ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New OTT Releases: OTT ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್, ಈ ತಿಂಗಳು ಯಾವೆಲ್ಲಾ ಚಿತ್ರಗಳನ್ನು ನೋಡಬಹುದು?

OTT : ಡಿಸೆಂಬರ್‌ ತಿಂಗಳಲ್ಲಿ ಹೊಸ ಸಿನಿಮಾ, ಸಿರೀಸ್‌ಗಳು ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಸೋನಿಲಿವ್, ಜಿಯೋಹಾಟ್‌ಸ್ಟಾರ್, ಜೀ5 ಮತ್ತು ಸನ್ ಎನ್‌ಎಕ್ಸ್‌ಟಿಯಂತಹ ಪ್ರಮುಖ ವೇದಿಕೆಗಳಲ್ಲಿ ಸಿನಿಮಾ , ಸಿರೀಸ್‌ಗಳು ರಿಲೀಸ್‌ ಆಗುತ್ತಿವೆ. ಕೆಲವು ರಿಲೀಸ್‌ ಆಗಬೇಕಿದೆ.

ಒಟಿಟಿ ಸಿನಿಮಾಗಳು

ಡಿಸೆಂಬರ್‌ ತಿಂಗಳಲ್ಲಿ ಹೊಸ ಸಿನಿಮಾ (New Movie), ಸಿರೀಸ್‌ಗಳು ಒಟಿಟಿಗೆ (Web Series OTT) ಎಂಟ್ರಿ ಕೊಡ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಸೋನಿಲಿವ್, ಜಿಯೋಹಾಟ್‌ಸ್ಟಾರ್, ಜೀ5 ಮತ್ತು ಸನ್ ಎನ್‌ಎಕ್ಸ್‌ಟಿಯಂತಹ ಪ್ರಮುಖ ವೇದಿಕೆಗಳಲ್ಲಿ ಸಿನಿಮಾ (Movies), ಸಿರೀಸ್‌ಗಳು ರಿಲೀಸ್‌ ಆಗುತ್ತಿವೆ. ಕೆಲವು ರಿಲೀಸ್‌ ಆಗಬೇಕಿದೆ.

ಸಿಂಗಲ್‌ ಪಾಪ

ಡಿಸೆಂಬರ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗಿದೆ. ನಿರಾತಂಕದ ವ್ಯಕ್ತಿಯೊಬ್ಬ ಮಗುವನ್ನು ದತ್ತು ಪಡೆಯಲು ನಿರ್ಧರಿಸುವ ಮೂಲಕ ತನ್ನ ಸಾಂಪ್ರದಾಯಿಕ ಕುಟುಂಬಕ್ಕೆ ಆಘಾತ ನೀಡುತ್ತಾನೆ, ಇದು ಕಥೆಯ ತಿರುಳು.

ಇದನ್ನೂ ಓದಿ: OTT releases this week: ಈ ವಾರ ಒಟಿಟಿಯಲ್ಲಿ ಮಿಸ್‌ ಮಾಡದೇ ನೋಡಬಹುದಾದ ಸಿರೀಸ್‌, ಸಿನಿಮಾಗಳಿವು; ಒಂದು ಥ್ರಿಲ್ಲರ್‌, ಮತ್ತೊಂದು ಹಾರರ್‌!

ಸಾಲಿ ಮೊಹಬ್ಬತ್

ಜೋಡಿ ಕೊಲೆಯ ಕಥೆ. ಥ್ರಿಲ್ಲರ್‌ ಸಿನಿಮಾ. ಜೀ 5ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಹಕ್ ಒಟಿಟಿ

ಭಾರತದಲ್ಲಿನ ತ್ರಿವಳಿ ತಲಾಖ್ ವಿರುದ್ಧದ ಕಾನೂನು ಹೋರಾಟ ಮತ್ತು ಮಹಿಳಾ ಹಕ್ಕುಗಳ ಹೋರಾಟದ ಕಥೆಯನ್ನಾಧರಿಸಿದ ಸಿನಿಮಾ ಹಕ್‌ (Haq Movie).ಜಂಗ್ಲಿ ಪಿಕ್ಚರ್ಸ್‌ ( Junglee Pictures) ನಿರ್ಮಾಣದ ಹಕ್‌ ಸಿನಿಮಾವನ್ನ ಸುಪರ್ಣ ವರ್ಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ.

ಹಕ್ ಒಟಿಟಿ ಬಿಡುಗಡೆ ದಿನಾಂಕ

ವರದಿಗಳ ಪ್ರಕಾರ, ಈ ಸಿನಿಮಾ ಜನವರಿ 2, 2026 ರಂದು OTT ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಜಂಗ್ಲೀ ಪಿಕ್ಚರ್ಸ್ ಬೆಂಬಲಿತ ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಧಿಕೃತ ದಿನಾಂಕ ಘೋಷಣೆಗಾಗಿ ಕಾಯಲಾಗುತ್ತಿದೆ.

ಯಾಮಿ ಮತ್ತು ಇಮ್ರಾನ್ ಜೊತೆಗೆ, ಹಕ್ ವರ್ತಿಕಾ ಸಿಂಗ್, ಶೀಬಾ ಚಡ್ಡಾ ಮತ್ತು ಅಸೀಮ್ ಹತ್ತಂಗಡಿ ನಟಿಸಿದ್ದಾರೆ. ಸಿನಿಮಾದಲ್ಲಿ ವೈಯಕ್ತಿಕ ಕಾನೂನು ಮತ್ತು ಜಾತ್ಯಾತೀತ ಕಾನೂನುಗಳ ನಡುವಿನ ಸಂಘರ್ಷವನ್ನ ಕಟ್ಟಿಕೊಡಲಾಗಿದ್ದು, ಅದರಲ್ಲಿ ಸರ್ವೋಚ್ಛ ನ್ಯಾಯಾಲಯದ ಪಾತ್ರ ಮಹತ್ವದ್ದಾಗಿದೆ.ಈ ಸಿನಿಮಾ ಶಾಹ್ ಬಾನೋ ಬೇಗಂ ಅವರ ನೈಜ ಕಥೆ ಆಧರಿಸಿದ್ದು, ಇತ್ತೀಚೆಗಷ್ಟೆ ಶಾಹ್ ಬಾನೋ ಬೇಗಂ ಅವರ ಪುತ್ರಿ ಸಿದ್ದೀಖಾ ಬೇಗಂ ಚಿತ್ರ ನಿರ್ಮಾಪಕರಿಗೆ ನೋಟಿಸ್‌ ನೀಡಿದ್ದರು.



ನೋಟಿಸ್ ಪ್ರಕಾರ, ಚಿತ್ರವು ಭಾರತದ ಇತಿಹಾಸ ಪ್ರಸಿ.ದ್ಧ 1985ರ ಸುಪ್ರೀಂ ಕೋರ್ಟ್‌ ತೀರ್ಪು ಮೊಹಮ್ಮದ್ ಅಹ್ಮದ್ ಖಾನ್ ವಿರುದ್ಧ ಶಾಹ್ ಬಾನೋ ಬೇಗಂ ಪ್ರಕರಣದ ಮೇಲೆ ಆಧಾರಿತವಾಗಿದೆ. ಈ ತೀರ್ಪು ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಪೋಷಣಾ ಹಕ್ಕು ದೊರಕುವಂತೆ ಕಾನೂನಿನಲ್ಲಿ ಬದಲಾವಣೆ ತಂದಿತ್ತು. ಹಕ್ ಟ್ರೇಲರ್ ಬಿಡುಗಡೆ ನಂತರವೇ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಭುಗಿಲೆದ್ದಿತ್ತು. ಕೆಲವು ಮಂದಿ ಚಿತ್ರವು ಮುಸ್ಲಿಂ ಸಮುದಾಯದ ವಿರುದ್ಧ ನಕಾರಾತ್ಮಕ ಚಿತ್ರಣ ಬೀರಲಿದೆ ಎಂದು ಆರೋಪಿಸಿದರು.

ನಯನಂ (ವೆಬ್ ಸರಣಿ)

Zee5 ಬಿಡುಗಡೆ ದಿನಾಂಕ: ಡಿಸೆಂಬರ್ 19 ಮುಂದಿನ ವಾರ ಬಿಡುಗಡೆಯಾಗಲಿರುವ ಹೊಸ ತೆಲುಗು ವೆಬ್ ಸರಣಿ

ಕಾಂತ

ತಮಿಳು ಚಿತ್ರವನ್ನು ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಜಂಟಿಯಾಗಿ ನಿರ್ಮಿಸಿದ್ದಾರೆ. ಕಾಂತ ಚಿತ್ರದ ನಂತರದ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ತಮಿಳು ಚಿತ್ರವು ಡಿಸೆಂಬರ್ 12ರಿಂದ ಸ್ಟ್ರೀಮಿಂಗ್‌ ಆಗ್ತಿದೆ.



ಇದನ್ನೂ ಓದಿ: Mammootty: ಒಟಿಟಿಗೆ ಎಂಟ್ರಿ ಕೊಡಲಿದೆ ಮಮ್ಮುಟ್ಟಿ ಅಭಿನಯದ ಮಿಸ್ಟರಿ ಕಾಮಿಡಿ ಮೂವಿ! ಸ್ಟ್ರೀಮಿಂಗ್‌ ಎಲ್ಲಿ?

ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ 'ಕಾಂತ' ಚಿತ್ರವು 1950 ರ ದಶಕದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಡೆಯುವ ಕಥೆ. ತಮಿಳು ಚಿತ್ರರಂಗದ ಮೊದಲ ಹಾರರ್ ಚಿತ್ರದ ನಿರ್ಮಾಣದ ಸುತ್ತ ಸುತ್ತುತ್ತದೆ. ದುಲ್ಕರ್ ಸಲ್ಮಾನ್ ಟಿ.ಕೆ. ಮಹಾದೇವನ್ ಎಂಬ ಉದಯೋನ್ಮುಖ ನಟನ ಪಾತ್ರವನ್ನು ನಿರ್ವಹಿಸಿದ್ದಾರೆ.

Yashaswi Devadiga

View all posts by this author