ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಂದಮೂರಿ ಬಾಲಕೃಷ್ಣ ಪುತ್ರ ಮೋಕ್ಷಜ್ಞ ಎಂಟ್ರಿಗೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಸಿಕ್ತು ಬಿಗ್ ಸರ್ಪ್ರೈಸ್; ಬಾಲಯ್ಯ ಕಿರಿ ಮಗಳು ತೇಜಸ್ವಿನಿ ಚಿತ್ರರಂಗ ಪ್ರವೇಶ

ನಂದಮೂರಿ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ಚೊಚ್ಚಲ ಸಿನಿಮಾದ ಅಪ್ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಹೊಸ ಸರ್ಪ್ರೈಸ್ ಸಿಕ್ಕಿದೆ. ಬಾಲಯ್ಯ ಅವರ ಕಿರಿ ಮಗಳು ತೇಜಸ್ವಿನಿ ನಟಿಯಾಗಿ ಬೆಳ್ಳಿಪರದೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಸಾಮಾಜಿಕ ಸಂದೇಶವಿರುವ ಸ್ಪೋರ್ಟ್ಸ್ ಡ್ರಾಮಾ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಲಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ಅವರ ಚೊಚ್ಚಲ ಸಿನಿಮಾ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಘೋಷಣೆಯಾಗಿದ್ದರೂ, ಈವರೆಗೆ ಯಾವುದೇ ಹೊಸ ಅಪ್‌ಡೇಟ್ ಸಿಗದೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಇದೀಗ ನಂದಮೂರಿ ಅಭಿಮಾನಿಗಳು ಸಂಭ್ರಮಿಸುವಂತಹ ಹೊಸ ಸುದ್ದಿಯೊಂದು ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಬಾಲಯ್ಯ ಅವರ ಕಿರಿ ಮಗಳು ತೇಜಸ್ವಿನಿ ಶೀಘ್ರದಲ್ಲೇ ನಟಿಯಾಗಿ ಬೆಳ್ಳಿಪರದೆಯ ಮೇಲೆ ಮಿಂಚಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

ಉತ್ತಮ ಸಾಮಾಜಿಕ ಸಂದೇಶವಿರುವ ಸ್ಪೋರ್ಟ್ಸ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗಿದ್ದು, ಸದ್ಯ ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಕಥಾ ಚರ್ಚೆಗಳು ಭರದಿಂದ ಸಾಗಿವೆ.

Balakrishna: ಶೂಟಿಂಗ್ ಸೆಟ್​ನಲ್ಲಿ ಅವಘಡ; ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ ಜ್ಯೂ ಎನ್​​ಟಿಆರ್

ಸಿನಿಮಾ ನಂಟು ಹೊಂದಿರುವ ತೇಜಸ್ವಿನಿ

ವೈಯಕ್ತಿಕವಾಗಿ ವಿಶಾಖಪಟ್ಟಣದ ಸಂಸದ ಹಾಗೂ ಗೀತಮ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಶ್ರೀ ಭರತ್ ಮಾತುಕುಮಿಲ್ಲಿ ಅವರನ್ನು ವಿವಾಹವಾಗಿರುವ ತೇಜಸ್ವಿನಿ, ಈಗಾಗಲೇ ಚಿತ್ರರಂಗದ ತೆರೆಮರೆಯ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಸಿದ್ಧ ಒಟಿಟಿ ಪ್ಲಾಟ್‌ಫಾರ್ಮ್ 'ಆಹಾ'ದಲ್ಲಿ ಬಾಲಕೃಷ್ಣ ನಿರೂಪಕರಾಗಿ ನಡೆಸಿ ಕೊಟ್ಟ ಸೂಪರ್ ಹಿಟ್ ಟಾಕ್ ಶೋ 'ಅನ್‌ಸ್ಟಾಪಬಲ್' ಯಶಸ್ಸಿನಲ್ಲಿ ತೇಜಸ್ವಿನಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಆ ಕಾರ್ಯಕ್ರಮಕ್ಕೆ ಕ್ರಿಯೇಟಿವ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಿ ತಮ್ಮ ವೈವಿಧ್ಯಮಯ ಆಲೋಚನೆಗಳಿಂದ ಶೋನ ಮಟ್ಟವನ್ನು ಹೆಚ್ಚಿಸಿದರು. ಅಷ್ಟೇ ಅಲ್ಲದೆ, ಬಾಲಯ್ಯ ಅವರ ಸಿನಿಮಾಗಳ ಪ್ರೊಡಕ್ಷನ್ ಕೆಲಸಗಳ ಜೊತೆಗೆ, ತಮ್ಮ ಸಹೋದರ ಮೋಕ್ಷಜ್ಞ ಅವರ ಸಿನಿಮಾ ರಂಗಪ್ರವೇಶದ ಸಿದ್ಧತೆಗಳನ್ನು ಅವರೇ ಮುಂಚೂಣಿಯಲ್ಲಿದ್ದು ನೋಡಿಕೊಳ್ಳುತ್ತಿದ್ದಾರೆ.

ಬಾಲಯ್ಯ, ಶಾರುಖ್‌ ಖಾನ್‌ ಬಳಿಕ ʻಜೈಲರ್‌ 2ʼ ಚಿತ್ರಕ್ಕೆ ಶಾಕ್‌ ನೀಡಿದ ಪವನ್‌ ಕಲ್ಯಾಣ್‌; ರಜನಿಕಾಂತ್‌ ಸಿನಿಮಾಕ್ಕೆ ಗೆಸ್ಟ್‌ ರೋಲ್‌ನದ್ದೇ ಸಮಸ್ಯೆ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಡ್ಯಾನ್ಸ್!

ತೇಜಸ್ವಿನಿ ಅವರು ಪ್ರಸಿದ್ಧ ಕೊರಿಯೋಗ್ರಾಫರ್ ಭಾನು ಮಾಸ್ಟರ್ ಜೊತೆ ಸೇರಿ 'ಲವ್ ಸ್ಟೋರಿ' ಚಿತ್ರದ 'ಸಾರಂಗ ದರಿಯಾ' ಹಾಡಿಗೆ ಮಾಡಿದ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಅವರ ಎನರ್ಜಿಟಿಕ್ ಡ್ಯಾನ್ಸ್ ಶೈಲಿಯನ್ನು ಅಭಿಮಾನಿಗಳು ಜೂನಿಯರ್ ಎನ್‌ಟಿಆರ್ ಅವರ ಡ್ಯಾನ್ಸ್‌ಗೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬಾಲಯ್ಯ ಪುತ್ರಿ ತೇಜಸ್ವಿನಿ ಡ್ಯಾನ್ಸ್‌ ವಿಡಿಯೋ



ಇತ್ತೀಚೆಗಷ್ಟೇ 'ಸಿದ್ಧಾರ್ಥ್ ಫೈನ್ ಜ್ಯುವೆಲರ್ಸ್' ಜಾಹೀರಾತಿನ ಮೂಲಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕ್ಯಾಮೆರಾ ಎದುರಿಸಿದ್ದ ತೇಜಸ್ವಿನಿ, ಈಗ ನೇರವಾಗಿ ನಟಿಯಾಗಿ ಸ್ಪೋರ್ಟ್ಸ್ ಬ್ಯಾಕ್‌ಡ್ರಾಪ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಅಡಿ ಇಡುತ್ತಿರುವುದು ಟಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸಿನಿಮಾ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.