ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nandamuri Balakrishna: 50 ವರ್ಷದ ಸಿನಿ ಪಯಣ ಪೂರೈಸಿದ ಬಾಲಯ್ಯಗೆ ತಲೈವಾ ಸ್ಪೆಷಲ್ ವಿಶ್

1974ರಲ್ಲಿ ಬಿಡುಗಡೆಗೊಂಡ `ತಾತಮ್ಮ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂದಮೂರಿ ಬಾಲಕೃಷ್ಣ ಇಲ್ಲಿಗೆ ಭರ್ತಿ 50 ವರ್ಷಗಳನ್ನ ಕಂಪ್ಲೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಲೈವಾ ರಜನಿಕಾಂತ್ ಬಾಲಯ್ಯನಿಗೆ ಶುಭಾಶಯ ತಿಳಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಬಾಲಯ್ಯ ಅವರಿಗೆ ಭಾರತಾದ್ಯಂತ ಅತೀ ದೊಡ್ಡ ಅಭಿಮಾನಿಗಳ ಬಳಗವಿದೆ. ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಬಾಲಯ್ಯ ನೀಡಿದ್ದಾರೆ.

ಟಾಲಿವುಡ್‌ನಲ್ಲಿ 50 ವರ್ಷ ಪೂರೈಸಿದ ಬಾಲಯ್ಯ

ರಜನಿ ಕಾಂತ್ -ಬಾಲಯ್ಯ -

Profile Sushmitha Jain Sep 1, 2025 10:35 AM

ಟಾಲಿವುಡ್‌ (Tollywood) ಸ್ಟಾರ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಚಿತ್ರರಂಗಕ್ಕೆ ಕಾಲಿಟ್ಟು 5 ದಶಕಗಳು ಕಳೆದಿದ್ದು, 1974ರಲ್ಲಿ ಚಿತ್ರರಂಗಕ್ಕೆ(Film Industry) ಕಾಲಿಟ್ಟರು. ಮೊದಲ ಬಾರಿಗೆ ಬಾಲನಟರಾಗಿ ' ತಾತಮ್ಮ ಕಲಾ' ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ತಮ್ಮ ಸಿನಿ ಪಯಣವನ್ನು ಆರಂಭಿಸಿದ ಇವರು, ಸದ್ಯ ಟಾಲಿವುಡ್‌ನಲ್ಲಿ ನಟನೆಯಿಂದ ಹೀರೋ ಆಗಿ ಸಿನಿ ಪ್ರಿಯರ ಮನ ಗೆದ್ದಿದ್ದು, ತಮ್ಮದೇ ಆದ ಒಂದು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.


ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಲವರು ಸಿನಿಮಾಗಳಲ್ಲಿ ನಾನಾ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಈಗಲೂ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿರುವ ಬಾಲಯ್ಯ ಇಂದಿಗೂ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದಾರೆ. ಹಿಟ್‌ ಸಿನಿಮಾಗಳನ್ನು ನೀಡುವ ಮೂಲಕ ರಂಜಿಸುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಬಾಲಯ್ಯ ಅವರಿಗೆ ಭಾರತಾದ್ಯಂತ ಅತೀ ದೊಡ್ಡ ಅಭಿಮಾನಿಗಳ ಬಳಗವಿದೆ. ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ಬಾಲಯ್ಯ ನೀಡಿದ್ದಾರೆ.

ಸದ್ಯ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದು, ರಜನೀಕಾಂತ್(Rajnikanth) ಅವರು ಬಾಲಯ್ಯ ಅವರಿಗೆ ಶುಭ ಕೋರಿದ್ದಾರೆ. ಹೌದು ತಲೈವಾ ರಜನಿಕಾಂತ್ ಬಾಲಯ್ಯನಿಗೆ ಸ್ಪೆಷಲ್ ವಿಡಿಯೋದ ಮೂಲಕ ಶುಭಾಶಯ ತಿಳಿಸಿದ್ದಾರೆ. ಬಾಲಯ್ಯನ್ನ ಹಾಗೇ ಬೇರೆ ಯಾರಿಂದಲೂ ಪಂಚಿಂಗ್ ಲೈನ್ ಗಳನ್ನು ಹೇಳಲು ಸಾಧ್ಯವಿಲ್ಲ. ಅವರು ಡೈಲಾಗ್ ಡೆಲಿವರಿ ಕಿಂಗ್ ಎಂದು ಹಾಡಿ ಹೊಗಳಿರುವ ರಜನಿ ತೆಲುಗಿನಲ್ಲಿ ಬಾಲಯ್ಯ ಅವರ ಫೇಮಸ್ ಡೈಲಾಗ್ ಗಳನ್ನು ಹೇಳುವ ಮೂಲಕ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದು ಇಬ್ಬರು ನಾಯಕ ನಟರ ಅಭಿಮಾನಿಗಳಿಗೂ ಸಂತಸದ ಕ್ಷಣವಾಗಿದ್ದು, ರಜನಿ ವಿಶ್ ಮಾಡಿದ ಪರಿಗೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಈ ಸುದ್ದಿಯನ್ನು ಓದಿ; Viral News: ಪ್ರೇಯಸಿಯ ಫೋನ್ ಬ್ಯುಸಿ ಬಂದಿದ್ದಕ್ಕೆ ಗ್ರಾಮದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಪಾಗಲ್‌ ಪ್ರೇಮಿ!
ಯಾವಗಲೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪಾತ್ರಗಳನ್ನೇ ಮಾಡುವ ಬಾಲಯ್ಯ ಅವರ ಚಿತ್ರಗಳು ಪಾಸಿಟಿವಿಟಿ ಅನ್ನು ಎಲ್ಲೆಡೆ ಹರಡುತ್ತದೆ. ಅವರು ಇದ್ದ ಕಡೆ ನಗುವಿಗೆ ಹಾಗೂ ಸಂತೋಷಕ್ಕೆ ಕೊರತೆ ಇರುವುದಿಲ್ಲ. ಅವರು ವೃತ್ತಿಯಲ್ಲಿ ನನ್ನ ಪೈಪೋಟಿಯಾದರೂ ಅವರ ಸಿನಿಮಾ ಹಿಟ್ ಆದರೆ ಅವರ ಅಭಿಮಾನಿಗಳಷ್ಟೇ ಅಲ್ಲ, ಇತರ ನಟರ ಅಭಿಮಾನಿಗಳೂ ಸಂತೋಷಪಡುತ್ತಾರೆ. ಅದೇ ಬಾಲಕೃಷ್ಣ ಅವರ ನಿಜವಾದ ಶಕ್ತಿ, ಅದು ಬಾಲಯ್ಯ ಅವರ ಖಾದರ್ ಎಂದು ಅವರ ಬಗ್ಗೆ ಗುಣಗಾನ ಮಾಡಿದ್ದಾರೆ.
ಇನ್ನು ಬಾಲಯ್ಯ ಈ ಐವತ್ತು ವರ್ಷಗಳಲ್ಲಿ 108 ಸಿನಿಮಾಗಳನ್ನ ಮಾಡಿದ್ದಾರೆ. ಇನ್ನು ಎರಡು ಸಿನಿಮಾಗಳು ಸದ್ಯ ಶೂಟಿಂಗ್ ನಡೆಯುತ್ತಿವೆ. ಒಟ್ಟು 110 ಸಿನಿಮಾಗಳನ್ನ ನಂದಮೂರಿ ಬಾಲಕೃಷ್ಣ ಮಾಡಿದ್ದಾರೆ. ಸಾಕಷ್ಟು ಕಾಂಟ್ರುವರ್ಸಿಗಳನ್ನ ಮಾಡಿಕೊಂಡಿದ್ದಾರೆ. ಆದ್ರೂ ಕೂಡಾ ಅಭಿಮಾನಿಗಳ ಬಳಗ ಮಾತ್ರ ಕಮ್ಮಿಯಾಗಿಲ್ಲ.