ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ನಾಯಕಿಯಾದ ʻಪಾರುʼ ಖ್ಯಾತಿಯ ಮೋಕ್ಷಿತಾ ಪೈ; ಹೀರೋ ಆಗಿ ಬಂದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌ ಪುತ್ರ ಭರತ್

‘ಪಾರು’ ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಹಾಗೂ ಭರತ್ ಕುಮಾರ್ ಮುಖ್ಯ ಭೂಮಿಕೆಯ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಎರಡು ಹಾಡುಗಳು ಅದ್ಧೂರಿಯಾಗಿ ಬಿಡುಗಡೆಯಾಗಿವೆ. ಉಮೇಶ್ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಾಣ್ ಸುವರ್ಣ ನಿರ್ದೇಶನ ಮಾಡಿದ್ದು, ಲಹರಿ ಸಂಸ್ಥೆ ಇದರ ಆಡಿಯೋ ಹಕ್ಕನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

ಭರತ್ ಕುಮಾರ್ ಹಾಗೂ ಮೋಕ್ಷಿತಾ ಪೈ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಉಮೇಶ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಬಹುನಿರೀಕ್ಷಿತ ಎರಡು ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಎನ್. ಹನುಮಂತರಾಜು ಮತ್ತು ಎನ್.ಹೆಚ್. ಉಮೇಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಾಣ್ ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಸುನಾದ್ ಗೌತಂ ಸಂಗೀತ ಸಂಯೋಜಿಸಿದ್ದಾರೆ.

ರುಕ್ಮಿಣಿ ಮತ್ತು ಕೃಷ್ಣನ ನಡುವಿನ ಆತ್ಮವೇ ರಾಧಾ

ನಾಯಕ ನಟ ಭರತ್ ಕುಮಾರ್ ಮಾತನಾಡಿ, "ಲಹರಿ ವೇಲು ಅವರು ನಮ್ಮ ಚಿತ್ರದ ಹಾಡುಗಳನ್ನು ಮೆಚ್ಚಿಕೊಂಡು ಒಳ್ಳೆಯ ಮೊತ್ತಕ್ಕೆ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ. ಇನ್ನು ರಾಧಾ ಪಾತ್ರಕ್ಕೆ ನಮ್ಮ ತಾಯಿಯವರ ಸಲಹೆಯ ಮೇರೆಗೆ ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಅವರನ್ನು ಆಯ್ಕೆ ಮಾಡಿದೆವು. ಕೃಷ್ಣನಿಗೆ ರುಕ್ಮಿಣಿ ಸಂಗಾತಿಯಾದರೂ, ರಾಧಾ ಆತನ ಆತ್ಮವಾಗಿದ್ದಾಳೆ ಎಂಬ ವಿಶಿಷ್ಟ ಎಳೆಯನ್ನು ಈ ಸಿನಿಮಾ ಹೊಂದಿದೆ" ಎಂದು ಹೇಳಿದರು.

ರಾಧಾ ಪಾತ್ರವನ್ನು ನಾನು ಆಯ್ಕೆ ಮಾಡಿಕೊಂಡೆ

ನಾಯಕಿ ಮೋಕ್ಷಿತಾ ಪೈ ಮಾತನಾಡಿ, "ನನಗೆ ಕಥೆ ಹೇಳಿದಾಗ ಅದರ ಇಂಟೆನ್ಸಿಟಿ ಇಷ್ಟವಾಗಿ ನಾನೇ ರಾಧಾ ಪಾತ್ರವನ್ನು ಆಯ್ಕೆ ಮಾಡಿಕೊಂಡೆ. ರುಕ್ಮಿಣಿ ಇಲ್ಲದೆ ರಾಧಾ ಇಲ್ಲ. ತಮಿಳುನಾಡಿನ ಕುಂಭಕೋಣಂನಲ್ಲಿ ಈ ಹಾಡನ್ನು ಅತ್ಯಂತ ಸುಂದರವಾಗಿ ಚಿತ್ರೀಕರಿಸಲಾಗಿದೆ" ಎಂದರು. ಚಿತ್ರದಲ್ಲಿ ರುಕ್ಮಿಣಿ ಪಾತ್ರ ಪೋಷಿಸಿರುವ ನಟಿ ಹಾಗೂ ಮಾಡೆಲ್ ರಿಯಾ ಸಚ್ ದೇವ್, ತನ್ನ ಮೇಲೆ ನಂಬಿಕೆಯಿಟ್ಟು ಇಂತಹದೊಂದು ಪ್ರಮುಖ ಪಾತ್ರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು.

Jagadhatri Serial: 'ಜಗದ್ಧಾತ್ರೀ' ಅವತಾರದಲ್ಲಿ ಮೋಕ್ಷಿತಾ ಪೈ; ಮುಗಿಯುತ್ತಿರುವ ಸೀರಿಯಲ್‌ ಯಾವುದು?

ಚಿತ್ರೀಕರಣದ ಕೊನೆಯ ಹಂತದಲ್ಲಿ ಸಿನಿಮಾ

ನಿರ್ದೇಶಕ ಪ್ರಾಣ್ ಸುವರ್ಣ ಮಾತನಾಡಿ, "ಭರತ್ ನೀಡಿದ ಒಂದು ಲೈನ್ ಕಥೆಯನ್ನು ಇಟ್ಟುಕೊಂಡು ಈ ಸ್ಕ್ರಿಪ್ಟ್ ಮಾಡಿದ್ದೇನೆ. ತಮಿಳುನಾಡಿನ ಕುಂಭಕೋಣಂ ಸುತ್ತಮುತ್ತ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ನಡೆದಿದೆ" ಎಂದ ಅವರು ಕಲ್ಯಾಣ್ ಅವರ ಸಾಹಿತ್ಯದ ವೇಗವನ್ನು ಕೊಂಡಾಡಿದರು. ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಉಮೇಶ್, "ಸದ್ಯ ಚಿತ್ರದ ಶೇಕಡ 90 ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಕೇವಲ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ" ಎಂದು ತಿಳಿಸಿದರು.

ಹಾಡುಗಳ ಚಿತ್ರೀಕರಣ ಅದ್ಭುತವಾಗಿದೆ ಎಂದ ಲಹರಿ ವೇಲು

ಚಿತ್ರದ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಲಹರಿ ಸಂಸ್ಥೆಯ ವೇಲು ಅವರು, "ಈ ಸಿನಿಮಾದಲ್ಲಿ ಒಟ್ಟು ಐದು ಸುಂದರವಾದ ಹಾಡುಗಳಿದ್ದು, ಅವುಗಳನ್ನು ಅಷ್ಟೇ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಲಹರಿ ಸಂಸ್ಥೆ ಈ ಚಿತ್ರದ ಹಾಡುಗಳ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ" ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

Mokshitha Pai: ಬಿಳಿ ಬಣ್ಣದ ಕೋ-ಆರ್ಡ್ ಡ್ರೆಸ್​ನಲ್ಲಿ ಅಪ್ಸರೆಯಂತೆ ಕಂಡ ಮೋಕ್ಷಿತಾ ಪೈ

ಕನ್ನಡ-ತಮಿಳು ಭಾಷೆಯ ವಿಶಿಷ್ಟ ಜುಗಲ್‌ಬಂದಿ

ೀ ಚಿತ್ರದ ಹಾಡುಗಳನ್ನು ಬರೆದಿರುವ ಪ್ರಖ್ಯಾತ ಸಾಹಿತಿ ಕೆ.ಕಲ್ಯಾಣ್ ಮಾತನಾಡಿ, "ನಿರ್ಮಾಪಕರಲ್ಲಿರುವ ಸಿದ್ಧತೆ ಹಾಗೂ ನಿರ್ದೇಶಕರಲ್ಲಿರುವ ಬದ್ಧತೆ ಈ ಹಾಡುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಕಥೆಯಲ್ಲಿ ನಾಯಕಿಯ ಪಾತ್ರಕ್ಕೆ ತಮಿಳುನಾಡಿನ ಹಿನ್ನೆಲೆ ಇರುವುದರಿಂದ, ಅದಕ್ಕೆ ತಕ್ಕಂತೆ ತಮಿಳು ಮತ್ತು ಕನ್ನಡ ಭಾಷೆಯನ್ನು ಸಮ್ಮಿಳಿತಗೊಳಿಸಿ ಒಂದು ವಿಶೇಷ ಹಾಡನ್ನು ರಚಿಸಿದ್ದೇನೆ" ಎಂದರು.