ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nandagokula Serial: ಅಪ್ಪನನ್ನು ಮನಸಾರೆ ಅಪ್ಪಿಕೊಂಡ ಕೇಶವ; ಮನೆ ನಂದಗೋಕುಲವಾಗೋದು ಹೀಗೆ!

Nandagokula Serial: ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಪ್ರಿಯಾ ಮೇಲೆ ಅಪ್ಪ ಕೂಗಾಡಿದ್ದಕ್ಕೆ, ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

ನಂದ ಗೋಕುಲ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯ (Colors Kannada) ಜನಪ್ರಿಯ ಕೌಟುಂಬಿಕ ಧಾರಾವಾಹಿ ‘ನಂದಗೋಕುಲ’ (Nandagokula) ಇದೀಗ ಅತ್ಯಂತ ರೋಚಕ ಘಟ್ಟ ತಲುಪಿದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯೋಗಗಳ ಮೂಲಕ ಮನೆಮಾತಾಗುತ್ತಿದೆ. ನಂದನ ನಿಜ ಆಶಯ ತಿಳಿದು ಮಗ ಕೇಶವನ (Keshava) ನಿರ್ಧಾರ ಬದಲಾಗಿದೆ. ತಂದೆಯ ಕೋಪದ ಹಿಂದಿನ ಪ್ರೀತಿ ಅರ್ಥವಾದ ಕೇಶವ, ಮನೆ ಬಿಟ್ಟು ಹೋಗುವ ತನ್ನ ಹಿಂದಿನ ನಿರ್ಧಾರದಿಂದ ಹಿಂದೆ ಸರಿದಿದ್ದಾನೆ. ಅಪ್ಪನನ್ನು ಅಪ್ಪಿಕೊಂಡಿದ್ದಾನೆ ಕೇಶವ.

ಸಾಕಷ್ಟು ಬದಲಾವಣೆ

ಇನ್ನೊಂದೆಡೆ ಕಥೆಯಲ್ಲಿ ಹೊಸ ಸೊಸೆ ಪ್ರಿಯಾಳ ಎಂಟ್ರಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಪ್ರಿಯಾ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ತವಕದಲ್ಲಿ ವಿಭಿನ್ನವಾಗಿ ವರ್ತಿಸುತ್ತಿದ್ದು, ಮನೆಯ ಇತರ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಪ್ರಯತ್ನಿಸುತ್ತಿದ್ದಾಳೆ. ಅಮಾಯಕತೆಯ ಮುಖವಾಡ ಧರಿಸಿರುವ ಅವಳು, ಸದ್ದಿಲ್ಲದೆ ಮನೆಯವರ ನಡುವೆ ವೈಮನಸ್ಸು ತಂದಿಡುವ ಕೆಲಸ ಮಾಡುತ್ತಿದ್ದಾಳೆ. ಇದರಿಂದ ನಂದಗೋಕುಲದ ಮನೆಯೊಳಗಿನ ಶಾಂತಿಯುತ ವಾತಾವರಣವು ಏರುಪೇರಾಗುತ್ತಿದೆ.

ಇದನ್ನೂ ಓದಿ: ಭೀಕರ ಯುದ್ಧದ ನಡುವೆಯೇ 19 ವರ್ಷದ ಕುಸ್ತಿಪಟು ಸೇರಿ ಇಬ್ಬರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್!

ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಪ್ರಿಯಾ ಮೇಲೆ ಅಪ್ಪ ಕೂಗಾಡಿದ್ದಕ್ಕೆ, ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

ಕೇಶವ ಹಾಗೂ ಮೀನಾ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಕೆಲವು ಕೆಲಸವನ್ನು ಕೇಶವನಿಗೆ ಹೇಳಲಾಗಿತ್ತು. ಆದರೆ, ಈ ಕೆಲಸವನ್ನು ಅವನು ಮಾಡಲೇ ಇಲ್ಲ. ನಂದನ ಮಾತಿನಿಂದ ಕೇಶವ ಬೇಸರಗೊಂಡ. ಆತ ಬೇರೆ ಮನೆ ಮಾಡುವ ನಿರ್ಧಾರಕ್ಕೆ ಬಂದ.



ನಂತರ ಅಪ್ಪ ಮಾಡೋದು ಒಳ್ಳೆಯದಕ್ಕೆ ಎಂಬ ವಿಷಯ ಅರಿವಾಗಿದೆ. ಹೀಗಾಗಿ, ಬೇರೆ ಮನೆ ಮಾಡಬೇಕು ಎಂಬ ನಿರ್ಧರದಿಂದ ಹಿಂದೆ ಸರಿದಿದ್ದಾನೆ. ಅಷ್ಟೇ ಅಲ್ಲ ಮನೆಯವರೆಲ್ಲರ ಮುಂದೆ ಅಪ್ಪನನ್ನು ಅಪ್ಪಿಕೊಂಡಿದ್ದಾನೆ ಕೇಶವ. ಅಂಗಡಿಯಲ್ಲಿ ಯಾರೋ ಕೇಶವ ಮೇಲೆ ಕೂಗಾಡಿದ್ದಕ್ಕೆ ನಂದ ಮಗನ ಪರ ನಿಂತು ಮಾತನಾಡಿದ್ದ. ಇದಲ್ಲ ಗಮನಿಸಿದ ಕೇಶವ ಈಗ ಸರಿ ದಾರಿಗೆ ಬಂದಿದ್ದಾನೆ.

ಇದನ್ನೂ ಓದಿ: Drishyam 3: ಜಾರ್ಜ್ ಕುಟ್ಟಿ ಬಂದೇ ಬಿಟ್ಟ; 'ದೃಶ್ಯಂ 3'ಯಿಂದ ಬಂತು ಬಿಗ್‌ ಅಪ್‌ಡೇಟ್‌!

ಈ ಧಾರಾವಾಹಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ತಮ್ಮದೇ ಆದ ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳಿದ್ದರೂ, ಒಟ್ಟಾಗಿ ಬದುಕುವುದು ಎಷ್ಟು ಮುಖ್ಯ ಎಂಬುದನ್ನು ಈ ಕಥೆ ಸಾರುತ್ತಿದೆ.

Yashaswi Devadiga

View all posts by this author