ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nandagokula serial: ‘ನಂದಗೋಕುಲ’ ಧಾರಾವಾಹಿ ಕೇಶವನ ಪಾತ್ರಕ್ಕೆ ಬಂದ ಈ ನಟ ಯಾರು?

Nandagokula serial: ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ (Yashwanth Kumar) ಸೀರಿಯಲ್‌ನಿಂದ ಆಚೆ ಬಂದಿದ್ದಾರೆ. ‘ಸತ್ಯಂ ಶಿವಂ ಸುಂದರಂ’, ‘ಗಂಡ-ಹೆಂಡ್ತಿ’, ‘ಅಮೃತಧಾರೆ’, ‘ನಂದಗೋಕುಲ’ ಸೇರಿದಂತೆ 15ಕ್ಕೂ ಹೆಚ್ಚು ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸಿರುವ ನಟ ಯಶ್ವಂತ್‌ ಕುಮಾರ್‌ ಪಾತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ. ಅದು ಯಾರು ಗೊತ್ತ?

ನಂದಗೋಕುಲ ಧಾರಾವಾಹಿ

ʻನಂದಗೋಕುಲ’ (Nandagokula serial Kannada) ಧಾರಾವಾಹಿಯ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ (Yashwanth Kumar) ಸೀರಿಯಲ್‌ನಿಂದ ಆಚೆ ಬಂದಿದ್ದಾರೆ. ‘ಸತ್ಯಂ ಶಿವಂ ಸುಂದರಂ’, ‘ಗಂಡ-ಹೆಂಡ್ತಿ’, ‘ಅಮೃತಧಾರೆ’, ‘ನಂದಗೋಕುಲ’ ಸೇರಿದಂತೆ 15ಕ್ಕೂ ಹೆಚ್ಚು ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸಿರುವ ನಟ ಯಶ್ವಂತ್‌ ಕುಮಾರ್‌ ಪಾತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ. ಅದು ಯಾರು ಗೊತ್ತ? ಅವರು ಬೇರೆ ಯಾರೂ ಅಲ್ಲ ನಟ ವಿಜಯ್ ರಾಜ್ .

ವಿಜಯ್ ರಾಜ್ ಯಾರು?

ಕನ್ನಡತಿ, ವಧು, ನೀನಾದೆನಾ ಧಾರಾವಾಹಿಯಲ್ಲಿ ನಟಿಸಿದ್ದರು. ಜೊತೆಗೆ ತೆಲುಗು ಕಿರುತೆರೆಯಲ್ಲೂ (Teugu) ಸಹ ಗುರುತಿಸಿಕೊಂಡಿದ್ದರು. ‘ರಾಜಕುಮಾರರು’ ಎನ್ನುವ ಮೈಕ್ರೋ ಸೀರೀಸ್ ನಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ‘ಕಿರುನಗೆ’ ಎನ್ನುವ ಸಿನಿಮಾದಲ್ಲೂ ಇವರು ನಟಿಸಿದ್ದರುನಂದಗೋಕುಲ ಧಾರಾವಾಹಿಯಲ್ಲಿ ನಂದನ ಎರಡನೆ ಮಗ ಕೇಶವ. ಪ್ರೀತಿಸಿ ಮದುವೆಯಾಗಿ ನಂಬಿಕೊಂಡು ಬಂದ ಪತ್ನಿ ಮೀನಾಗೂ ಆಕೆಯ ತವರು ಮನೆಯ ಪ್ರೀತಿಯನ್ನು ಮತ್ತೆ ನೀಡುವ ಹಂಬಲದಲ್ಲಿರುವ ಪಾತ್ರ ಕೇಶವನದ್ದು,

ಇದನ್ನೂ ಓದಿ: Kichcha Sudeep Birthday: ಕಿಚ್ಚ ಸುದೀಪ್‌ ಜನ್ಮದಿನ; ಇರಲಿದೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್!

ಯಶ್ವಂತ್ ಕುಮಾರ್ ಸೀರಿಯಲ್‌ನಿಂದ ಔಟ್‌!

ಜ್ಯೂನಿಯರ್‌ ಆರ್ಟಿಸ್ಟ್‌ ಆಗಿ ನಟನೆ ಆರಾಂಭಿಸಿ, ‘ವಿಕಿಪೀಡಿಯ’ ಎಂಬ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆದರೆ, ಕೋವಿಡ್‌ ಲಾಕ್‌ಡೌನ್‌ ಕಾರಣ ಸಿನಿಮಾಗೆ ದೊಡ್ಡ ಹೊಡೆತ ಬಿತ್ತು, 4 ವರ್ಷದ ಪರಿಶ್ರಮ ವ್ಯರ್ಥವಾಯ್ತು. ನಂತರ ಕಮ್‌ಬ್ಯಾಕ್‌ ಮಾಡಿದ್ದು, ಕಲರ್ಸ್‌ ಕನ್ನಡ ವಾಹಿನಿಯ ‘ಗಂಡ-ಹೆಂಡ್ತಿ’ ಧಾರಾವಾಹಿ ಮೂಲಕ. ಬಳಿಕ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿದರು.

ನನ್ನ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿ ಉಳಿಯುವ ಪಾತ್ರ 'ಕೇಶವ'ನಿಗೆ ನಾನು ವಿದಾಯ ಹೇಳುತ್ತಿದ್ದೇನೆ, ಅದರೊಂದಿಗೆ 'ನಂದಗೋಕುಲ'ದೊಂದಿಗಿನ ನನ್ನ ಪಯಣ ಕೊನೆಗೊಂದಿದೆ. ಸರಿ ಸುಮಾರು 350 ಸಂಚಿಕೆಗಳು, ನೀವು ಕೇಶವನನ್ನು ನಿಮ್ಮ ಮನೆ ಮಗನಾಗಿ ಸ್ವಾಗತಿಸಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ, ಬೆಂಬಲಿಸಿದ್ದೀರಿ ಮತ್ತು ನಾನು ಊಹಿಸಲು ಸಾಧ್ಯವಾಗದಷ್ಟು ಪ್ರೀತಿಸಿದ್ದೀರಿ. ನೀವು ನನ್ನ ಮೇಲೆ ಮತ್ತು ಪಾತ್ರದ ಮೇಲೆ ಸುರಿಸಿದ ಅಪಾರ ಪ್ರೀತಿಯನ್ನು ನಾನು ಶಾಶ್ವತವಾಗಿ ನನ್ನೊಂದಿಗೆ ಕೊಂಡೊಯ್ಯುತ್ತೇವೆ ಈ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ಎಲ್ಲರಿಗೂ - ನನ್ನ ಸಹನಟರು, ನಿರ್ದೇಶಕರು, ಬರಹಗಾರರು, ತಂತ್ರಜ್ಞರು ಮತ್ತು ಇಡೀ ನಂದಗೋಕುಲ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ, ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ನಿಮ್ಮೊಂದಿಗೆ ಬದುಕಿದ ಪ್ರತಿ ದೃಶ್ಯ ನೀವುಗಳು ನೀಡಿದ ಪ್ರತಿ ಮೆಚ್ಚುಗೆ ಮತ್ತು ಪ್ರತಿ ಟೀಕೆ ಕೂಡ ನನ್ನ ಬೆಳವಣಿಗೆಯ ಒಂದು ಭಾಗವಾಗಿದೆ.



ನಾನು ಹೋದಲ್ಲೆಲ್ಲಾ ಆ ನೆನಪುಗಳನ್ನು ಮತ್ತು ಪಾಠಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಬಹುಮುಖ್ಯವಾಗಿ, ನಿಮಗೆ, ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಕೇಶವನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ನೀವು ಕೇಶವನನ್ನು ಹಾಗೇ ನೋಡಿ ಸುಮ್ಮನಾಗಲಿಲ್ಲ, ನೀವು ಅವನೊಂದಿಗೆ ಬೆರೆತು, ಅವನನ್ನ ಅರ್ಥಮಾಡಿಕೊಂಡಿರಿ ಮತ್ತು ಅವನನ್ನು ನಿಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಂಡಿದೆ. ಹೃದಯದಲ್ಲಿ ಕೃತಜ್ಞತೆಯೊಂದಿಗೆ, ಹಿಂದಿನ ಪಾಠಗಳು ಮತ್ತು ಮುಂದೆ ಏನಾಗಲಿದೆ ಎಂಬುದರ ಉತ್ಸಾಹದೊಂದಿಗೆ ನಾನು ಹೊಪ ಅಧ್ಯಾಯಕ್ಕೆ ಹೆಜ್ಜೆ ಹಾಕುತ್ತಿದ್ದೇನೆ - ಆ ಅಧ್ಯಾಯ ನನ್ನ ಮುಂಬರುವ ಚಿತ್ರ 'ಸಮುದ್ರ ಮಂಥನ'ದಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: Kichcha Sudeep : ‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!

ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಚಿತ್ರಮಂದಿರಗಳಲ್ಲಿ ಭೇಟಿಯಾಗಲು ಮತ್ತು ಈ ಹೊಸ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ತುದಿಗಾಲಿನಲ್ಲಿ ನಿಂತಿದ್ದೇನೆ ಎಂದು ಬರೆದುಕೊಂಡಿದ್ದರು.

Yashaswi Devadiga

View all posts by this author