ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಗಾದಿಗೆ ( Ugadi ) ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಡಾ. ರಾಜ್ಕುಮಾರ್ ಅವರ 'ಶ್ರೀ ಚಾಮುಂಡೇಶ್ವರಿ' (shri chamundeshwari) ಹಾಡನ್ನು ಹಂಚಿಕೊಂಡಿರುವುದು ಕನ್ನಡಿಗರಿಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಖುಷಿ ತಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ (Post) ಮಾಡಿದ್ದಾರೆ.
ಇದನ್ನೂ ಓದಿ:
ಟ್ವಿಟರ್‌ನಲ್ಲಿ ಏನಿದೆ?
"ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ" ಕ್ಯಾಪ್ಷನ್ ಕೊಟ್ಟಿದ್ದಾರೆ. ‘ಶ್ರೀ ಕೃಷ್ಣದೇವರಾಯ’ ಸಿನಿಮಾ 1970ರಲ್ಲಿ ರಿಲೀಸ್ ಆಯಿತು. ಈ ಚಿತ್ರದ ‘ಶ್ರೀ ಚಾಂಮುಂಡೇಶ್ವರಿ..’ ಹಾಡು ಗಮನ ಸೆಳೆಯಿತು. ಇದನ್ನು ಮೋದಿ ಶೇರ್ ಮಾಡಿಕೊಂಡಿದ್ದಾರೆ.
‘ಶ್ರೀ ಚಾಂಮುಂಡೇಶ್ವರಿ..’ಹಾಡನ್ನು ಪಿ. ಲೀಲಾ, ಎಸ್ ಗೋವಿಂದರಾಜು ಹಾಡಿದ್ದಾರೆ. ಪ್ರಭಾಕರ ಶಾಸ್ತ್ರಿ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಟಿಜಿ ಲಿಂಗಪ್ಪ ಅವರು ಹಾಡಿಗೆ ಸಂಗೀತ ನೀಡಿದ್ದಾರೆ. ರಾಜ್ಕುಮಾರ್ ಹಾಗೂ ಭಾರತಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಯುಗಾದಿ ಶುಭಾಶಯ
ಇನ್ನು ಕನ್ನಡದಲ್ಲಿ ಪ್ರಧಾನಿ ಮೋದಿ ಯುಗಾದಿ ಶುಭಾಶಯದ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. "ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.. ಈ ಹಬ್ಬವು ನಮ್ಮ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ ಮತ್ತು ಅದೇ ಸಮಯದಲ್ಲಿ ಹೊಸ ಉತ್ಸಾಹ ಹಾಗೂ ಹೊಸ ಆರಂಭದ ಸಂಕೇತವಾಗಿದೆ" ಎಂದು ಪ್ರಧಾನಿ ಮೋದಿ ಶುಭ ಕೋರಿದ್ದರು.
ಇದನ್ನೂ ಓದಿ: Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು
"ಯುಗಾದಿಯು ಹೊಸ ವರ್ಷದ ಮುನ್ನುಡಿಯಾಗಿದ್ದು, ಮುಂಬರುವ ವರ್ಷವು ಸರ್ವರಿಗೂ ಸುಖ, ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ತರಲೆಂದು ಪ್ರಾರ್ಥಿಸುತ್ತೇನೆ. ಈ ಹೊಸ ವರ್ಷವು ಪ್ರತಿಯೊಬ್ಬರೂ ತಮ್ಮ ಗುರಿಗಳನ್ನು ಪ್ರಾಮಾಣಿಕತೆಯಿಂದ ತಲುಪಲು ಮತ್ತು ಸಮಾಜದ ಏಳಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಪ್ರೇರಣೆಯಾಗಲಿ" ಎಂದು ಬರೆದುಕೊಂಡಿದ್ದರು.