ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Om Prakash: 3.85 ಕೋಟಿ ರೂ ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ದೂರು

Om Prakash: ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಫಿನಿಕ್ಸ್ ಸಿನಿಮಾ ನಿರ್ಮಾಣಕ್ಕೆ ಹಣ ಪಡೆದ ಆರೋಪ ಮಾಡಿ ದೂರು ನೀಡಿದ್ದಾರೆ. 3 ಕೋಟಿ 85 ಲಕ್ಷದಷ್ಟು ಹಣ ಪಡೆದಿದ್ದಾರೆ ಅಂತ ಆರೋಪ ಮಾಡಿದ್ದಾರೆ.

ಓಂ ಪ್ರಕಾಶ್‌

ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ (Om Prakash) ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಕಮಿಷನರ್ ಆಫೀಸ್‌ಗೆ ನಟ ಭಾಸ್ಕರ್ ಶೆಟ್ಟಿ (Bhaskar shetty) ದೂರು ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಫಿನಿಕ್ಸ್ ಸಿನಿಮಾ ನಿರ್ಮಾಣಕ್ಕೆ ಹಣ ಪಡೆದ ಆರೋಪ ಮಾಡಿ ದೂರು ನೀಡಿದ್ದಾರೆ. 3 ಕೋಟಿ 85 ಲಕ್ಷದಷ್ಟು ಹಣ ಪಡೆದಿದ್ದಾರೆ ಅಂತ ಆರೋಪ ಮಾಡಿದ್ದಾರೆ.

23-09-2023 ರಂದು ವ್ಯವಹಾರ ನಡೆದಿರುವ ಮಾಹಿತಿ ಇದೆ. ಆರು ತಿಂಗಳಲ್ಲಿ ಹಣ ವಾಪಾಸ್ ಕೊಡುತ್ತೀನಿ ಎಂದು ಹೇಳಿದ್ದರಂತೆ. 3 ವರ್ಷ ಕಳೆದರೂ ಹಣ ವಾಪಸ್ ನೀಡಿಲ್ಲ, ಹಣ ಕೇಳಿದಾಗ ವಿವಿಧ ಕಾರಣ ಹೇಳಿ ಕಾಲಹರಣ ಮಾಡುತ್ತಿದ್ದಾರೆಂದು ದೂರು ನೀಡಿದ್ದಾರೆ.

ಇದನ್ನೂ ಓದಿ: Arjun Rampal : ವರ್ಷಗಳ ಪ್ರೀತಿಗೆ ಕೊನೆಗೂ ಸಿಕ್ಕಿತು ಅಧಿಕೃತ ಮುದ್ರೆ; ಮದುವೆ ಆದ ನಟ ಅರ್ಜುನ್ ರಾಂಪಾಲ್

ದೂರುದಾರರ ಆರೋಪ

ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಾರೆಂದು ದೂರುದಾರರ ಆರೋಪ ಮಾಡಿದ್ದಾರೆ. ಹಣ ವಾಪಸ್ ಕೇಳಲು ಮನೆಗೆ ಹೋದಾಗ ಬೆದರಿಕೆ ಹಾಕ್ತಿದ್ದಾರೆ ಅಂತ ಫಿನಿಕ್ಸ್ ಚಿತ್ರತಂಡ ಆರೋಪ ಮಾಡ್ತಿದೆ. ದೂರುದಾರರ ಮೇಲೆಯೇ ಗಲಾಟೆ ಆರೋಪ ಹೊರಿಸಿ ಭಯಭೀತರನ್ನಾಗಿಸಿದೆ ಎಂದು ಆರೋಪಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮೂಲಕ ದೂರು ಸಲ್ಲಿಕೆ ಆಗಿದೆ.

ದೂರಿನ ಪ್ರಕಾರ, ಭಾಸ್ಕರ್ ಅವರು ಈ ಹಿಂದೆ ನಟ ದರ್ಶನ್ ಅವರ 'ಯೋಧ' ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. ಆ ಚಿತ್ರದ ಕೆಲಸದ ಮೂಲಕ ಇವರಿಬ್ಬರಿಗೂ ಪರಸ್ಪರ ಪರಿಚಯವಿತ್ತು.

ಇದನ್ನೂ ಓದಿ: Bigg Boss Kannada 13: ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?

ಓಂ ಪ್ರಕಾಶ್ ರಾವ್ ಅವರು ಮತ್ತೊಂದು ಚಿತ್ರಕ್ಕಾಗಿ ಆರ್ಥಿಕ ನೆರವು ಕೋರಿದಾಗ, ಈ ಹಿಂದಿನ ವೃತ್ತಿಪರ ಪರಿಚಯದ ಕಾರಣದಿಂದಾಗಿ ಭಾಸ್ಕರ್ ಅವರು ನಿರ್ದೇಶಕರನ್ನು ನಂಬಿದ್ದರು ಎಂದು ಆರೋಪಿಸಲಾಗಿದೆ.

Yashaswi Devadiga

View all posts by this author