ನಟಿ ಪದ್ಮಜಾ ರಾವ್ (Padmaja Rao) ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು (Cinema) ಮಾಡಿದ್ದಾರೆ. ಧಾರಾವಾಹಿಗಳಲ್ಲೂ ಪದ್ಮಜಾ ನಟಿಸಿದ್ದಾರೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯಾಳ ಅತ್ತೆ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರದ ಮೂಲಕವೇ ಸಖತ್ ಸದ್ದು ಮಾಡುತ್ತಿದ್ದಾರೆ. ಆದರೆ ನಟಿಯ ಬದುಕಿನಲ್ಲಿ ಹಲವು ಏರಿಳತಗಳನ್ನು ಕಂಡಿದ್ದಾರೆ. ಒಬ್ಬಂಟಿ ತಾಯಿಯಾಗಿ (Mother) ಅವರು ಎದರಿಸಿದ ಸವಾಲುಗಳು ಬಗ್ಗೆ ಮುಕ್ತವಾಗಿ ಸಂದರ್ಶನವೊಂದರಲ್ಲಿ (Interview) ಮಾತನಾಡಿದ್ದಾರೆ.
ಸಣ್ಣ ವಯಸ್ಸಿಗೆ ಮದುವೆ
ನನ್ನ ಫ್ಯೂಚರ್ ಸೆಕ್ಯೂರ್ ಮಾಡಿಕೊಳ್ಳಲು ಅದು ಅಗತ್ಯವಾಗಿತ್ತು. ಸಣ್ಣ ವಯಸ್ಸಿಗೆ ಮದುವೆ ಆದೆ. ಖುಷಿಯಿಂದಲೇ ಮದುವೆ ಆದೆ. ಧಾರಾವಾಹಿ ಮಾಡಲು ಅಮ್ಮ ಅವಕಾಶ ಕೊಡ್ತಾ ಇರಲಿಲ್ಲ. ಮದುವೆ ಆದ ಬಳಿಕ ನಟಿಸಬಹುದು ಎಂದುಕೊಂಡಿದ್ದೆ. ಆದರೆ, ಹಾಗಾಗಿಲ್ಲ.
ಇದನ್ನೂ ಓದಿ: Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ
2026ರಲ್ಲಿ ನನಗೆ ಲೈಫ್ ಅಂದರೆ ಏನು ಅಂತಂದರೆ, ನನ್ನ ದೇವರೊಂದಿಗೆ ಸಮಯ ಕಳೆಯುವುದು. ನನ್ನ ಮಗನ ಜೊತೆ ಸಮಯ ಕಳೆಯುವುದು. ಸಣ್ಣ ವಯಸ್ಸಿನಲ್ಲಿ ಒಂದೇ ಕ್ಲ್ಯಾರಿಟಿ ಇದ್ದಿದ್ದು, ನಾನು ನಟಿಯಾಗಬೇಕು ಅಂತ. ಇನ್ಯಾವುದರಲ್ಲಿ ಕ್ಲ್ಯಾರಿಟಿ ಇರ್ಲಿಲ್ಲ” ಎಂದಿದ್ದಾರೆ ಪದ್ಮಜಾ ರಾವ್.
ಮೊದಲ ಮದುವೆ ವರ್ಕ್ ಆಗಲಿಲ್ಲ
ಮೊದಲ ಮದುವೆ ವರ್ಕ್ ಆಗಲಿಲ್ಲ. ಆದರೆ, ಮೊದಲ ಮದುವೆಯಲ್ಲಿ, ಜೀವನದಲ್ಲಿ ಬ್ಯೂಟಿಫುಲ್ ಗಿಫ್ಟ್ ನನಗೆ ಸಿಕ್ಕಿದ್ದು ಅಂತಂದರೆ, ನನ್ನ ಮಗ ಸಂಜೀವ್. ಹಾಗಾಗಿ, ಆ ಮದುವೆ ಬಗ್ಗೆ ರಿಗ್ರೇಟ್ ಇಲ್ಲ. ಮದುವೆ ಆದ್ಮೇಲೆ ಇಲ್ಲಿ ನನ್ನ ಕನಸು ಸಾಕಾರ ಆಗ್ತಿಲ್ಲ ಅಂತ ನನಗೆ ಯಾವಾಗ ಗೊತ್ತಾಗೋಕೆ ಶುರುವಾಯ್ತೋ ನಾನು ಆ ವಿವಾಹ ಬಂಧನದಿಂದ ಹೊರನಡೆದೆ. ನನಗೆ ನಟಿಯಾಗೋ ಹುಚ್ಚು, ಅಲ್ಲಿಂದ ಅದಕ್ಕೆ ಬೇಕಾದ ತಯಾರಿಗಳನ್ನ ಸೀರಿಯಸ್ ಆಗಿ ಮಾಡಿದೆ” ಎಂದರು ಪದ್ಮಜಾ ರಾವ್.
ನನ್ನ ಮಗ ಸಂಜೀವ್‌ನ ನೋಡ್ದಾಗ, ನನ್ನೆಲ್ಲಾ ನೋವುಗಳನ್ನ ಮರೆತು ಹೋಗ್ತೀನಿ. ನನ್ನ ಹತ್ತಿರ ಕೆಲಸ ಇರ್ಲಿಲ್ಲ, ದುಡ್ಡು ಇರ್ಲಿಲ್ಲ. ನನ್ನ ಇಬ್ಬರು ತಂಗಿಯರು ಸಣ್ಣ-ಸಣ್ಣ ಕೆಲಸದಲ್ಲಿದ್ದರು. ಅವರಿಗೆ ಆಗಿನ್ನೂ ಮದುವೆಯಾಗಿಲಿರಲ್ಲ. ಅದರಲ್ಲೇ ನಾವು ಜೀವನ ಮಾಡಿಕೊಂಡು, ಆ ದಿನಗಳು ತುಂಬಾ ಕಠಿಣವಾಗಿದ್ದವು ಮಗುವನ್ನ ಸ್ಕೂಲಿಗೆ ಕಳಿಸಬೇಕು, ಫೀಸ್ ಕಟ್ಬೇಕು. ನಾನು ಗಟ್ಟಿ ಮನಸ್ಸು ಮಾಡಿ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿಬಿಟ್ಟಿದ್ದೆ.
ಇದನ್ನೂ ಓದಿ: Abhishek Bachchan: ನಮ್ಮ ಮನೆಯಲ್ಲಿ ಗಂಡು ಹೆಣ್ಣು ಎಂಬ ಸ್ಪರ್ಧೆಯೇ ಇಲ್ಲ! ಅಭಿಷೇಕ್ ಬಚ್ಚನ್ ನೇರ ಮಾತು
ನಾಗಾಭರಣ ಅವರ ಪರಿಚಯ ಆಯ್ತು, ʻಓ ನನ್ನ ಬೆಳಕೇʼ ಧಾರಾವಾಹಿಯಲ್ಲಿ ಚಾನ್ಸ್ ಕೊಟ್ಟರು. ಒಂದಷ್ಟು ಧಾರಾವಾಹಿಗಳನ್ನ ಮಾಡಿದೆ. ನಂತರ ʻಮೂಡಲ ಮನೆʼ ಸಿಕ್ತು. ಅದಾದ ಮೇಲೆ ಹಠವಾದಿ, ಮುಂಗಾರು ಮಳೆ, ಗಾಳಿಪಟ, ಉಗ್ರಂ ಮತ್ತು ಇವತ್ತು ಭಾಗ್ಯಲಕ್ಷ್ಮೀ ಎಲ್ಲವೂ ನನಗೆ ತುಂಬಾ ಹೆಸರು ತಂದುಕೊಟ್ಟಿದೆ.