೆ, ಕಾರ್ಯಕ್ರಮದಲ್ಲಿ ಕೀರ್ತಿ ಅವರಿಗೆ ಚಿನ್ನದ ಉಂಗುರವನ್ನೂ ಉಡುಗೊರೆಯಾಗಿ ನೀಡಿದ್ದಾರೆ. "ಡೊರೊಥಿ ಸಿನಿಮಾದಲ್ಲಿ ನಟಿಸಿದ ಆ ಇಬ್ಬರು ಪ್ರೀತಿಯ ಹುಡುಗರಾದ ಸನತ್ ಮತ್ತು ರಿಷಿಕಾಂತ್ ಅವರಿಗೆ ಈಗಾಗಲೇ ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದೆ. ಆದರೆ ಪುಟ್ಟ ಹುಡುಗಿ ಕೀರ್ತಿ ಸುರೇಶ್ ಅವರಿಗೆ ನೀಡಲು ಮರೆತಿದ್ದೆ. ಅದಕ್ಕಾಗಿಯೇ ಇಂದು ಅವರಿಗೆ ಈ ಉಡುಗೊರೆ ನೀಡುತ್ತಿದ್ದೇನೆ," ಎಂದು ಮಿಸ್ಕಿನ್ ಹೇಳಿದ್ದಾರೆ.

"ಡೊರೊಥಿ ಸಿನಿಮಾದಲ್ಲಿ ಅವರು ಎಷ್ಟು ಅದ್ಭುತವಾಗಿ ನಟಿಸಿದ್ದಾರೆ ಗೊತ್ತಾ? ಇನ್ನು ಮುಂದೆ ಅವರು ನಟಿಸುವ ಎಲ್ಲಾ ಸಿನಿಮಾಗಳಲ್ಲೂ ಅವರ ಹೆಸರಿನ ಮುಂದೆ ‘ನಟಿಗೈಯರ್ ತಿಲಗಂ’ ಎಂಬ ಬಿರುದನ್ನು ಬಳಸುವಂತೆ ನಾನು ವಿನಂತಿಸುತ್ತೇನೆ," ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ಇಬ್ಬರು ಯುವರಾಣಿಯರಲ್ಲಿ ಯಾರಾಗ್ತಾರೆ ಮಹಾರಾಣಿ?

ನವೆಂಬರ್ 20ಕ್ಕೆ ತೆರೆಗೆ ಬರಲಿದೆ ‘ಸತ್ಯವಾನ್ ಸಾವಿತ್ರಿ’

ಮಿಸ್ಕಿನ್ ನಿರ್ದೇಶನದ ‘ಸತ್ಯವಾನ್ ಸಾವಿತ್ರಿ’ ಚಿತ್ರವು ಕೋರ್ಟ್‌ರೂಂ ಡ್ರಾಮಾ ಕಥಾಹಂದರ ಹೊಂದಿದೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವು ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಿಸ್ಕಿನ್ ಮತ್ತು ಕೀರ್ತಿ ಸುರೇಶ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Yashaswi Devadiga

View all posts by this author