ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nadubettu Appanna: "ನಡುಬೆಟ್ಟು ಅಪ್ಪಣ್ಣ" ಚಿತ್ರಕ್ಕೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ

Anupama Sharadhi: ಮೂಲತಃ ಗಾಯಕಿಯಾಗಿರುವ ಅನುಪಮ ಶರಧಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟಿರುವ ನಿರ್ದೇಶಕಿಯರ ಸಾಲಿಗೆ ಅನುಪಮ ಅವರು ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಅನುಭವ ಅನುಪಮ ಅವರಿಗಿದೆ. ನಟರಾಜ್ ಹೊನ್ನವಳ್ಳಿ "ನಡುಬೆಟ್ಟು ಅಪ್ಪಣ್ಣ"ನಾಗಿ ಅಭಿನಯಿಸಿದ್ದಾರೆ. ಸುಮತಿ, ನಿಶಾಂತ್, ಜಗನ್ನಾಥ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಜೀವನ್ ಸುಳ್ಯ ಕೆರೆಮೂಲೆ, ಲಾಲಿತ್ಯ ಮುಂತಾದವರು ಅಭಿನಯಿಸಿದ್ದಾರೆ.

ನಡುಬೆಟ್ಟು ಅಪ್ಪಣ್ಣ ಸಿನಿಮಾ

ಭವಿಷ್ಯ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಅರೆ ಭಾಷೆಯ "ನಡುಬೆಟ್ಟು ಅಪ್ಪಣ್ಣ" ( Nadubettu Appanna ) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಪೂರ್ವದಲ್ಲೇ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ದಿನ ಹಾಗೂ ಮೈಸೂರು ದಸರಾ (Mysore) ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿದವರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

ಮೂಲತಃ ಗಾಯಕಿಯಾಗಿರುವ ಅನುಪಮ ಶರಧಿ (Anupama Sharadhi) ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟಿರುವ ನಿರ್ದೇಶಕಿಯರ ಸಾಲಿಗೆ ಅನುಪಮ ಅವರು ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಅನುಭವ ಅನುಪಮ ಅವರಿಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು‌ ನಿರ್ದೇಶಿಸಿರುವ (Direction) ಅನುಪಮ ಶರಧಿ, ನಿರ್ಮಾಪಕರೂ ಹೌದು.

ಇದನ್ನೂ ಓದಿ: Imanvi: "ಪಾಕ್‌ ಜೊತೆ ಈಕೆಗೆ ನಂಟು ಸಿನಿಮಾದಿಂದ ಕಿತ್ತೊಗೆಯಿರಿ" ; ಪ್ರಭಾಸ್‌ ಹೊಸ ಸಿನಿಮಾ ನಾಯಕಿ ಮೇಲೆ ಏನಿದು ಆರೋಪ?

ವಾಸಿಸುವ ಅಪ್ಪಣ್ಣ ಎಂಬ ಜಿಪುಣ

"ನಡುಬೆಟ್ಟು ಅಪ್ಪಣ್ಣ" ಕಥೆಯು "ದಬ್ಬಡ್ಕ" ಎಂಬ ದೂರದ ಹಳ್ಳಿಯಲ್ಲಿ ವಾಸಿಸುವ ಅಪ್ಪಣ್ಣ ಎಂಬ ಜಿಪುಣ ಮತ್ತು ಸ್ವಾರ್ಥಿ ವ್ಯಕ್ತಿ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಅವನು ಹಳ್ಳಿಯ ಕಷ್ಟಗಳ ಬಗ್ಗೆಯಾಗಲಿ ಅಥವಾ ಅವನ ಕುಟುಂಬದ ಅಗತ್ಯಗಳ ಬಗ್ಗೆಯಾಗಲಿ ಕಾಳಜಿ ವಹಿಸುವುದಿಲ್ಲ. ಅವನು ಸೇರಿದಂತೆ ಗ್ರಾಮಸ್ಥರು ಆಗಾಗ್ಗೆ ತಮ್ಮ ಮೇಲೆ ಮತ್ತು ತಮ್ಮ ತೋಟಗಳ ಮೇಲೆ ಆನೆ ದಾಳಿಯಿಂದ ಬಳಲುತ್ತಾರೆ.

ಹತ್ತಿರದ ಪಟ್ಟಣಗಳು, ರಸ್ತೆಗಳು, ಆಸ್ಪತ್ರೆ, ಶಾಲೆಗಳು ಮುಂತಾದ ಮೂಲಭೂತ ಅವಶ್ಯಕತೆಗಳಿಲ್ಲದೆ ಗ್ರಾಮವದು. ಹತ್ತಿರದ ಪಟ್ಟಣಗಳಿಗೆ ಹೋಗಲು ಅವರು ತೆಪ್ಪವನ್ನು ಬಳಸಬೇಕಾಗುತ್ತದೆ, ಇದರಿಂದಾಗಿ ಅವರು ಹಲವಾರು ಸಾವುಗಳನ್ನು ಅನುಭವಿಸಬೇಕಾಗುತ್ತದೆ. ಆನೆಯೊಂದು ತನ್ನ ತೋಟಗಳ ಮೇಲೆ ದಾಳಿ ಮಾಡಿದಾಗ ಅಪ್ಪಣ್ಣ ಥಟ್ಟನೆ ಚೇತರಿಸಿಕೊಳ್ಳುತ್ತಾನೆ. ಅದರಲ್ಲಿ ಅವನು ತನ್ನ ಹೆಂಡತಿ ಮತ್ತು ಮಗನನ್ನು ಕಳೆದುಕೊಳ್ಳುತ್ತಾನೆ.

ಕಥಾಸಾರಾಂಶ

ಈ ಘಟನೆಯ ನಂತರ, ಅಪ್ಪಣ್ಣ ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತಾನೆ. ಮನೆ ಮತ್ತು ತನ್ನ ತೋಟಗಳಿಗೆ ಸರಿಯಾದ ಸುರಕ್ಷತೆಯನ್ನು ಒದಗಿಸದೆ ಹಣವನ್ನು ಉಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅರಿತುಕೊಂಡ ಅಪ್ಪಣ್ಣ, ಸ್ವಾರ್ಥಿಯಾಗಿರುವುದಕ್ಕೆ ವಿಷಾದಿಸುತ್ತಾನೆ. ನಂತರ ಒಂದು ಟ್ರಸ್ಟ್ ಅನ್ನು ರಚಿಸುತ್ತಾನೆ ಮತ್ತು ತನ್ನ ಇಡೀ ಆಸ್ತಿಯನ್ನು ತನ್ನ ಹಳ್ಳಿಯ ಕಲ್ಯಾಣಕ್ಕಾಗಿ ಸರ್ಕಾರಕ್ಕೆ ದಾನ ಮಾಡುತ್ತಾನೆ ಇದೇ ಈ ಚಿತ್ರದ ಕಥಾಸಾರಾಂಶ.

ಇದನ್ನೂ ಓದಿ: Bigg Boss Kannada 12: ಎಮೋಷನಲ್ ಬ್ಲಾಕ್​​ಮೇಲ್ ಮಾಡ್ತೀದ್ದೀರಾ? ಊಟ ಬಿಟ್ಟಿದ್ದು ಯಾಕೆ? ಅಶ್ವಿನಿಗೆ ಕಿಚ್ಚನ ಕ್ಲಾಸ್‌

ಯಾರೆಲ್ಲ ಇದ್ದಾರೆ?

ನಟರಾಜ್ ಹೊನ್ನವಳ್ಳಿ "ನಡುಬೆಟ್ಟು ಅಪ್ಪಣ್ಣ"ನಾಗಿ ಅಭಿನಯಿಸಿದ್ದಾರೆ. ಸುಮತಿ, ನಿಶಾಂತ್, ಜಗನ್ನಾಥ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಜೀವನ್ ಸುಳ್ಯ ಕೆರೆಮೂಲೆ, ಲಾಲಿತ್ಯ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆ ಅಭಿಷೇಕ್ ಅಣಗಲ್ಲಿ - ಧನುಷ್ ಮೈಸೂರು ಛಾಯಾಗ್ರಹಣ ಹಾಗೂ ಕುಮಾರ್ ಈಶ್ಚರ್ ಸಂಗೀತ ನಿರ್ದೇಶನವಿದೆ.

Yashaswi Devadiga

View all posts by this author