ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪ್ರೇಯಸಿಯ ಫೋನ್ ಬ್ಯುಸಿ ಬಂದಿದ್ದಕ್ಕೆ ಗ್ರಾಮದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಪಾಗಲ್‌ ಪ್ರೇಮಿ!

ಗೆಳತಿ ತನ್ನ ಫೋನ್ ಕರೆಗಳಿಗೆ ಉತ್ತರಿಸುತ್ತಿಲ್ಲ, ಆಕೆಯ ಫೋನ್ ಯಾವಾಗಲೂ ಬ್ಯುಸಿ ಬರುತ್ತದೆ ಎಂದು ಕೋಪಗೊಂಡ ಯುವಕನೊಬ್ಬ ಸಂಪೂರ್ಣ ಗ್ರಾಮದ ವಿದ್ಯುತ್ ಕಡಿತಗೊಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಹುಚ್ಚು ಪ್ರೇಮಿಯಿಂದಾಗಿ ಸಂಪೂರ್ಣ ಗ್ರಾಮಕ್ಕೆ ವಿದ್ಯುತ್ ಕಡಿತಗೊಂಡಿತ್ತು. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಗೆಳತಿ ಫೋನ್ ಬ್ಯುಸಿ: ಕೋಪಗೊಂಡ ವ್ಯಕ್ತಿ ಮಾಡಿದ್ದೇನು ಗೊತ್ತೆ?

-

ಪಾಟ್ನಾ: ಗೆಳತಿ ತನ್ನ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಕೋಪಗೊಂಡ ಯುವಕನೊಬ್ಬ (Angry Lover) ಸಂಪೂರ್ಣ ಗ್ರಾಮದ ವಿದ್ಯುತ್ ಕಡಿತಗೊಳಿಸಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಗೆಳತಿ ತನ್ನ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ, ಆಕೆಯ ಫೋನ್‌ ಬ್ಯುಸಿ ಬರುತ್ತಿದೆ ಎಂದು ಬೇಸರಗೊಂಡ ಯುವಕ ವಿದ್ಯುತ್ ಲೈನ್ ಕಡಿತಗೊಳಿಸಿ (Power Cut) ಸಂಪೂರ್ಣ ಗ್ರಾಮವೇ ಕತ್ತಲಾಗುವಂತೆ ಮಾಡಿದ್ದಾನೆ. ಈ ಕುರಿತ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ (Viral News) ಆಗಿದ್ದು, ಅನೇಕರು ಇದೊಂದು ಹೃದಯ ವಿದ್ರಾವಕ ಸಂಗತಿ ಎಂದು ಹೇಳಿದ್ದಾರೆ.

ಪ್ರೀತಿಯಲ್ಲಿ ಬಿದ್ದವರು ಕೆಲವೊಮ್ಮೆ ಆಡುವ ನಾಟಕಗಳು ಯಾವುದೇ ಸಿನಿಮಾ ಸ್ಟೋರಿಗಿಂತ ಕಡಿಮೆ ಇರುವುದಿಲ್ಲ. ಇವರಲ್ಲಿ ಕೆಲವರು ಕೆಲವೊಮ್ಮೆ ಹುಚ್ಚುಚ್ಚಾಗಿ ವರ್ತಿಸುತ್ತಾರೆ. ತಾನು ಪ್ರೀತಿಸಿದ ಹುಡುಗಿ ಹೇಳಿದಂತೆ ಕೇಳಬೇಕು, ಅವಳು ತಾನು ಹೇಳಿದಂತೆ ಮಾಡಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಇದಕ್ಕೆ ತಪ್ಪಿದರೆ ಏನಾದರೂ ಒಂದು ರೀತಿಯ ಅನಾಹುತಗಳನ್ನು ಮಾಡುತ್ತಾರೆ. ಇಂತಹ ಒಂದು ಘಟನೆ ಬಿಹಾರದಲ್ಲಿ ನಡೆದಿದೆ.

ಯುವಕನೊಬ್ಬ ತನ್ನ ಗೆಳತಿ ಫೋನ್ ಕರೆಗೆ ಉತ್ತರಿಸುತ್ತಿಲ್ಲ ಎಂದು ಬೇಸರಗೊಂಡು ಗ್ರಾಮದ ವಿದ್ಯುತ್ ಸರಬರಾಜನ್ನೇ ಕಡಿತಗೊಳಿಸಿದ್ದಾನೆ. ಇದರಿಂದ ಇಡೀ ಗ್ರಾಮವೇ ಕತ್ತಲೆಯಲ್ಲಿ ಮುಳುಗಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಅನೇಕರು ಇದಕ್ಕೆ ನಗು ವ್ಯಕ್ತಪಡಿಸಿದರೆ ಇನ್ನು ಕೆಲವರು ಇದು ಹೃದಯ ವಿದ್ರಾವಕ ಬ್ಲಾಕೌಟ್ ಎಂದು ಕರೆದಿದ್ದಾರೆ.

ಗೆಳತಿಯ ಫೋನ್ ನಿರಂತರ ಬ್ಯುಸಿ ಬರುತ್ತಿತ್ತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಸಂಪೂರ್ಣ ಗ್ರಾಮದ ವಿದ್ಯುತ್ ಅನ್ನು ಕಡಿತಗೊಳಿಸಿದ್ದಾನೆ. ವೈರಲ್ ಆಗಿರುವ ಇದರ ವಿಡಿಯೊದಲ್ಲಿ ವ್ಯಕ್ತಿ ವಿದ್ಯುತ್ ಕಂಬದ ಬಳಿ ನಿಂತು ತಂತಿಗಳನ್ನೂ ತುಂಡರಿಸುವುದನ್ನು ಕಾಣಬಹುದು. ಆತ ವಿದ್ಯುತ್ ತಂತಿ ಕಡಿತಗೊಳಿಸಿ ಆ ಪ್ರದೇಶದಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.

ಈ ವಿಡಿಯೊ ಬಗ್ಗೆ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಆದರೂ ಇದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರ ಗಮನ ಸೆಳೆದಿದೆ. ಇದಕ್ಕೆ ಒಬ್ಬರು ಪ್ರತಿಕ್ರಿಯಿಸಿ ನಾನು ಅನೇಕ ಪ್ರೇಮಿಗಳನ್ನು ನೋಡಿದ್ದೇನೆ. ಈ ರೀತಿ ಯಾರಾದರೂ ಪ್ರೀತಿಯಲ್ಲಿ ಹುಚ್ಚರಾಗಿರುವುದು ಇದೇ ಮೊದಲು ಎಂದಿದ್ದಾರೆ. ಇನ್ನೊಬ್ಬರು ಒಬ್ಬ ಪ್ರೇಮಿ ಸಾಮಾನ್ಯವಾಗಿ ತನ್ನ ರಕ್ತನಾಳವನ್ನು ತಾನೇ ಕತ್ತರಿಸಿಕೊಳ್ಳುತ್ತಾನೆ. ಆದರೆ ಅವನು ಹಳ್ಳಿಯ ರಕ್ತನಾಳವನ್ನು ಕತ್ತರಿಸಿದ್ದಾನೆ ಎಂದಿದ್ದಾರೆ.



ಮತ್ತೊಬ್ಬರು ಅವನು ಬಾಲಿವುಡ್ ಚಲನಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ. ಮತ್ತೊಬ್ಬರು ಅವಳ ಕಾರಣದಿಂದಾಗಿ, ಇಡೀ ಗ್ರಾಮಕ್ಕೆ ಈಗ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ. ಕೆಲವರು ಈ ಘಟನೆಯನ್ನು 'ಸೈಯಾರಾ' ಚಿತ್ರದ ದೃಶ್ಯಗಳಿಗೆ ಹೋಲಿಸಿದರು.

ಇದನ್ನೂ ಓದಿ: Crime News: ಮದುವೆಯಾಗಲು ಪಟ್ಟು ಹಿಡಿದ ಪ್ರೇಯಸಿಯನ್ನು ಕೊಂದು ಘಾಟ್ನಿ ಚರಂಡಿಗೆ ಎಸೆದ ಪ್ರಿಯಕರ

ಹಿಂದೆಯೂ ನಡೆದಿತ್ತು

ಇಂತಹ ಘಟನೆ ಬಿಹಾರದಲ್ಲಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2022ರಲ್ಲಿ ಬಿಹಾರದ ಪೂರ್ಣಿಯಾ ಜಿಲ್ಲೆಯ ಗಣೇಶಪುರ ಗ್ರಾಮದ ವ್ಯಕ್ತಿಯೊಬ್ಬ ವಿದ್ಯುತ್ ಕಡಿತ ಮಾಡಿ ಕತ್ತಲೆಯಲ್ಲಿ ತನ್ನ ಗೆಳತಿಯನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದ. ಗ್ರಾಮದಲ್ಲಿ ಪ್ರತಿದಿನ ಸಂಜೆ ವಿದ್ಯುತ್ ಕಡಿತಗೊಳ್ಳುತ್ತಿತ್ತು. ಅಂತಿಮವಾಗಿ ಗ್ರಾಮಸ್ಥರಿಗೆ ಈ ವಿಚಾರ ತಿಳಿಯಿತು.